ನನ್ನ ಸಿನಿ ಕೆರಿಯರ್‌ನಲ್ಲಿ ಅಯೋಗ್ಯ ಮೈಲಿಗಲ್ಲು
Team Udayavani, Jul 30, 2018, 11:40 AM IST
ನೀನಾಸಂ ಸತೀಶ್ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, “ಅಯೋಗ್ಯ’. ಹೌದು, ಟಿ.ಆರ್. ಚಂದ್ರಶೇಖರ್ ನಿರ್ಮಿಸಿ, ಎಸ್. ಮಹೇಶ್ ಕುಮಾರ್ ನಿರ್ದೇಶಿಸಿರುವ “ಅಯೋಗ್ಯ’, ಒಂದರ ಮೇಲೊಂದು ದಾಖಲೆ ಮಾಡಿದೆ. ಅದೇ ಸತೀಶ್ ಖುಷಿಗೆ ಕಾರಣ. ಅಷ್ಟಕ್ಕೂ ಆ ದಾಖಲೆ ಏನು, ಎತ್ತ, ಇತ್ಯಾದಿ ಕುರಿತು “ಚಿಟ್‌ಚಾಟ್’ನಲ್ಲಿ ಮಾತನಾಡಿದ್ದಾರೆ.
* “ಅಯೋಗ್ಯ’ನದು ಹೊಸ ದಾಖಲೆಯಂತೆ ಹೌದಾ?
ಹೌದು, ಅದಕ್ಕೆ ಹಲವು ಕಾರಣಗಳು. “ಏನಮ್ಮಿ, ಏನಮ್ಮಿ’ ಹಾಡು ಡಬ್‌ಸ್ಮ್ಯಾಷ್‌ನಲ್ಲಿ ದಾಖಲೆ ಬರೆದಿದೆ. ಇದುವರೆಗೆ ಹದಿನಾರುವರೆ ಸಾವಿರ ಡಬ್‌ಸ್ಮ್ಯಾಷ್ ಆಗಿದ್ದು ವಿಶೇಷ. ಆನಂದ್ ಆಡಿಯೋ ಸಂಸ್ಥೆ ಪ್ರಕಾರ, ಕನ್ನಡದಲ್ಲಿ ಈ ಹಾಡಿಗೆ ಆದಂತಹ ಡಬ್‌ಸ್ಮ್ಯಾಷ್ ಬೇರೆ ಯಾವ ಹಾಡಿಗೂ ಆಗಿಲ್ಲ. ಅದೂ ಕಡಿಮೆ ಅವಧಿಯಲ್ಲಿ. “ಹಿಂದೆ ಹಿಂದೆ ಹೋಗು’ ಹಾಡು ಸಹ ಒಂದೇ ದಿನದಲ್ಲಿ ಒನ್ ಮಿಲಿಯನ್ ಆಗಿದೆ.
ಅದು ಹೊಸ ದಾಖಲೆ. ನನ್ನ ಹಿಂದಿನ ಚಿತ್ರಗಳ ಹಾಡುಗಳೂ ಸದ್ದು ಮಾಡಿದ್ದವು. ಆದರೆ, ಈ ಲೆವೆಲ್‌ಗೆ ಆಗಿರಲಿಲ್ಲ. ಈ ಚಿತ್ರ ನನ್ನನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುತ್ತೆ. ಸಾಮಾನ್ಯವಾಗಿ ಚಿತ್ರದ ಒಂದು ಹಾಡು ಹಿಟ್ ಆಗುವುದುಂಟು. ಆದರೆ, ಇಲ್ಲಿ ಎರಡು ಹಾಡು ಹಿಟ್ ಆಗಿದೆ. ಅದೂ ದಾಖಲೆ. ಇಂಡಿಯಾದಲ್ಲೇ ಜಿಯೋ ಮ್ಯೂಸಿಕ್‌ನಲ್ಲಿ ಟಾಪ್ 4ನಲ್ಲಿದೆ. ರಾಜ್ಯದಲ್ಲಿ ಟಾಪ್ ಒಂದರಲ್ಲಿದೆ. ಇದು ಖುಷಿ ಹೆಚ್ಚಿಸಿದೆ.
