ಹಾಸ್ಯ ಕಲಾವಿದ ನರಸಿಂಹರಾಜು ಹೆಸರಲ್ಲಿ ಪ್ರಶಸ್ತಿ

ಭಾರತದಲ್ಲೇ ಮೊದಲ ಸಲ ಕಾಮಿಡಿ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌

Team Udayavani, Jul 25, 2019, 3:01 AM IST

Arvind

ಚೇತೋಹಾರಿ ಹಾಸ್ಯಕ್ಕೆ ಮತ್ತೊಂದು ಹೆಸರೇ ತಿಪಟೂರು ರಾಮರಾಜು ನರಸಿಂಹರಾಜು. ಇವರು ಕನ್ನಡದ “ಚಾರ್ಲಿಚಾಪ್ಲಿನ್‌’ಎಂದೇ ಹೆಸರಾದವರು. ಸದಾ ನೆನಪಾಗುವ ಅಪರೂಪದ ಹಾಸ್ಯ ಕಲಾವಿದ. ಕಪ್ಪು-ಬಿಳುಪು ಕಾಲದಲ್ಲೇ ಕನ್ನಡ ಚಿತ್ರರಂಗದ ವೇಗ ಹೆಚ್ಚಿಸಿದ ಕೀರ್ತಿ ಅವರದು. ಅವರೀಗ ನಮ್ಮೊಂದಿಗಿಲ್ಲ. ಆದರೆ, ಹಾಸ್ಯ ಪಾತ್ರಗಳ ಮೂಲಕ ಇಂದಿಗೂ ಅವರು ನಮ್ಮೊಂದಿಗಿದ್ದಾರೆ. ಜುಲೈ 24 ಅವರ ಹುಟ್ಟುಹಬ್ಬ.

97ನೇ ಹುಟ್ಟುಹಬ್ಬದ ಸವಿನೆನಪಿಗೆ ಅವರ ಅಭಿಮಾನಿ ವರ್ಗ ಹುಟ್ಟುಹಬ್ಬ ಆಚರಿಸಿದೆ, ಕುಟುಂಬದವರೂ ಸಂಭ್ರಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಹಲವು ಮಂದಿ ನರಸಿಂಹರಾಜು ಕುಟುಂಬ ವರ್ಗದೊಂದಿಗೆ ಸವಿನೆನಪು ಹಂಚಿಕೊಂಡಿದೆ. ಈ ವರ್ಷದ ವಿಶೇಷವೆಂದರೆ, ನರಸಿಂಹರಾಜು ಹುಟ್ಟುಹಬ್ಬದ ನೆನಪಿಗೆ ಇನ್ನು ಮುಂದೆ ಪ್ರತಿ ವರ್ಷ ಹೊಸ ಕಾರ್ಯಕ್ರಮ ನಡೆಸಲು ಕುಟುಂಬ ವರ್ಗ ತೀರ್ಮಾನಿಸಿದೆ.

ಹೌದು, “ಬೆಂಗಳೂರು ಇಂಟರ್‌ನ್ಯಾಷನಲ್‌ ಕಾಮಿಡಿ ಶಾರ್ಟ್ಸ್’ ಇನ್‌ ಮೆಮೋರಿ ಆಫ್ ನರಸಿಂಹರಾಜು’ ಹೆಸರಲ್ಲಿ ಅವಾರ್ಡ್‌ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ. ಈ ಕುರಿತು ವಿವರ ಕೊಡುವ ಅವರ ಮೊಮ್ಮಗ ನಿರ್ದೇಶಕ, ನಿರ್ಮಾಪಕ ಅರವಿಂದ್‌, “ಇಷ್ಟು ವರ್ಷ ನರಸಿಂಹರಾಜು ಅವರ ಹುಟ್ಟಹಬ್ಬದ ಆಚರಣೆ ಮತ್ತು ನೆನಪಷ್ಟೇ ಇರುತ್ತಿತ್ತು. ಆದರೆ, ಅವರ ನೆನಪು ಸದಾ ಇರಬೇಕು ಎಂಬ ಕಾರಣಕ್ಕೆ ಕಾಮಿಡಿ ಶಾರ್ಟ್ಸ್ ಫಿಲ್ಮ್ ಫೆಸ್ಟಿವಲ್‌ ನಡೆಸಲು ತೀರ್ಮಾನಿಸಲಾಗಿದೆ.

