ಅರ್ಜುನ್ ಜನ್ಯ ಬ್ಯಾಕ್ ಟು ವರ್ಕ್
Team Udayavani, Mar 21, 2020, 7:03 AM IST
ದಿಢೀರನೇ ಹೃದಯಾಘಾತಕ್ಕೆ ಒಳಗಾಗಿದ್ದ ಅರ್ಜುನ್ ಜನ್ಯ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ವಿಶ್ರಾಂತಿ ಸೂಚಿಸಿದ್ದ ಹಿನ್ನೆಲೆಯಲ್ಲಿ 20 ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಈಗ ಪುನಃ ತಮ್ಮ ಕೆಲಸಕ್ಕೆ ಮರಳಿದ್ದಾರೆ.
ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೀಗ ಚೇತರಿಸಿಕೊಂಡು ಪುನಃ ಕೀ ಬೋರ್ಡ್ ಮೇಲೆ ಕೈಯಾಡಿಸುವ ಮೂಲಕ ಕೆಲಸ ಶುರು ಮಾಡಿದ್ದಾರೆ. ಹೌದು, ಕಳೆದ ತಿಂಗಳು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೈಸೂರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಆ ಬಳಿಕ ಸಣ್ಣ ಹೃದಯಾಘಾತ ಆಗಿದ್ದ ಕುರಿತು ವೈದ್ಯರು ಎಚ್ಚರಿಸಿ, ವಿಶ್ರಾಂತಿಗೆ ತಿಳಿಸಿದ್ದರು.
ಈಗ ವಿಶ್ರಾಂತಿ ಬಳಿಕ ಪುನಃ ತಮ್ಮ ಕೆಲಸ ಮುಂದುವರೆಸಿದ್ದಾರೆ. ಅಂದಹಾಗೆ, “ಜೋಗಿ’ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಎದೆನೋವು ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದ ಅರ್ಜುನ್ ಜನ್ಯ ಚಿತ್ರದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಈಗ ಆ ಕೆಲಸ ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. ಅರ್ಜುನ್ ಜನ್ಯ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಅವರ ಸಂಗೀತ ನಿರ್ದೇಶನದ ಹಲವು ಚಿತ್ರಗಳು ಇದೀಗ ಬಿಡುಗಡೆಗೂ ರೆಡಿಯಾಗಿವೆ.
ಹಾಗಾಗಿ, ಅರ್ಧಕ್ಕೆ ನಿಂತಿದ್ದ ಸಣ್ಣಪುಟ್ಟ ಕೆಲಸಗಳನ್ನು ಈಗ ಪೂರ್ಣಗೊಳಿಸುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಅವರು, ಅರ್ಜುನ್ ಜನ್ಯ ತಮ್ಮ ಚಿತ್ರಕ್ಕೆ ಸಂಗೀತ ಕೆಲಸ ಶುರು ಮಾಡಲು ಅಣಿಯಾಗಿರುವ ಫೋಟೋವೊಂದನ್ನು ಕ್ಲಿಕ್ಕಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಾಕಿ, “ಏಕ್ ಲವ್ ಯಾ’ ಚಿತ್ರದ ಸಂಗೀತ ಕೆಲಸ ಶುರುವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮ್ಯೂಸಿಕ್ “ಬೀಟ್ಸ್ ಇರೋವರೆಗೂ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಅಂತ ವಾಪಸ್ ಬಂದಿದ್ದಾರೆ ನಮ್ ಅರ್ಜುನ್ ಜನ್ಯ.
ಮ್ಯೂಸಿಕ್ ಬೀಟ್ಸ್ ಇರೋವರ್ಗೂ ನಮ್ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಅಂತ ವಾಪಸ್ ಬಂದಿದ್ದಾರೆ @arjunjanya ❤️
The magical compser is back with magical power #ekloveya audio soon @A2Music2 ಹುಟ್ಟುದ್ಮೇಲೆ ಪ್ರತಿಯೊಬ್ಬರು ಒಂದಲ್ಲ ಒಂದ್ ದಿನ ಸಾಯ್ಲೇಬೇಕು, so do not panic about corona, beware & be safe #Prems pic.twitter.com/JPZQZC25MP— PREM❣️S (@directorprems) March 19, 2020
ಇಷ್ಟರಲ್ಲೇ ಚಿತ್ರದ ಆಡಿಯೋ ಹೊರಬರಲಿದೆ ಎಂದು ಈ ವೇಳೆ ತಿಳಿಸಿದ್ದಾರೆ ಪ್ರೇಮ್. ಇನ್ನು, ಅರ್ಜುನ್ ಜನ್ಯ ಅವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗೂ ಭಾಗಿಯಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ವಿಡಿಯೊ ಮೂಲಕ ಮಾತನಾಡಿದ್ದು, ಶೀಘ್ರವೇ ಶೋನಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಅರ್ಜುನ್ ಜನ್ಯ “ರಾಬರ್ಟ್’, “ಕೋಟಿಗೊಬ್ಬ-3′, “ಗಾಳಿಪಟ-2′, “ಮದಗಜ’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಮ್ಯೂಸಿಕ್ ಬೀಟ್ಸ್ ಇರೋ ವರೆಗೂ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಅಂತ ವಾಪಸ್ ಬಂದಿದ್ದಾರೆ ನಮ್ ಅರ್ಜುನ್ . ಇಷ್ಟರಲ್ಲೇ ಚಿತ್ರದ ಆಡಿಯೋ ಹೊರಬರಲಿದೆ .
-ಪ್ರೇಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.