ಅನುಷ್ಕಾ ಬರ್ತ್‌ಡೇಗೆ “ಭಾಗಮತಿ’ ಗಿಫ್ಟ್
Team Udayavani, Nov 7, 2017, 2:52 PM IST
ಖ್ಯಾತ ಬಹುಭಾಷಾ ನಟಿ “ಬಾಹುಬಲಿ’ಯ “ದೇವಸೇನಾ’ ಅನುಷ್ಕಾ ಶೆಟ್ಟಿಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರ ‘ಭಾಗಮತಿ’ಯ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಕರ್ನಾಟಕದ ಕರಾವಳಿ ಭಾಗದವರಾದ ಅನುಷ್ಕಾ ಶೆಟ್ಟಿ ಟಾಲಿವುಡ್ ಚಿತ್ರರಂಗಕ್ಕೆ 2005ರಲ್ಲಿ ಪ್ರವೇಶಿಸಿದ್ದರಲ್ಲದೇ ಅವರ ನಟನೆಯಿಂದಲೇ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.
ಮುಖ್ಯವಾಗಿ “ಬಾಹುಬಲಿ 1 ಮತ್ತು 2′ ಚಿತ್ರಗಳ ಅಭಿನಯದಿಂದ ಪ್ರಖ್ಯಾತರಾಗಿದ್ದಾರೆ. ಇದೀಗ ಅವರ ನಟನೆಯ ಲೀಡ್ ರೋಲ್‌ನ ವಿಭಿನ್ನ ಕಾನ್ಸೆಪ್ಟ್‌ನ “ಭಾಗಮತಿ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಅನುಷ್ಕಾ ಜನ್ಮ ದಿನದ ಹಿನ್ನೆಲೆಯಲ್ಲೇ “ಭಾಗಮತಿ’ ಫಸ್ಟ್‌ಲುಕ್‌ನ್ನು ಸೋಮವಾರ ರಿಲೀಸ್ ಮಾಡಲಾಗಿದೆ. “ಭಾಗಮತಿ’ ಚಿತ್ರವನ್ನು ಜಿ.ಅಶೋಕ್ ನಿರ್ದೇಶಿಸಿದರೆ, ಯುವಿ ಕ್ರಿಯೇಷನ್ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದೆ.
“ಭಾಗಮತಿ’ ಫಸ್ಟ್‌ಲುಕ್ ಗಮನಿಸಿದರೆ ಅನುಷ್ಕಾ ಒಂದು ಕೈಯಲ್ಲಿ ರಕ್ತದ ಕಲೆಗಳಿರುವ ಸುತ್ತಿಗೆ ಹಾಗೂ ಮತ್ತೊಂದು ಕೈಯಲ್ಲಿ ಗಾಯಗೊಂಡು ರಕ್ತ ಮೆತ್ತಿಕೊಂಡಿರುವುದನ್ನು ಕಾಣಬಹುದು. ತೆಲುಗು ಹಾಗು ತಮಿಳು ಭಾಷೆಯಲ್ಲಿ “ಭಾಗಮತಿ’ ಚಿತ್ರ ನಿರ್ಮಾಣವಾಗುತ್ತಿದ್ದು, ಡಿಸೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಅಲ್ಲದೇ ಚಿತ್ರದಲ್ಲಿ ಆದಿ, ಉನ್ನಿ ಮುಕುಂದನ್, ಜಯರಾಮ್, ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
MUST WATCH
ಹೊಸ ಸೇರ್ಪಡೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.