ನಿನ್ನ ಡೆಡಿಕೇಶನ್… ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್ ಡೇ ವಿಶ್ ಮಾಡಿದ ಅನೂಪ್!
ವಿಂಡೋ ಸೀಟ್ ಹಾಗೂ ಇತ್ತೀಚೆಗೆ ತೆರೆಕಂಡ ʼವಿಕ್ರಾಂತ್ ರೋಣʼದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Team Udayavani, Aug 13, 2022, 3:58 PM IST
ಬೆಂಗಳೂರು: ಸ್ಯಾಂಡಲ್ ವುಡ್ ನಟ ನಿರೂಪ್ ಭಂಡಾರಿ ಅವರಿಗಿಂದು 38ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ʼವಿಕ್ರಾಂತ್ ರೋಣʼ ಯಶಸ್ಸಿನ ಖುಷಿಯಲ್ಲಿ ನಿರೂಪ್ ಇದ್ದಾರೆ.
ಹುಟ್ಟುಹಬ್ಬಕ್ಕೆ ನೂರಾರು ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಸೆಲೆಬ್ರಿಟಿಗಳು ಬರ್ತ್ ಡೇ ವಿಶ್ ಮಾಡಿ ಶುಭ ಹಾರೈಸಿದ್ದಾರೆ. ನಿರೂಪ್ ಭಂಡಾರಿ ಅವರ ಅಣ್ಣ ನಿರ್ದೇಶಕ ಅನೂಪ್ ಭಂಡಾರಿ ತಮ್ಮನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
ʼರಂಗಿತರಂಗʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿರೂಪ್ ಇದುವರೆಗೆ ʼರಾಜರಥ, ʼಆದಿಲಕ್ಷ್ಮಿ ಪುರಾಣʼ, ʼವಿಂಡೋ ಸೀಟ್ ಹಾಗೂ ಇತ್ತೀಚೆಗೆ ತೆರೆಕಂಡ ʼವಿಕ್ರಾಂತ್ ರೋಣʼದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ವಿವಾದದ ಹೇಳಿಕೆಯೇ ʼಲಾಲ್ ಸಿಂಗ್ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್ ಆದ್ರು ಬೇಬೋ
ನಿರೂಪ್ ಪಾತ್ರಕ್ಕಾಗಿ ಎಷ್ಟು ತಯಾರಿ ನಡೆಸುತ್ತಾರೆ. ನಿಷ್ಠೆಯಿಂದ ಪಾತ್ರವನ್ನು ನಿಭಾಯಿಸುತ್ತಾರೆ ಎಂಬುವುದನ್ನು ಅನೂಪ್ ಭಂಡಾರಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ʼರಂಗಿತರಂಗʼ ಶೂಟಿಂಗ್ ಸಂದರ್ಭದಲ್ಲಿ ಬಹುತೇಕ ಬುರುಡೆ ಬಿರುಕು ಬಿಟ್ಟಿತ್ತು. ʼರಾಜರಥʼದಲ್ಲಿ ಕೈ ಮುರಿದಿದ್ದು, ʼವಿಕ್ರಾಂತ್ ರೋಣʼ ಸಂದರ್ಭದಲ್ಲಿ ಅನೇಕ ಗಾಯಗಳಾಗಿತ್ತು. ಇಷ್ಟೆಲ್ಲಾ ಆದರೂ ಸಿನಿಮಾಕ್ಕಾಗಿ ಎಲ್ಲವನ್ನೂ ಅರ್ಪಿಸುತ್ತಾನೆ. ಈ ಡೆಡಿಕೇಶನ್ ನಿನ್ನನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿʼ ಎಂದು ಹೇಳಿ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಒಟ್ಟು 5 ಸಿನಿಮಾಗಳಲ್ಲಿ ನಿರೂಪ್ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ʼವಿಕ್ರಾಂತ್ ರೋಣʼದಲ್ಲಿನ ಅವರ ಪಾತ್ರಕ್ಕೆ ಶಹಬ್ಬಾಸ್ ಗಿರಿ ವ್ಯಕ್ತವಾಗಿತ್ತು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.