ವರ್ಸಟೈಲ್ ನಟಿ ಎಂದು ಕರೆಸಿಕೊಳ್ಳುವಾಸೆ; ವೈಭವಿ ಶಾಂಡಿಲ್ಯ ಮನದ ಮಾತು
Team Udayavani, Sep 19, 2022, 2:34 PM IST
“ಗಾಳಿಪಟ-2′ ಸಿನಿಮಾದಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದ ನಟಿ ವೈಭವಿ ಶಾಂಡಿಲ್ಯ ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಅಭಿನಯದ “ಮಾರ್ಟಿನ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೂಲತಃ ಮರಾಠಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ವೈಭವಿ, ಬಳಿಕ ತೆಲುಗು, ಆ ನಂತರ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ ಚೆಲುವೆ. “ರಾಜ್-ವಿಷ್ಣು’ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದ ವೈಭವಿ ಶಾಂಡಿಲ್ಯಗೆ, ಇತ್ತೀಚೆಗೆ ತೆರೆಕಂಡ “ಗಾಳಿಪಟ-2′ ದೊಡ್ಡ ಬ್ರೇಕ್ ತಂದುಕೊಟ್ಟಿದೆ. “ಗಾಳಿಪಟ-2′ ಸಿನಿಮಾದ ಸಕ್ಸಸ್ ನಂತರ ವೈಭವಿ “ಮಾರ್ಟಿನ್’ ಸಿನಿಮಾದಲ್ಲಿ ಬಿಝಿಯಾಗಿದ್ದು, ಇದರ ನಡುವೆಯೇ ಸಾಕಷ್ಟು ಆಫರ್‌ಗಳು ವೈಭವಿ ಬರುತ್ತಿವೆಯಂತೆ.
“ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳಿದ್ದೇನೆ. ಆದರೆ, ಯಾವುದನ್ನೂ ಓಕೆ ಮಾಡಿಲ್ಲ. ನಾನೊಬ್ಬ ವರ್ಸಟೈಲ್ ನಟಿ ಎಂದು ನಿರೂಪಿಸಬೇಕು. ಎಂತಹ ಪಾತ್ರಗಳನ್ನಾದರೂ ಮಾಡಬಲ್ಲೇ ಎಂದು ತೋರಿಸಬೇಕು. ಹಾಗಾಗಿ, ಅಂತಹ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಸದ್ಯದಲ್ಲೇ ಅದರ ಕುರಿತ ಒಂದು ಒಳ್ಳೆಯ ಮಾಹಿತಿ ನೀಡುತ್ತೇನೆ. ಎಲ್ಲ ತರಹದ ಪಾತ್ರಗಳನ್ನು, ಎಲ್ಲ ಶೈಲಿಯ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಲು ಇಚ್ಚಿಸುತ್ತೆನೆ. ಸದ್ಯಕ್ಕೆ ಯಾವುದೇ ಹೊಸ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ’ ಎನ್ನುತ್ತಾರೆ ವೈಭವಿ.
ಇದನ್ನೂ ಓದಿ:ಯಾತ್ರೆ ನಡೆಯುವುದು ವ್ಯಕ್ತಿಯಿಂದಲ್ಲ, ಪಕ್ಷದಿಂದ: ಸ್ವಪಕ್ಷೀಯರಿಗೆ ಟಾಂಗ್ ನೀಡಿದ ದೇಶಪಾಂಡೆ
“ಸದ್ಯಕ್ಕೆ ನನ್ನ ಗಮನ “ಮಾರ್ಟಿನ್’ ಸಿನಿಮಾದ ಕಡೆಗಿದೆ. ಅದು ಇನ್ನೊಂದು ಅದ್ಭುತವಾದ ಅನುಭವ. ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೂಡಾ ಹೌದು. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾಗಿದೆ. ಬಬ್ಲಿ ಹುಡುಗಿಯಾಗಿ, ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ವೈಭವಿ.
ಇನ್ನು ವೈಭವಿ ಮುಂಬೈನಲ್ಲಿ ತಮ್ಮ ಕುಟುಂಬದವರೊಡನೆ “ಗಾಳಿಪಟ-2′ ಸಿನಿಮಾ ನೋಡುವುದಕ್ಕೆ ಹೋಗಿದ್ದರಂತೆ. ಸಿನಿಮಾ ನೋಡುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಜನ ವೈಭವಿಯವರನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದ್ದು ನಿಜಕ್ಕೂ ಮರೆಯಲಾಗದು ಎನ್ನುತ್ತಾರೆ ವೈಭವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.