ಅಯನದೊಳಗೊಂದು ಸಾಫ್ಟ್ ಸ್ಟೋರಿ
Team Udayavani, Sep 3, 2017, 4:05 PM IST
ಕನ್ನಡ ಚಿತ್ರರಂಗಕ್ಕೆ ಸಾಫ್ಟ್ವೇರ್ ಕ್ಷೇತ್ರದಿಂದ ಸಾಕಷ್ಟು ಮಂದಿ ಬಂದಿದ್ದಾರೆ, ಬರುತ್ತಿದ್ದಾರೆ. ಅದಕ್ಕೆ ಕಾರಣ ಚಿತ್ರರಂಗದ ಆಕರ್ಷಣೆ ಎಂದರೆ ತಪ್ಪಲ್ಲ. ಸಾಫ್ಟ್ವೇರ್ ಫೀಲ್ಡ್ ನಿಂದ ಬಂದವರು ನಿರ್ದೇಶನ, ನಟನೆ, ಸಂಗೀತ … ಹೀಗೆ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈಗ ಒಂದು ಸಾಫ್ಟ್ವೇರ್ ತಂಡ ಸಾಫ್ಟ್ವೇರ್ ಕ್ಷೇತ್ರದ ಕುರಿತಾಗಿಯೇ ಸಿನಿಮಾ ಮಾಡಿದೆ. ಈಗ ಆ ಚಿತ್ರ ಬಿಡುಗಡೆಗೂ ರೆಡಿಯಾಗಿದ್ದು, ಸೆಪ್ಟೆಂಬರ್ 8ರಂದು ತೆರೆಕಾಣುತ್ತಿದೆ. ಹೀಗೆ ಸಾಫ್ಟ್ವೇರ್ ಮಂದಿ ತಮ್ಮ ಕ್ಷೇತ್ರದ ವಿಷಯವನ್ನೇ ಇಟ್ಟುಕೊಂಡು ಮಾಡಿರುವ ಸಿನಿಮಾ “ಅಯನ’.
ಹೌದು, “ಅಯನ’ ಎಂಬ ಚಿತ್ರವನ್ನು ಗಂಗಾಧರ್ ಸಾಲಿಮಠ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸ್ನೇಹಿತರೊಂದಿಗೆ ಸೇರಿ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಅಂದಹಾಗೆ, ಗಂಗಾಧರ್ ಸಾಲಿಮಠ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದವರು. ಸದ್ಯ ಆ ಕೆಲಸಕ್ಕೆ ಗುಡ್ ಬೈ ಹೇಳಿ 19 ತಿಂಗಳ ಶ್ರಮದೊಂದಿಗೆ “ಅಯನ’ ಎಂಬ ಸಿನಿಮಾ ಮಾಡಿದ್ದಾರೆ. ಸಾಫ್ಟ್ವೇರ್ ಕ್ಷೇತ್ರದಿಂದ ಬಂದ ಅವರು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿದ ಸಬೆjಕ್ಟ್ ಕೂಡಾ ಸಾಫ್ಟ್ವೇರ್ ಮಂದಿಯದ್ದೇ. ಸಾಫ್ಟ್ವೇರ್ ಕ್ಷೇತ್ರದ ಮಂದಿ ತಮ್ಮ ಕನಸಿನ ಬೆನ್ನತ್ತಿ ಹೊಸ ಕಾರ್ಯಕ್ಕೆ ಕೈ ಹಾಕಿದಾಗ ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ “ಅಯನ’ ಸಿನಿಮಾ ಮಾಡಿದ್ದಾರೆ.
ಕೆಲವು ನಿರ್ಧಾರಗಳಿಂದ ಆರ್ಥಿಕ ಹಾಗೂ ಕೌಟುಂಬಿಕವಾಗಿ ಯಾವ ರೀತಿಯ ಸಮಸ್ಯೆಗಳು ಬರುತ್ತವೆ ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡಿದ್ದಾರಂತೆ. ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಕೂಡಾ ಹೊಸಬರಾಗಿದ್ದು, ಸಾಫ್ಟ್ ವೇರ್ ಹಿನ್ನೆಲೆಯವರೆಂಬುದು ವಿಶೇಷ.
ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ದೀಪಕ್ ಕೂಡಾ ಸಾಫ್ಟ್ವೇರ್ ಕ್ಷೇತ್ರದಿಂದ ಬಂದವರು. ನಾಯಕಿ ಅಪೂರ್ವ ಸೋಮ ಸೇರಿದಂತೆ ಚಿತ್ರದಲ್ಲಿ ನಾಯಕನ ಸ್ನೇಹಿತರಾಗಿ ನಟಿಸಿದವರೆಲ್ಲರೂ ಇವತ್ತಿಗೂ ಸಾಫ್ಟ್ವೇರ್ ಕಂಪೆನಿಯ ಉದ್ಯೋಗಿಗಳು. ವೃತ್ತಿ ಜೊತೆಗೆ ಸಿನಿಮಾ ಪ್ರವೃತ್ತಿಯಿಂದ ಈಗ ಎಲ್ಲರೂ ಒಟ್ಟಾಗಿ ಸಿನಿಮಾ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
HMPV Virus: ಭಾರತದ ಮೊದಲ ಎಚ್‌ಎಂಪಿವಿ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.