Sandalwood: ʼಬಡವ್ರ ಮಕ್ಕಳು ಬೇಳಿಬೇಕು ಕಣ್ರಯ್ಯʼ ಟ್ರೇಲರ್ ಶೀಘ್ರ
Team Udayavani, Oct 26, 2024, 4:28 PM IST
![badavara makkalu belibeku kanrayya movie](https://www.udayavani.com/wp-content/uploads/2024/10/badavara-620x349.jpg)
![badavara makkalu belibeku kanrayya movie](https://www.udayavani.com/wp-content/uploads/2024/10/badavara-620x349.jpg)
“ಬಡವ್ರ ಮಕ್ಕಳು ಬೇಳಿಬೇಕು ಕಣ್ರಯ್ಯ’ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆದ ಈ ಮಾತು, ಸದ್ಯ ಸಿನಿಮಾವೊಂದಕ್ಕೆ ಇದೇ ಶೀರ್ಷಿಕೆಯಾಗಿದೆ. ಶೀರ್ಷಿಕೆಯಿಂದಲೇ ಪ್ರೇಕ್ಷಕರನ್ನು ಆಕರ್ಷಿಸಬೇಕೆಂದು ನಂಬಿದಂತಿದೆ ಚಿತ್ರತಂಡ.
ಶ್ರೀರಾಮ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಸಿ.ಎಸ್. ವೆಂಕಟೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸದ್ಯ ಚಿತ್ರೀಕರಣ ಮುಕ್ತಾಯಗೊಳಿಸಿದೆ.
ಈ ಸಂದರ್ಭಕ್ಕೆ ಚಿತ್ರದ ಮಾಹಿತಿ ಹಂಚಿಕೊಂಡ ನಿರ್ದೇಶಕ ಮಂಜು ಕವಿ, “ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳ ಪರಿಸ್ಥಿತಿ, ಮಕ್ಕಳಿಗಾಗಿ ತಂದೆ ತಾಯಿ ಪಡುವ ಕಷ್ಟ, ಬಡತನ ನಿಭಾಯಿಸುವುದು, ಬಡ ಕುಟುಂಬಕ್ಕೆ ಸಮಾಜ ಕೊಡುವ ಬೆಲೆ… ಈ ವಿಷಯಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆ. ನವೆಂಬರ್ 10ರಂದು ಟ್ರೇಲರ್ ಬಿಡುಗಡೆಯಾಗಲಿದೆ’ ಎಂದರು.
ಚಿತ್ರದ ನಿರ್ದೇಶನದ ಜೊತೆ ಮಂಜು ಕವಿ, ಸಾಹಿತ್ಯ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್, ಸಂಗೀತ, ರಾಜವರ್ಧನ್, ಲಾವಣ್ಯ, ವೈಭವಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿನು ಮನಸು ಹಿನ್ನೆಲೆ ಸಂಗೀತ, ರೇಣು ಕುಮಾರ್ ಛಾಯಾಗ್ರಹಣ, ಕರಣ್ ಕುಮಾರ್ ಹಾಗೂ ವೆಂಕಿ ಯುಡಿಐ ಅವರ ಸಂಕಲನ, ನಂದ ಹಾಗೂ ಮೈಸೂರು ರಾಜು ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.