ವೀಕ್ಷಕರ ಮನಸ್ಸು ಗೆದ್ದ ಅಂತರಪಟ

Team Udayavani, May 3, 2023, 3:01 PM IST

ವೀಕ್ಷಕರ ಮನಸ್ಸು ಗೆದ್ದ ಅಂತರಪಟ

ಕೆಲವು ಧಾರಾವಾಹಿಗಳು ಆರಂಭದ ದಿನದಿಂದಲೇ, ಮೊದಲ ಎಪಿಸೋಡ್‌ ನಿಂದ ಪ್ರೇಕ್ಷಕರ ಮನಸ್ಸು ಗೆದ್ದು ಮುಂದೆ ಸಾಗುತ್ತವೆ. ಈಗ ಆ ಸಾಲಿಗೆ ಹೊಸ ಧಾರಾವಾಹಿಯೊಂದು ಸೇರಿಕೊಂಡಿದೆ. ಅದು ಅಂತರಪಟ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಏ.24ರಿಂದ ಪ್ರಾರಂಭವಾಗಿರುವ ಈ ಧಾರಾವಾಹಿ ಈಗ ಹೊಸ ಕಥಾಹಂದರದ ಮೂಲಕ ಮೆಚ್ಚುಗೆ ಗಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ರೆಗ್ಯುಲರ್‌ ಕಥಾಹಂದರ ಬಿಟ್ಟು ಪ್ರಸಾರವಾಗುತ್ತಿರುವುದೇ ಈ ಜನಪ್ರಿಯತೆಗೆ ಕಾರಣ. ಕಥಾಹಂದರದ ಬಗ್ಗೆ ಹೇಳುವುದಾದರೆ,ಮಲ ತಂದೆಯ ಕಾಟ ಎದುರಿಸುತ್ತಾ ಮನೆಯ ಜವಾಬ್ದಾರಿಯನ್ನೂ ಹೊತ್ತಿರುವ ಆರಾಧನಾಳಿಗೆ ಒಂದು ದೊಡ್ಡ ವೆಡ್ಡಿಂಗ್‌ ಪ್ಲಾನಿಂಗ್‌ ಕಂಪೆನಿ ಕಟ್ಟುವ ಕನಸು. ನೂರಾರು ಅಡ್ಡಿಗಳನ್ನು ಎದುರಿಸಿ ಆಕೆ ತನ್ನ ಕನಸನ್ನು ನನಸು ಮಾಡುತ್ತಾಳಾ ಎಂಬ ಕುತೂಹಲವೇ ಆರಾಧನಾಳನ್ನ ವೀಕ್ಷಕರ ಮನಸಿಗೆ ಹತ್ತಿರವಾಗಿಸಿದೆ.

ಬಹುದಿನಗಳ ನಂತರ ವಟಾರದ ಬದುಕನ್ನು ಸೊಗಸಾಗಿ ಹಿಡಿದಿಟ್ಟಿರುವುದು ಕೂಡ ಅಂತರಪಟದ ವಿಶೇಷತೆಗಳಲ್ಲೊಂದು. ನಿರ್ದೇಶಕಿ ಸ್ವಪ್ನಾಕೃಷ್ಣ ಅವರ ಕಲ್ಪನೆಯಲ್ಲಿ ಅರಳುತ್ತಿರುವ ಆರಾಧನಾಳ ಕತೆಯಲ್ಲಿ ಸುಶಾಂತ್‌ ಎಂಬ ಆಗರ್ಭ ಶ್ರೀಮಂತ ಹುಡುಗನೂ ಇದ್ದಾನೆ. ಕನಸಿದ್ದು ಕಾಸಿಲ್ಲದ ಹುಡುಗಿ ಆರಾಧನಾ ಆದರೆ, ಕಾಸಿದ್ದು ಕನಸೇ ಇಲ್ಲದ ಹುಡುಗ ಸುಶಾಂತ್‌. ಅಂಥ ಎರಡು ವಿರುದ್ಧ ಧ್ರುವಗಳು ಮುಖಾಮುಖಿಯಾದಾಗ ಬದುಕು ಪಡೆದುಕೊಳ್ಳುವ ಹೊಸ ವಿನ್ಯಾಸವೇ ಇಲ್ಲಿನ ಕತೆ…

ಈ ತರಹದ ಹೊಸ ಕಥೆ ಈಗ ಮನೆಮಂದಿಯ ಮನಸ್ಸು ಗೆದ್ದಿದೆ. ಅಂತರಪಟದಲ್ಲಿ ಬಿಗ್‌ಬಾಸ್‌ ಖ್ಯಾತಿಯ ಮಂಜು ಪಾವಗಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ.

ಮಜಾ ಭಾರತದಲ್ಲಿ ನಕ್ಕುನಕ್ಕು ಸುಸ್ತಾಗುವಂತೆ ಮಾಡುತ್ತಿದ್ದ ಮಂಜು ಇಲ್ಲಿ ಮಗಳನ್ನು ಸತಾಯಿಸುವ ತಂದೆಯ ಪಾತ್ರದಲ್ಲಿ ಹೊಸ ಮಂಜು ಅಗಿ ಕಾಣಿಸಿಕೊಂಡಿದ್ದಾರೆ.ಅವರ ಜೊತೆಗೆ ಬಿಗ್‌ಬಾಸ್‌ನಿಂದಲೇ ಮನೆಮಾತಾದ ದೀಪಿಕಾದಾಸ್‌ ಕೂಡಾ ಅಂತರಪಟದ ತಾರಾಗಣದಲ್ಲಿದ್ದಾರೆ. ಮೊದಲ ವಾರದಲ್ಲೇ ದೀಪಿಕಾ ಅವರ ಪಾತ್ರವೂ ವೀಕ್ಷಕರ ಮನಸೂರೆಗೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿರುವ ಪ್ರತಿಕ್ರಿಯೆಯಿಂದ ಸಾಬೀತಾಗಿದೆ.

ಈಗಾಗಲೇ ವೀಕ್ಷಕರ ಮನಸ್ಸಿಗೆ ಲಗ್ಗೆಯಿಟ್ಟಿರುವ ಅಂತರಪಟ ಬರುವ ವಾರಗಳಲ್ಲಿ ಮಹತ್ವದ ತಿರುವುಗಳನ್ನು ತೆಗೆದು ಕೊಳ್ಳುತ್ತಾ ಇನ್ನಷ್ಟು ನಿಮ್ಮ ಮನಸ್ಸಿನಾಳಕ್ಕೆ ಇಳಿ ಯಲಿದೆ ಎಂಬ ಭರವಸೆ ನಿರ್ದೇಶಕರದ್ದು. ಸದ್ಯದ ಮೆಚ್ಚುಗೆ ನೋಡಿದಾಗ ಅಂತರ ಪಟ ಕನ್ನಡ ಕಿರುತೆರೆ ಲೋಕದಲ್ಲಿ ನೆನಪಿನಲ್ಲಿ ಉಳಿಯುವ ಧಾರಾವಾಹಿ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತರಪಟ ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಪ್ರತೀ ರಾತ್ರಿ 8.30ಗೆ ಮೂಡಿಬರುತ್ತಿದೆ.

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.