ಆಗಸ್ಟ್ 15ಕ್ಕೆ ಅಯೋಗ್ಯ
Team Udayavani, Aug 7, 2018, 11:04 AM IST
ಸತೀಶ್ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರವು ಸೆನ್ಸಾರ್ ಅಂಗಳದಲ್ಲಿದೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಸೆನ್ಸಾರ್ ಆಗಲಿದ್ದು, ಆ ನಂತರ ಚಿತ್ರವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡವು ಸಜ್ಜಾಗುತ್ತಿದೆ. ವಿಶೇಷವೆಂದರೆ, ಆಗಸ್ಟ್ 15 ಬುಧವಾರ.
ಸಾಮಾನ್ಯವಾಗಿ ಯಾವ ಚಿತ್ರವೂ ಬುಧವಾರ ಬಿಡುಗಡೆಯಾಗುವುದಿಲ್ಲ. ಆದರೆ, ಬುಧವಾರ ರಜೆ ಇರುವ ಕಾರಣ, ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಚಿತ್ರತಂಡ ಯೋಚಿಸುತ್ತಿದ್ದು, ಅದೇ ದಿನ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಇನ್ನು ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳು 81 ಲಕ್ಷಕ್ಕೆ ಮಾರಾಟವಾಗಿದ್ದು, ಪ್ರೇಮ್ ವ್ಯಾಸ್ ಎನ್ನುವವರು ಹಕ್ಕುಗಳನ್ನು ಖರೀದಿಸಿದ್ದಾರೆ. ಸತೀಶ್ ಅವರ ಯಾವುದೇ ಚಿತ್ರದ ಡಬ್ಬಿಂಗ್ ಹಕ್ಕುಗಳು ಇಷ್ಟೊಂದು ಮೊತ್ತಕ್ಕೆ ಮಾರಾಟವಾಗಿಲ್ಲ. ಈಗ “ಅಯೋಗ್ಯ’ ಹೊಸ ದಾಖಲೆ ಬರೆದಿದೆ.
“ಅಯೋಗ್ಯ’ ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದು, ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಪ್ರವೀಣ್ ತೆಗ್ಗಿನಮನೆ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.