“ಅಮ್ಮ’ನಾದ ಅನುಪ್ರಭಾಕರ್ ಮುಖರ್ಜಿ
Team Udayavani, Aug 16, 2018, 2:19 PM IST
ಸ್ಯಾಂಡಲ್ವುಡ್ನ ನಟಿ ಅನುಪ್ರಭಾಕರ್ ಮುಖರ್ಜಿ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.
ಸ್ವಾತಂತ್ರ್ಯದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕುರಿತು ಆಕೆಯ ಪತಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋವನ್ನ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೇ ಮಗು ಹಾಗೂ ಅನು ಪ್ರಭಾಕರ್ ಇಬ್ಬರೂ ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ರಘು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ರಘು ಅವರ ಪೋಸ್ಟ್ ಗೆ ಹಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಅಭಿಮಾನಿಗಳು ಮಗುವಿನ ಫೋಟೋ ನಿರೀಕ್ಷೆಯಲ್ಲಿದ್ದೇವೆ ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ನಟಿ ಅನು ಪ್ರಭಾಕರ್ ಹಾಗೂ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.