ಆಶು ಬೆದ್ರ ಈಗ ಹೀರೋ
Team Udayavani, Apr 30, 2017, 11:18 AM IST
ಆಶು ಬೆದ್ರ ಈಗ ಹೀರೋ ಆಗುತ್ತಿದ್ದಾರೆ. ಸದ್ಯದಲ್ಲೇ ಅವರು ನಾಯಕರಾಗಿರುವ ಸಿನಿಮಾ ಲಾಂಚ್ ಆಗಲಿದೆ! ಯಾರು ಆಶು ಬೆದ್ರ ಎಂದು ನೀವು ಕೇಳಿದರೆ “ಸಿಂಪಲ್ಲಾಗ್ ಇನ್ನೊಂದು ಲವ್‌ಸ್ಟೋರಿ’ ಸಿನಿಮಾವನ್ನು ತೋರಿಸಬೇಕು. ಆ ಸಿನಿಮಾವನ್ನು ನಿರ್ಮಿಸಿದವರು ಇದೇ ಆಶು ಬೆದ್ರ. ಸಿನಿಮಾ ನಿರ್ಮಾಣಕ್ಕೂ ಮುನ್ನ ಆಶು ಕಿರುತೆರೆಯ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಗ ಹೀರೋ ಆಗುತ್ತಿದ್ದಾರೆ.
ಹಾಗೆ ನೋಡಿದರೆ ಆಶು ಬೆದ್ರ ಬಣ್ಣದ ಲೋಕಕ್ಕೆ ಬಂದಿದ್ದೇ ಕಲಾವಿದ ಆಗಬೇಕೆಂಬ ಉದ್ದೇಶದಿಂದಂತೆ. ಆದರೆ ಆರಂಭದಲ್ಲಿ ತೊಡಗಿಸಿಕೊಂಡಿದ್ದು ಮಾತ್ರ ನಿರ್ಮಾಣ ಹಾಗೂ ಕ್ರಿಯೇಟಿವ್ ವಿಭಾಗದಲ್ಲಿ. ಈಗ ಆಶು ಬೆದ್ರ ನಾಯಕರಾಗುವ ಕಾಲ ಕೂಡಿಬಂದಿದೆ. ಅರವಿಂದ ಶಾಸಿ ನಿರ್ದೇಶನದ ಸಿನಿಮಾ ಮೂಲಕ ಆಶು ಬೆದ್ರ ಲಾಂಚ್ ಆಗುತ್ತಿದ್ದಾರೆ.
ಅರವಿಂದ್ ಈ ಹಿಂದೆ “ಕಹಿ’ ಎಂಬ ಸಿನಿಮಾ ಮಾಡಿದ್ದು, ಮೊನ್ನೆಯಷ್ಟೇ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗ ಹೊಸ ಬಗೆಯ ಕಥೆಯೊಂದಿಗೆ ಹೊಸ ನಾಯಕನ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ ಅರವಿಂದ್. ಕಥೆ ಕೇಳಿದ ಆಶು ಅವರಿಗೆ ತಾನು ಹೀರೋ ಆಗಿ ಲಾಂಚ್ ಆಗಲು ಇದು ಸೂಕ್ತ ಕಥೆ ಎನಿಸಿತಂತೆ.
ಕಥೆಯೇ ಹೀರೋ ಆಗಿರುವಂತಹ ಸಿನಿಮಾ ಮೂಲಕ ಲಾಂಚ್ ಆಗಬೇಕೆಂಬ ಆಸೆ ಇತ್ತಂತೆ. ಅದೀಗ ಈಡೇರಿದೆ. “ಕಥೆಯೇ ಹೀರೋ ಆದಾಗ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಲ್ಲಿ ಅಂತಹ ಕಥೆ ಸಿಕ್ಕಿದೆ. ಇದು ನನ್ನ ಲಾಂಚ್‌ಗೆ ಒಳ್ಳೆಯ ಸಿನಿಮಾವಾಗುತ್ತದೆ’ ಎಂಬ ವಿಶ್ವಾಸವೂ ಇದೆ ಎನ್ನುವುದು ಆಶು ಬೆದ್ರ ಮಾತು. ಈ ಚಿತ್ರದ ಟೈಟಲ್, ಇತರ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು
Rishab Shetty: ʼಜೈ ಹನುಮಾನ್ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ?
Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್ʼ ರಿಲೀಸ್ ಡೇಟ್.. ಫ್ಯಾನ್ಸ್ ಖುಷ್
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.