* ನಿಮ್ಮ ಕೆರಿಯರ್‌ನಲ್ಲಿ “ಅಯೊಗ್ಯ’ ಎಷ್ಟು ಪ್ರಮುಖ ಪಾತ್ರ ವಹಿಸುತ್ತೆ?
ನನ್ನ ಕೆರಿಯರ್‌ನಲ್ಲಿ “ಅಯೋಗ್ಯ’ ದೊಡ್ಡ ಮೈಲಿಗಲ್ಲು. ನನಗಷ್ಟೇ ಅಲ್ಲ, ಅದು ನನ್ನ ತಂಡ ಮತ್ತು ವಿತರಕರಿಗೂ ಕೂಡ. ಮೊದಲಿಗೆ ಇದು ಅಪ್ಪಟ ದೇಸಿ ಚಿತ್ರ. ಎಲ್ಲೂ ಕಾಣದ, ಕೇಳದ ಕಥೆ ಇಲ್ಲಿದೆ. ಎಲ್ಲೂ ಕದಿಯದ, ಸ್ಫೂರ್ತಿ ಪಡೆಯದ ಚಿತ್ರಣ ಇಲ್ಲಿದೆ. ಚಿತ್ರ ನೋಡಿದಾಗ, ಪ್ರತಿಯೊಬ್ಬರೂ ತನ್ನ ಲೈಫ್ಸ್ಟೋರಿನೇ ಅಂದುಕೊಳ್ಳುವಂತಿದೆ. ಈ ಚಿತ್ರವನ್ನು ನಾನು ಸುಮಾರು ಹದಿನೈದು ಸಲ ನೋಡಿದ್ದೇನೆ. ಎಲ್ಲೂ ಬೋರ್ ಎನಿಸಿಲ್ಲ. ಕಂಟೆಂಟ್ ಫ್ರೆಶ್ ಆಗಿರುವುದೇ ಜೀವಾಳ. ಹಾಡುಗಳು ಈ ಪರಿ ಹಿಟ್ ಆಗಿರುವುದರಿಂದ ಚಿತ್ರವೂ ಹೊಸ ದಾಖಲೆ ಬರೆಯುತ್ತೆ ಎಂಬ ವಿಶ್ವಾಸ ನನ್ನದು.
* “ಅಯೋಗ್ಯ’ನ ಮೇಲೆ ನಿರೀಕ್ಷೆ ಎಷ್ಟಿದೆ?
ಹಿನ್ನೆಲೆ ಸಂಗೀತ ಮಾಡಿರುವ ಅರ್ಜುನ್ ಜನ್ಯ ಹೇಳಿದ್ದಿಷ್ಟು. “ಸತೀಶ್, ನೀವು ಅರಾಮವಾಗಿರಿ. ಟೆನÒನ್ ಮಾಡ್ಕೊàಬೇಡಿ, ಹಾಯಾಗಿ ನಿದ್ದೆ ಮಾಡಿ’ ಅಂತ. ಹಾಡುಗಳಿಗೆ ಜನರು ಕೊಟ್ಟ ತೀರ್ಪು ನೋಡಿ ನಿರೀಕ್ಷೆ ಹೆಚ್ಚಿದೆ. ನಾನು ಯಾವ ಚಿತ್ರದ ಮೇಲೂ ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿಲ್ಲ. ಇದು ಹೊಸ ಪವಾಡ ಸೃಷ್ಟಿಸುತ್ತೆ ಎಂಬ ನಂಬಿಕೆಯಂತೂ ಇದೆ.
