ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್
Team Udayavani, Mar 30, 2023, 12:35 PM IST
ಹಿಂದಿ ಚಿತ್ರರಂಗದ ಜನಪ್ರಿಯ ನಟ ಅನುಪಮ್ ಖೇರ್ ಇದೀಗ ಶಿವರಾಜಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ “ಘೋಸ್ಟ್’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅನುಪಮ್ ಖೇರ್ ಕನ್ನಡ ಚಿತ್ರರಂಗಕ್ಕೂ ಪರಿಚಯವಾಗುತ್ತಿದ್ದಾರೆ.
ಅಂದಹಾಗೆ, “ಘೋಸ್ಟ್’ ಅನುಪಮ್ ಖೇರ್ ಅಭಿನಯದ 535ನೇ ಸಿನಿಮಾ. ಹಿಂದಿ ಸಿನಿಮಾಗಳ ಜೊತೆಗೆ ಈಗಾಗಲೇ ದಕ್ಷಿಣ ಭಾರತದ ಮಲಯಾಳಂ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ಬಣ್ಣ ಹಚ್ಚಿರುವ ಅನುಪಮ್ ಖೇರ್ ಅವರಿಗೆ “ಘೋಸ್ಟ್’ ಮೊದಲ ಕನ್ನಡ ಸಿನಿಮಾ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿರುವ “ಘೋಸ್ಟ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅನುಪಮ್ ಖೇರ್, ತಮ್ಮ ಮೊದಲ ಕನ್ನಡ ಸಿನಿಮಾದ ಬಗ್ಗೆ ಒಂದಷ್ಟು ಮಾತುಗಳನ್ನಾಡಿದ್ದಾರೆ.
“ಸಿನಿಮಾಕ್ಕೆ ಎಂದಿಗೂ ಭಾಷೆ ಅಡ್ಡಿ ಬರುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಅಳು, ನಗು, ನೋವು ಹೀಗೆ ಎಲ್ಲ ಭಾವನಾತ್ಮಕ ಅಂಶಗಳೂ ಎಲ್ಲ ಭಾಷೆಗಳಲ್ಲೂ ಒಂದೇ ಆಗಿರುತ್ತದೆ. ಅದಕ್ಕೆ ಭಾಷೆಯ ಭೇದ ಇರುವುದಿಲ್ಲ. ಸಿನಿಮಾ ಕೂಡ ಹಾಗೆಯೇ. ಸಿನಿಮಾಗಳನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್, ಅಂಥ ಬೇರೆ ಬೇರೆಯಾಗಿ ನೋಡುವುದು ಸರಿಯಲ್ಲ. ಭಾರತದಲ್ಲಿ ತಯಾರಾಗುವ ಸಿನಿಮಾಗಳನ್ನು ಭಾರತೀಯ ಸಿನಿಮಾಗಳು ಅಂಥ ನೋಡುವುದು ಸೂಕ್ತ. ನನ್ನ ಮಟ್ಟಿಗೆ ಹೇಳುವುದಾದರೆ, ಯಾವುದೇ ಭಾಷೆಯ ಸಿನಿಮಾಗಳಲ್ಲಿ ನನಗೆ ತಾರತಮ್ಯವಿಲ್ಲ. ಈಗಾಗಲೇ ಹಿಂದಿ, ತೆಲುಗು, ತಮಿಳು, ಮಲೆಯಾಳಂ, ಬೆಂಗಾಳಿ, ಮರಾಠಿ ಹೀಗೆ ಎಲ್ಲ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿದ್ದೇನೆ. ಕನ್ನಡ ಸಿನಿಮಾದಲ್ಲೂ ಅಭಿನಯಿಸಬೇಕು ಎಂಬ ಆಸೆಯಿತ್ತು. ಆ ಆಸೆ ಈಗ “ಘೋಸ್ಟ್’ ಸಿನಿಮಾದ ಮೂಲಕ ಈಡೇರಿದೆ’ ಎಂಬುದು ಅನುಪಮ್ ಖೇರ್ ಮಾತು.
ಇನ್ನು “ಘೋಸ್ಟ್’ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ? ಎಂಬ ಪ್ರಶ್ನೆಗೆ, “ಸಿನಿಮಾದ ಕಥೆಗೆ ತಿರುವು ನೀಡುವಂಥ ಪಾತ್ರ ನನ್ನದು. ಪಾತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಆದರೆ ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಈಗಲೇ ಹೆಚ್ಚೇನೂ ಮಾಹಿತಿ ನೀಡಬಾರದು ಎಂದು ತಿಳಿಸಿರುವುದರಿಂದ, ನನ್ನ ಪಾತ್ರದ ಬಗ್ಗೆ ಹೆಚ್ಚು ವಿವರಣೆ ಕೊಡುವುದು ಸೂಕ್ತವಲ್ಲ’ ಎಂಬ ಉತ್ತರ ಅನುಮಪ್ ಖೇರ್ ಅವರದ್ದು.
Happy to ANNOUNCE: My 535th project is a Kannada film #GHOST with the great #ShivaRajkumar directed by #Srini & produced by #SandeshProductions. 😍🎬
ನನ್ನ ಅಭಿನಯದ 535ನೇ ಚಿತ್ರ ಶ್ರೀನಿ ನಿರ್ದೇಶನದ ” ಘೋಸ್ಟ್ ” , ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರೊಂದಿಗೆ , ಸಂದೇಶ್ ಪ್ರೋಡ್ಯೂಕ್ಷನ್ಸ್ ಅವರ… pic.twitter.com/h3SWPyRbec— Anupam Kher (@AnupamPKher) March 29, 2023
“ಸುಮಾರು ಹತ್ತು ವರ್ಷಗಳ ಹಿಂದೆಯೇ ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಆಫರ್ ಬಂದಿತ್ತು. ಆದರೆ ಸಮಯದ ಹೊಂದಾಣಿಕೆ ಮತ್ತಿತರ ಕಾರಣಗಳಿಂದ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೂಮ್ಮೆ “ಘೋಸ್ಟ್’ ಸಿನಿಮಾದ ಮೂಲಕ ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ಸಿನಿಮಾದ ಸ್ಕ್ರಿಪ್ಟ್ ಮತ್ತು ಪಾತ್ರ ಇಷ್ಟವಾಗಿದ್ದರಿಂದ, “ಘೋಸ್ಟ್’ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡೆ’ ಎನ್ನುವುದು ಅನುಪಮ್ ಖೇರ್ ಮಾತು.
ಅಂದಹಾಗೆ, ಶ್ರೀನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಘೋಸ್ಟ್’ ಸಿನಿಮಾವನ್ನು ಸಂದೇಶ್ ನಾಗರಾಜ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಶಿವರಾಜಕುಮಾರ್, ಅನುಪಮ್ ಖೇರ್ ಅವರೊಂದಿಗೆ ಮಲೆಯಾಳಂ ನಟ ಜಯರಾಮ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.