“ಅರ್ಜುನ್ ಗೌಡ’ ಚಿತ್ರೀಕರಣದ ಅಂತಿಮ ಘಟ್ಟಕ್ಕೆ
Team Udayavani, Sep 11, 2019, 3:00 AM IST
ನಟ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ಮುಂಬರುವ ಚಿತ್ರ “ಅರ್ಜುನ್ ಗೌಡ’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರದಲ್ಲಿ ಬರುವ ಕೆಲವು ವಿದೇಶದ ಭಾಗಗಳ ದೃಶ್ಯದ ಚಿತ್ರೀಕರಣ ಕೂಡ ಇದೇ ತಿಂಗಳಾಂತ್ಯಕ್ಕೆ ನಡೆಸುವ ಯೋಚನೆಯಲ್ಲಿದೆ ಚಿತ್ರತಂಡ.
“ಅರ್ಜುನ್ ಗೌಡ’ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಸಾಧುಕೋಕಿಲ, ರೇಖಾ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನಾ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಲವ್ ಕಂ ಆ್ಯಕ್ಷನ್ ಕಥಾಹಂದರವಿರುವ “ಅರ್ಜುನ್ ಗೌಡ’ ಚಿತ್ರವನ್ನು ನಿರ್ಮಾಪಕ ರಾಮು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಶಂಕರ್ ನಿರ್ದೇಶನವಿದೆ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಚಿತ್ರದ ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜನೆಯಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ “ಅರ್ಜುನ್ ಗೌಡ’ ಆಡಿಯೋ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.