ಕಳೆದ ಮೂರ್‍ನಾಲ್ಕು ವರ್ಷಗಳಿಂದಲೂ ಚರ್ಚೆ ಆಗುತ್ತಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ವರ್ಷದಿಂದ ಅದಕ್ಕೆ ಚಾಲನೆ ಕೊಡಲು ಕುಟುಂಬ ತೀರ್ಮಾನಿಸಿದೆ. ಈ ಮೂಲಕ ನರಸಿಂಹರಾಜು ಅವರ ಹೆಸರನ್ನು ಇನ್ನಷ್ಟು ಶೋಕೇಸ್‌ ಮಾಡಲು ಅನುಕೂಲವಾಗುತ್ತಿದೆ. ಭಾರತದಲ್ಲಿ ಕಾಮಿಡಿ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌ ನಡೆಸುತ್ತಿರುವುದು ಇದೇ ಮೊದಲು. 5 ರಿಂದ 30 ನಿಮಿಷ ಅವಧಿಯ ಕಾಮಿಡಿ ಶಾರ್ಟ್‌ ಫಿಲ್ಮ್ಗಳನ್ನು ಆಹ್ವಾನಿಸಿ, ಉತ್ತಮ ಹಾಸ್ಯ ಕಿರುಚಿತ್ರಗಳಿಗೆ ಪ್ರಶಸ್ತಿ ನೀಡುವ ಉದ್ದೇಶವಿದೆ.

ಈ ಮೂಲಕ ಕನ್ನಡ ಚಿತ್ರರಂಗವನ್ನೂ ಬೆಸೆಯುವ ಕೆಲಸವಾಗುತ್ತಿದ್ದು, ಆ ವರ್ಷದ ಬೆಸ್ಟ್‌ ಕಾಮಿಡಿ ಚಿತ್ರ, ಕಾಮಿಡಿ ಸಿನಿಮಾ ಡೈರೆಕ್ಟರ್‌, ಕಾಮಿಡಿ ಆ್ಯಕ್ಟರ್‌ ಅವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿ ಹೊಸಬರು ಮತ್ತು ಹಳಬರಿಗೂ ಅವಕಾಶವಿದೆ ಎಂದು ಹೇಳುವ ಅರವಿಂದ್‌, ಇನ್ನು, ಭಾರತದ ಎಲ್ಲಾ ಭಾಷೆ ಚಿತ್ರರಂಗದ ಮೇರು ಹಾಸ್ಯ ನಟರನ್ನು ಗುರುತಿಸಿ ಅವರಿಗೆ ನರಸಿಂಹರಾಜು ಅವರ ಹೆಸರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ತೀರ್ಮಾನ ಮಾಡಲಾಗಿದೆ.

ಈಗಾಗಲೇ ಕಾಮಿಡಿ ಶಾರ್ಟ್‌ ಫಿಲ್ಮ್ಗಳ ಆಯ್ಕೆಗಾಗಿ ಒಂದು ಸಮಿತಿ ರಚನೆ ಇದ್ದು, ಅದರೊಂದಿಗೆ ನಮ್ಮ ಕುಟುಂಬವೂ ಸೇರಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಈ ನವೆಂಬರ್‌ನಲ್ಲೇ ಕಾಮಿಡಿ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ ಸಿಗಲಿದೆ. ಜಕ್ಕೂರು ಬಳಿ ಇರುವ ಆಡಿಟೋರಿಯಂವೊಂದರಲ್ಲಿ ಈ ಕಾರ್ಯಕ್ರಮ ರೂಪಿಸಲು ಯೋಚಿಸಲಾಗುತ್ತಿದೆ ಎನ್ನುತ್ತಾರೆ ಅರವಿಂದ್‌.

ನರಸಿಂಹರಾಜು ಅವರು ನಮ್ಮ ತಾತ ಎನ್ನುವುದಕ್ಕಿಂತ ಹೆಚ್ಚಾಗಿ ಅವರೊಬ್ಬ ಒಳ್ಳೆಯ ಹಾಸ್ಯ ಕಲಾವಿದರು. ಇಂದಿಗೂ ಅವರು ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ ಎಂದು ಹೇಳುತ್ತಾರೆ ಅವರು.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.