* ಮೊದಲ ಸಲ ರಚಿತಾರಾಮ್ ಜೊತೆಗಿನ ಹೇಗಿತ್ತು?
ರಚಿತಾರಾಮ್ ಒಳ್ಳೇ ನಟಿ. ಅವರು ಇದೇ ಮೊದಲ ಸಲ ಸಂಪೂರ್ಣ ಮಂಡ್ಯ ಭಾಷೆ ಮಾತಾಡಿದ್ದಾರೆ. ಅದರಲ್ಲೂ, ಬೆಂಗಳೂರು ಹುಡುಗಿಯರಿಗೆ ಮಂಡ್ಯ ಭಾಷೆ ಹಿಡಿಯೋದು ಕಷ್ಟ. ಅವರು ಹಠ ಮಾಡಿ, ನಾನೇ ಮಂಡ್ಯ ಭಾಷೆಯಲ್ಲೇ ಡಬ್ ಮಾಡ್ತೀನಿ ಅಂತ ಹಠ ಮಾಡಿ ಡಬ್ಬಿಂಗ್ ಮಾಡಿದ್ದಾರೆ. ಒಬ್ಬ ಹಳ್ಳಿ ಹುಡುಗಿಯಾಗಿ, ಥೇಟ್ ಪಕ್ಕದ್ಮನೆ ಹುಡುಗಿಯಂತೆ ಕಾಣುತ್ತಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಎಷ್ಟೋ ಸಲ ಡೈಲಾಗ್ ಕುರಿತು ಚರ್ಚಿಸಿ, ನಟಿಸಿದ್ದೇವೆ.
* ಪೋಸ್ಟರ್‌ನಲ್ಲಿ ಕಲರ್‌ಫುಲ್ ಗೆಟಪ್ ಇದೆ, ಚಿತ್ರವೂ ಹಾಗೇನಾ?
ಇಡೀ ಚಿತ್ರವೇ ಕಲರ್‌ಫುಲ್ ಆಗಿರಲಿದೆ. ಹೀರೋ, ಸದಾ ಕಲರ್‌ಫುಲ್ ಮನುಷ್ಯ. ಪಾಸಿಟಿವ್ ಎನರ್ಜಿ ಇರುವಂಥವನು. ನಗುವಲ್ಲೇ ಎಲ್ಲವನ್ನು ಗೆಲಲ್ಲು ಪ್ರಯತ್ನ ಪಡುವಂಥವನು. ಹಾಗಾಗಿ ಚಿತ್ರದುದ್ದಕ್ಕೂ ಕಲರ್‌ಫುಲ್ ಆಗಿಯೇ, ಚಿತ್ರವನ್ನೂ ರಂಗಾಗಿಸುತ್ತ ಹೋಗುತ್ತಾನೆ. ಹಾಗಾಗಿ, ಚಿತ್ರ ಅಪ್ಪಟ ರಂಗಿನ ಮನರಂಜನಾತ್ಮಕ ಚಿತ್ರ.
* ಅಯೋಗ್ಯನ ಉದ್ದೇಶ ಏನು?
ಎಲ್ಲರೂ ತಿಳಿದುಕೊಂಡಂತೆ, ಈ ಅಯೋಗ್ಯ ಕೆಟ್ಟವನಲ್ಲ. ಈ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೇಳಲು ಹೊರಟಿದ್ದಾನೆ. ನಮ್ಮ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನ ಅವನದು. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿ, ಇಷ್ಟೆಲ್ಲಾ ಸಮಸ್ಯೆ ಇದೆಯಾ? ಆ ಸಮಸ್ಯೆಗೆ ಹೀಗೆಲ್ಲಾ ಪರಿಹಾರವಿದೆಯಾ ಎಂಬುದನ್ನು ತಿಳಿದುಕೊಳ್ಳುವಷ್ಟು ಮಟ್ಟಿಗೆ ಅಯೋಗ್ಯನ ಪಾತ್ರವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.