ಹೊಸಬರ ಚಿತ್ರ ‘ಬಾ ನಲ್ಲೆ ಮದುವೆಗೆ’
Team Udayavani, Feb 17, 2023, 4:01 PM IST
ಹೊಸಬರೇ ಸೇರಿಕೊಂಡು ಸಿದ್ಧಪಡಿಸಿರುವ “ಬಾ ನಲ್ಲೆ ಮದುವೆಗೆ’ ಚಿತ್ರದ ಪೋಸ್ಟರ್ ಅನ್ನು ನಟ ಪ್ರೇಮ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. “ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂಬ ಅಡಿಬರಹ ಚಿತ್ರಕ್ಕಿದೆ. ಎಂ.ಯೋಗೇಶ್ ನಂದನ್ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜೊತೆಗೆ ಭುಜಂಗೇಶ್ವರ ಉರುಕಾತೇಶ್ವರಿ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಶೀರ್ಷಿಕೆ ಹೇಳುವಂತೆ ಪ್ರೀತಿಯ ಕಥೆಯನ್ನು ಹೊಂದಿದೆ. ಅತಿಯಾದ ಪ್ರೀತಿ ಇಬ್ಬರಿಂದ ಆದರೆ ಅದು ಮುಳುವಾಗುತ್ತದೆ. ಅದರಂತೆ ಕಷ್ಟಗಳು ಎದುರಾಗಿ, ಕುಟುಂಬದ ಕಡೆಯಿಂದಲೂ ಆಕ್ಷೇಪಗಳು ಬರುತ್ತದೆ. ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಆದಕಾರಣ ತುಂಬಾ ಇಷ್ಟಪಡುವುದು ಒಳ್ಳೆಯದಲ್ಲ ವೆಂದು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ಹಳ್ಳಿ ಹುಡುಗನಾಗಿ ಅರ್ಜುನ್ ನಾಯಕ. ಶೋಭಾ ನಾಯಕಿ. ಇವರೊಂದಿಗೆ ಮೀಸೆ ಆಂಜನಪ್ಪ, ನಾಗೇಶ್ ಮಯ್ನಾ, ಮೈಸೂರು ಮಂಜುಳಾ ಹಾಗೂ ಹಲವು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಐದು ಹಾಡುಗಳಿಗೆ ದಿನೇಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.
ಪ್ರಸನ್ನ ಕುಮಾರ್ ಛಾಯಾಗ್ರಹಣ, ರಘು ಸಂಕಲನ, ಕೌರವ ವೆಂಕಟೇಶ್ ಸಾಹಸ, ರಾಜ್ ದೇವು ನೃತ್ಯ ನಿರ್ದೇಶನವಿದೆ. ಚಾಮರಾಜನಗರ ಸುಂದರ ತಾಣಗಳು ಮತ್ತು ಸುವರ್ಣವತಿ ಡ್ಯಾಮ್ ಕಡೆಗಳಲ್ಲಿ 38 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಝಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.