ಕನ್ನಡಕ್ಕೆ ಬಂದ ಅಸ್ಸಾಂ ಚೆಲುವೆ
ಖನನ ಮೂಲಕ ಕರಿಷ್ಮಾ ಬರುಹ ಆಗಮನ
Team Udayavani, May 6, 2019, 3:00 AM IST
ಕನ್ನಡ ಚಿತ್ರಗಳಲ್ಲಿ ಇದುವರೆಗೆ ತೆಲುಗು, ತಮಿಳು ಮಲಯಾಳಂ ಸೇರಿದಂತೆ ಬಾಲಿವುಡ್ ಮೂಲದ ಅನೇಕ ನಟಿಯರು ಕಾಣಿಸಿಕೊಂಡಿದ್ದಾರೆ. ಈಗಲೂ ಬಂದು ನಟಿಸುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರ ಸಾಲಿನಲ್ಲಿ ಕಾಶ್ಮೀರದ ಚೆಲುವೆ, ಮರಾಠಿ ಬೆಡಗಿ, ಒಡಿಸ್ಸಾದ ಹುಡುಗಿಯೂ ಸೇರಿದ್ದಾರೆ.
ಅಷ್ಟೇ ಯಾಕೆ, ವಿದೇಶಿ ಬೆಡಗಿಯರೂ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಆ ಸಾಲಿಗೆ ಈಗ ಅಸ್ಸಾಂ ಚೆಲುವೆಯ ಎಂಟ್ರಿಯಾಗಿದೆ. ಹೌದು, ಕನ್ನಡಕ್ಕೆ ಅಸ್ಸಾಂ ಚೆಲುವೆಯ ಸ್ಪರ್ಶವಾಗಿದೆ. ಅಷ್ಟಕ್ಕೂ ಆ ಅಸ್ಸಾಂ ಚೆಲುವೆಯ ಹೆಸರು ಕರಿಷ್ಮಾ ಬರುಹ.
ಮೇ.10 ರಂದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲು ಸಜ್ಜಾಗಿರುವ “ಖನನ’ ಚಿತ್ರದ ನಾಯಕಿಯೇ ಕರಿಷ್ಮಾ ಬರುಹ. ಕರಿಷ್ಮಾ ಬರುಹ ಅವರಿಗೆ ಇದು ಕನ್ನಡದ ಮೊದಲ ಚಿತ್ರ. ನಿರ್ದೇಶಕ ರಾಧ ಅವರು ಈ ಅಸ್ಸಾಂ ಚೆಲುವೆಯನ್ನು ಸುಮ್ಮನೆ ಕನ್ನಡ ಚಿತ್ರರಂಗಕ್ಕೆ ಕರೆತಂದಿಲ್ಲ.
ಅದಕ್ಕೊಂದು ಬಲವಾದ ಕಾರಣವೂ ಇದೆ. ಕಥೆಯಲ್ಲಿ ಚಿತ್ರದ ನಾಯಕಿ ಇಂಡೋ ಅಮೆರಿಕನ್ ಹುಡುಗಿ. ಹಾಗಾಗಿ, ಆ ಪಾತ್ರಕ್ಕೆ ಇಂಡಿಯಾದಲ್ಲಿರುವ ಒಂದು ರಾಜ್ಯದ ಹುಡುಗಿಯೇ ಬೇಕಾಗಿದ್ದರಿಂದ ನಿರ್ದೇಶಕರು, ಸಾಕಷ್ಟು ಕಡೆ ಆಡಿಷನ್ ನಡೆಸಿದ್ದಾರೆ.
ಕೊನೆಗೆ ಯಾರೊಬ್ಬರೂ ಆ ಪಾತ್ರಕ್ಕೆ ಸರಿಹೊಂದದ ಕಾರಣ, ಅಸ್ಸಾಂ ಚೆಲುವೆ ಕರಿಷ್ಮಾ ಬರುಹ ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ತಮ ಕಲ್ಪನೆಯ ಪಾತ್ರಕ್ಕೆ ಕರಿಷ್ಮಾ ಬರುಹ ಸೂಕ್ತ ಎಂದೆನಿಸಿ, ಅವರಿಗೊಂದು ಆಡಿಷನ್ ನಡೆಸಿ, ನಂತರದ ದಿನಗಳಲ್ಲಿ ವರ್ಕ್‌ಶಾಪ್ ಕೂಡ ಮಾಡಿಸಿ, ಕೊನೆಗೆ ಕ್ಯಾಮೆರಾ ಮುಂದೆ ನಿಲ್ಲಿಸಿದರಂತೆ.
ಚಿತ್ರದ ಪಾತ್ರಕ್ಕೆ ಏನೆಲ್ಲಾ ತಯಾರಿ ಬೇಕಿತ್ತೋ, ಅದನ್ನೆ ಚಾಚೂ ತಪ್ಪದೆ ನಿರ್ವಹಿಸಿರುವ ನಾಯಕಿ ಕರಿಷ್ಮಾ ಬರುಹ ಅವರಿಗೂ “ಖನನ’ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇದೆ. ತಮ್ಮ ಪಾತ್ರ ಕುರಿತು ಹೇಳುವ ಕರಿಷ್ಮಾ ಬರುಹ, “ಇದೊಂದು ಅಪರೂಪದ ಕಥೆ ಮತ್ತು ಪಾತ್ರ. ಮೊದಲ ಕನ್ನಡ ಚಿತ್ರ ಎಂಬುದು ಇನ್ನೊಂದು ಹೆಮ್ಮೆ.
ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆ. ಪಾತ್ರದಲ್ಲೂ ಬಗೆಬಗೆಯ ಬದಲಾವಣೆಗಳೂ ಇವೆ. ಹಾಗೆ ಹೇಳುವುದಾದರೆ, ನನ್ನ ಪಾತ್ರ ಒಂದು ರೀತಿ ನೆಗೆಟಿವ್ ಶೇಡ್‌ನಲ್ಲಿದೆ. ಅದು ಯಾಕೆ ಅನ್ನುವುದನ್ನು ಚಿತ್ರದಲ್ಲೇ ಕಾಣಬೇಕು’ ಎನ್ನುತ್ತಾರೆ ಕರಿಷ್ಮಾ ಬರುಹ. ಇದು ಸಂಪೂರ್ಣ ಹೊಸಬರ ಚಿತ್ರ. ನಾಯಕ ಆರ್ಯವರ್ಧನ್ ಅವರಿಗೆ ಇದು ಮೊದಲ ಚಿತ್ರ.
ಅವರು ಮೊದಲ ಸಿನಿಮಾದಲ್ಲೇ ಅವರು ಐದು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಅವರಿಲ್ಲಿ ಒಬ್ಬ ಆರ್ಕಿಟೆಕ್ಟ್ ಆಗಿಯೂ, ದೇಹದಾರ್ಢ್ಯ ಪಟುವಾಗಿಯೂ, ಸೈಕೋ ಪಾತ್ರದಲ್ಲೂ ಮಿಂಚಿದ್ದಾರೆ. ಇನ್ನೂ ಎರಡು ಶೇಡ್ ಪಾತ್ರ ಯಾವುದು ಎಂಬ ಕುತೂಹಲಕ್ಕೆ “ಖನನ’ ನೋಡಬೇಕು. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಸಿನಿಮಾಗೆ ಬಿ.ಶ್ರೀನಿವಾಸ್‌ರಾವ್ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.