Bad manners Review: ಸೂರಿ ದುನಿಯಾದಲ್ಲಿ ರುದ್ರ ತಾಂಡವ

Team Udayavani, Nov 25, 2023, 11:11 AM IST

Bad manners Review: ಸೂರಿ ದುನಿಯಾದಲ್ಲಿ ರುದ್ರ ತಾಂಡವ

ಸೂರಿ ಕೈಯಲ್ಲಿ ಒಂದು ಕಥೆ ಸಿಕ್ಕರೆ ಅದನ್ನು ತುಂಡು ತುಂಡಾಗಿ ಕತ್ತರಿಸಿ, ನಾಲ್ಕು ದಿಕ್ಕುಗಳಿಗೆ ಹಂಚುತ್ತಾರೆ. ಆ ನಾಲ್ಕು ದಿಕ್ಕುಗಳು ನಾಲ್ಕು “ಬಣ್ಣ’ಗಳಿಂದ ಕೂಡಿರುತ್ತದೆ. ಆ ಬಣ್ಣಗಳನ್ನಿಟ್ಟುಕೊಂಡು ಚಿತ್ರಕಥೆ, ಸಂಭಾಷಣೆ, ದೃಶ್ಯ ಜೋಡಣೆ ಎಲ್ಲವನ್ನು ಮಾಡುತ್ತಾರೆ. ಅಂತಿಮವಾಗಿ ಪ್ರೇಕ್ಷಕರಿಗೊಂದು ಕೆಲಸ ಕೊಡುತ್ತಾರೆ. ಮೂಲಕಥೆಯನ್ನು ಜೋಡಿಸಿ, ಸಿನಿಮಾವನ್ನು ಕಣ್ತುಂಬಿಕೊಳ್ಳುವುದೇ ಆ ಕೆಲಸ. ಈ ಹಿಂದಿನ “ಜಾಕಿ’, “ಟಗರು’, “ಕಡ್ಡಿಪುಡಿ’ ಸಿನಿಮಾಗಳಲ್ಲಿ ಈ ತರಹದ ಪ್ರಯೋಗ ಮಾಡಿದ್ದ ಸೂರಿ ಈಗ “ಬ್ಯಾಡ್‌ ಮ್ಯಾನರ್ಸ್‌’ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಇಲ್ಲೂ ನಿಮಗೆ “ಸುಕ್ಕಾ ಸೂರಿ’ ಜೋರಾಗಿಯೇ ಕಾಣಿಸುತ್ತಾರೆ. ಅವರ ಇಷ್ಟದ ಲೊಕೇಶನ್‌ಗಳು, ವಿಚಿತ್ರ ಹೆಸರಿನ ಪಾತ್ರಗಳು, ಗಮನ ಸೆಳೆಯುವ ಸಂಭಾಷಣೆ, ಸಣ್ಣದಾದ ಫ್ಯಾಮಿಲಿ ಡ್ರಾಮಾ.. ಎಲ್ಲವನ್ನು ಸೇರಿಸಿ “ಬ್ಯಾಡ್‌ ಮ್ಯಾನರ್ಸ್‌’ ಮಾಡಿದ್ದಾರೆ.

