O2 movie: ಅಪ್ಪು ಇಷ್ಟ ಪಟ್ಟು ಓಕೆ ಮಾಡಿದ ಕಥೆಯಿದು; ಅಶ್ವಿನಿ ಮನದ ಮಾತು
ಪಾಸಿಟಿವ್, ನೆಗೆಟಿವ್ ಏನೇ ಇರಲಿ.. ಎಲ್ಲವನ್ನು ಸ್ವೀಕರಿಸಬೇಕು, ಜೀವನ ನಡೀತಾ ಇರುತ್ತೆ..
Team Udayavani, Apr 8, 2024, 3:04 PM IST
ಪಿಆರ್ಕೆ ಬ್ಯಾನರ್ನಲ್ಲಿ ತಯಾರಾಗಿರುವ “ಓ2′ ಸಿನಿಮಾ ಏಪ್ರಿಲ್ 19ಕ್ಕೆ ತೆರೆಕಾಣುತ್ತಿದೆ. ಪುನೀತ್ ರಾಜ್ಕುಮಾರ್ ಕಥೆ ಕೇಳಿ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಚಿತ್ರವಿದು. ಸದ್ಯ ಚಿತ್ರತಂಡ ಸಿನಿಮಾದ ಪ್ರಚಾರದಲ್ಲಿ ಬಿಝಿಯಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು “ಓ2′ ಚಿತ್ರದ ಹಾಗೂ ಇತರ ಕೆಲವು ಅಂಶಗಳ ಕುರಿತು ಮಾತನಾಡಿದ್ದಾರೆ.
ಅಪ್ಪು ತುಂಬಾ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಕಥೆ ಇದು. ಅವರು ಕಥೆ ಕೇಳಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೊನೆಯ ಸಿನಿಮಾ ಕೂಡಾ ಓ2.
*
ಕಥೆ ನಮಗೆ ತುಂಬಾ ಇಷ್ಟ ವಾಯಿತು. ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಸಿನಿಮಾವಿದು. ಇದು ಮೆಡಿಕಲ್ ಥ್ರಿಲ್ಲರ್ ಜಾನರ್ನ ಸಿನಿಮಾ. ಇಡೀ ತಂಡ ತುಂಬಾ ಶ್ರಮಪಟ್ಟು ನೀಟಾಗಿ ಸಿನಿಮಾ ಕಟ್ಟಿಕೊಟ್ಟಿದೆ. ನನಗೆ ಈ ಚಿತ್ರದ ಕ್ಲೈಮ್ಯಾಕ್ಸ್ ಸಿನಿಮಾ ತುಂಬಾ ಇಷ್ಟವಾಯಿತು.
*
ಕಂಟೆಂಟ್ ಸಿನಿಮಾಗಳಿಗೆ ನಮ್ಮ ಬ್ಯಾನರ್ನಲ್ಲಿ ಮೊದಲ ಆದ್ಯತೆ. ಸದ್ಯದಲ್ಲೇ ಇನ್ನೊಂದೆರಡು ಸಿನಿಮಾ ಅನೌನ್ಸ್ ಮಾಡುತ್ತೇವೆ. ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತೇವೆ.
*
ವೈಯಕ್ತಿಕವಾಗಿ ನನಗೆ ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಇಷ್ಟ. ಹಾಗಾಗಿ, ಅಂತಹ ಕಥೆಗಳು ನನಗೆ ಬೇಗ ಇಷ್ಟವಾಗುತ್ತಿದ್ದವು. ಮುಂದೆ ಬೇರೆ ಬೇರೆ ಜಾನರ್ಮ ಸಿನಿಮಾವನ್ನು ಪ್ರಯತ್ನಿಸುತ್ತೇನೆ.
*
ಯುವನಿಗೆ ಪಿಆರ್ ಕೆ ಬ್ಯಾನರ್ನಲ್ಲಿ ಮುಂದೊಂದು ದಿನ ಖಂಡಿತಾ ಸಿನಿಮಾ ನಿರ್ಮಿಸುತ್ತೇನೆ. ಎಲ್ಲವೂ ಕೂಡಿಬರಬೇಕು. “ಯುವ’ ಚಿತ್ರವನ್ನು ಜನ ತುಂಬಾ ಖುಷಿಯಿಂದ ಸ್ವೀಕರಿಸಿದ್ದಾರೆ.
*
“ಜಾಕಿ’ ಸಿನಿಮಾವನ್ನು ರೀ ರಿಲೀಸ್ ಮಾಡಿದಾಗ ಜನ ತೋರಿಸಿದ ಪ್ರೀತಿ ನೋಡಿ ಖುಷಿಯಾಯಿತು. 14 ವರ್ಷಗಳ ಹಿಂದೆ ಫಸ್ಟ್ ಡೇ ಸಿನಿಮಾ ನೋಡುವಾಗ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತೋ, ಈ ಬಾರಿಯೂ ಹಾಗೇ ಇತ್ತು.
*
ಮುಂದಿನ ವರ್ಷ ಅಭಿಮಾನಿಗಳು ಯಾವ ಸಿನಿಮಾ ಕೇಳುತ್ತಾರೋ, ಅದನ್ನು ಬಿಡುಗಡೆ ಮಾಡುತ್ತೇವೆ. ಬಹುಶಃ “ಅಪ್ಪು’ ಸಿನಿಮಾ ಬಿಡುಗಡೆಯಾಗಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.