ವಿದೇಶೀ ನೆಲದಲ್ಲಿ ಮಿಂಚಿದ ಬಬ್ರೂ!
Team Udayavani, Dec 4, 2019, 6:42 PM IST
ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಬ್ರೂ ಚಿತ್ರ ಇದೇ ಡಿಸೆಂಬರ್ ೬ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸುಮನ್ ನಗರ್‌ಕರ್ ನಿರ್ಮಾಣ ಮಾಡಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಬಿಡುಗಡೆಗೆ ಮುನ್ನವೇ ಹಲವಾರು ದಾಖಲೆಗಳನ್ನು ಮಾಡಿದೆ. ಆದರೆ ಅದು ಅಮೆರಿಕಾ ನೆಲದಲ್ಲಿ ಮಿಂಚಿದ ರೀತಿ ಮಾತ್ರ ಕನ್ನಡ ಚಿತ್ರರಂಗದ ಘನತೆಯನ್ನು ವಿಶ್ವ ಮಟ್ಟದಲ್ಲಿಯೂ ಮಿರುಗಿಸಿದೆ. ಸಂಪೂರ್ಣವಾಗಿ ಅಮೆರಿಕಾದಲ್ಲಿಯೇ ಚಿತ್ರೀಕರಣಗೊಂಡು ಜರ್ನಿ ಕಥೆಯನ್ನೊಳಗೊಂಡಿರುವ ಈ ಚಿತ್ರ ಅಮೆರಿಕಾದ ಸಿನಿ ಲಾಂಚ್‌ನಲ್ಲಿ ಪ್ರೀಮಿಯರ್ ಶೋ ಪೂರೈಸಿಕೊಂಡಿದೆ. ಆ ಸಂದರ್ಭದಲ್ಲಿ ನೋಡುಗರ ಕಡೆಯಿಂದ ಸಿಕ್ಕಿರುವ ಸದಭಿಪ್ರಾಯದ ಮಾತುಗಳೇ ಚಿತ್ರತಂಡವನ್ನು ಗೆಲುವಿನ ಅಲೆಯಲ್ಲಿ ಮಿಂದೇಳುವಂತೆ ಮಾಡಿದೆ.
ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್‌ನಗರ್‌ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್‌ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದು ನವೆಂಬರ್ ೨ನೇ ತಾರೀಕಿನಂದು ಅಮೆರಿಕದ ಅತ್ಯಂತ ಪ್ರತಿಷ್ಠಿತವಾದ ಸಿನಿ ಲಾಂಚ್‌ನಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿನ ಏಳೂ ದೊಡ್ಡ ತೆರೆಗಳಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರದ ಟಿಕೆಟುಗಳು ಕೂಡಾ ಅಚ್ಚರಿದಾಯಕವಾಗಿ ಸೇಲ್ ಆಗಿದ್ದವು. ಆ ಏಳೂ ತೆರೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣೋ ಮೂಲಕ ಬಬ್ರೂ ಕೀರ್ತಿ ಪತಾಕೆ ಹಾರಿಸಿದ್ದಾನೆ.
ಅಮೆರಿಕಾದ ಸಿನಿ ಲಾಂಚ್‌ನಲ್ಲಿ ಈ ಪಾಟಿ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರವಾಗಿಯೂ ಬಬ್ರೂ ದಾಖಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಬಬ್ರೂ ತನ್ನ ಪ್ರತೀ ಹೆಜ್ಜೆಗಳಲ್ಲಿಯೂ ಕನ್ನಡ ಚಿತ್ರರಂಗದ ಘನತೆ ಹೆಚ್ಚಿಸುವ ರೀತಿಯಲ್ಲಿಯೇ ಮುಂದುವರೆಯುತ್ತಿದೆ. ಹೀಗೆ ಸಿನಿ ಲಾಂಚ್‌ನಲ್ಲಿ ಈ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ. ಹೀಗೆ ಎಲ್ಲ ಹಂತಗಳನ್ನೂ ದಾಖಲೆಗಳಿಂದಲೇ ಸಮೃದ್ಧಗೊಳಿಸಿಕೊಳ್ಳುತ್ತಾ ಬಂದಿರುವ ಈ ಚಿತ್ರ ಡಿಸೆಂಬರ್ ೬ರಂದು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್‌ಗೆ ಸಿಗುತ್ತಿರೋ ಪ್ರತಿಕ್ರಿಯೆಗಳೇ ಬಬ್ರೂ ಗೆಲುವನ್ನು ನಿಚ್ಚಳವಾಗಿಸುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.