ಸೂರಿ ಪ್ರತಿ ಬಾರಿಯೂ ಒಂದು ಹೊಸ ಕಥೆಯನ್ನು, ಹೊಸ ಜಾಗಗಳೊಂದಿಗೆ ಕಟ್ಟಿಕೊಡುತ್ತಾರೆ. ಈ ಬಾರಿ ಗನ್‌ ಮಾಫಿಯಾದ ಕಥೆಯನ್ನು ಸೂರಿ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಗನ್‌ ಮಾಫಿಯಾದ ಹಿಂದಿನ ಜಾಲ, ಅದರ ಆರಂಭ, ಒಂದು ಊರಿಗೆ ಊರೇ ಬದಲಾಗುವ ರೀತಿ ಸೇರಿದಂತೆ ಹಲವು ಅಂಶಗಳನ್ನು ಈ ಕಥೆಯಲ್ಲಿ ಹೇಳಿದ್ದಾರೆ. ಮೊದಲೇ ಹೇಳಿದಂತೆ ಕಥೆ ನೇರವಾಗಿ ಸಾಗುವುದಿಲ್ಲ. ಒಂದು ದೃಶ್ಯದ ಕೊಂಡಿ ಪ್ರೇಕ್ಷಕನಿಗೆ ಇನ್ನೆಲ್ಲೋ ಸಿಗುತ್ತದೆ. ಕೆಲವೊಮ್ಮೆ ಕಥೆ ಒಂದೇ ಜಾಗದಲ್ಲಿ ಸುತ್ತಿದಂತೆ ಭಾಸವಾಗುತ್ತದೆ. ಆದರೆ, ಅದನ್ನು ಮರೆಸುವಂತಹ ದೃಶ್ಯಗಳು ಸಿನಿಮಾದ ಕುತೂಹಲವನ್ನು ಮುಂದುವರೆಸಿಕೊಂಡು ಹೋಗುತ್ತವೆ. ಮೇಲ್ನೋಟಕ್ಕೆ ಪಕ್ಕಾ ಮಾಸ್‌ ಸಿನಿಮಾವಾಗಿ ಸಾಗುವ “ಬ್ಯಾಡ್‌ ಮ್ಯಾನರ್ಸ್‌’ನಲ್ಲಿ ಅಲ್ಲಲ್ಲಿ ಒಂದಷ್ಟು ಫಿಲಾಸಫಿಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ “ಗನ್‌’ ಇಡೀ ಸಿನಿಮಾದ ಹೈಲೈಟ್‌. ಇಡೀ ಕಥೆ ಅದರ ಹಿಂದೆಯೇ ಸುತ್ತುತ್ತದೆ.

ನಾಯಕ ಅಭಿಷೇಕ್‌ ಅವರಿಗೆ  ಈ ಪಾತ್ರ ಚೆನ್ನಾಗಿ ಹೊಂದಿಕೊಂಡಿದೆ. ರಫ್ ಅಂಡ್‌ ಟಫ್ ಆಗಿ, ಯಾವುದಕ್ಕೂ ಜಗ್ಗದೇ ಮುಂದೆ ನುಗ್ಗುವ ಪಾತ್ರದಲ್ಲಿ ಅಭಿಷೇಕ್‌ ಮಿಂಚಿದ್ದಾರೆ. ಪಾತ್ರ ಹಾಗೂ ಅಭಿ ಅವರ ಬಾಡಿ ಲಾಂಗ್ವೇಜ್‌ ಎಲ್ಲವೂ ಮಾಸ್‌ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ಉಳಿದಂತೆ ಚಿತ್ರದಲ್ಲಿ ರಚಿತಾ ರಾಮ್‌  ಬಂದು ಹೋಗುತ್ತಾರೆ. ಇನ್ನು, ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬಂದು ಹೋದರೂ ಅವ್ಯಾವುವು ಹೆಚ್ಚೇನು ನೆನಪಿನಲ್ಲಿ

ಉಳಿಯುವುದಿಲ್ಲ. ಸಿನಿಮಾದ ತೂಕ ಹೆಚ್ಚಿಸುವಲ್ಲಿ ಚರಣ್‌ ರಾಜ್‌ ಹಿನ್ನೆಲೆ ಸಂಗೀತ ಹಾಗೂ ಆಮ್ರಿ ಹಾಗೂ ಮಾಸ್ತಿ ಅವರ ಸಂಭಾಷಣೆ ಪ್ರಮುಖ ಪಾತ್ರ ವಹಿಸಿದೆ. ಒಂದು ಮಾಸ್‌ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ “ಬ್ಯಾಡ್‌ ಮ್ಯಾನರ್ಸ್‌’ ಇಷ್ಟವಾಗಬಹುದು.

– ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.