Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್


Team Udayavani, Oct 21, 2024, 10:37 AM IST

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

ಬೆಂಗಳೂರು: ರೋರಿಂಗ್‌ ಸ್ಟಾರ್ ಶ್ರೀಮುರಳಿ (Sri Murali) ನಾಯಕನಾಗಿ ನಟಿಸಿರುವ ʼಬಘೀರʼ (Bagheera) ಚಿತ್ರದ ಮಾಸ್‌ ಟ್ರೇಲರ್‌ ರಿಲೀಸ್‌ ಆಗಿದೆ.

ಶೂಟಿಂಗ್‌ ಹಂತದಲ್ಲೇ ಸೌಂಡ್‌ ಮಾಡುತ್ತಿದ್ದ ʼಬಘೀರʼ, ಒಂದಷ್ಟು ವಿಳಂಬದ ಬಳಿಕ ಇದೀಗ ರಿಲೀಸ್‌ಗೆ ಸಿದ್ಧವಾಗಿದೆ.  ಇತ್ತೀಚೆಗೆ ಚಿತ್ರದ ʼರುಧಿರ ಧಾರಾʼ ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು.ಈಗ ಟ್ರೇಲರ್‌ ಬಿಡುಗಡೆ ಮಾಡಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಟ್ರೇಲರ್‌ ನಲ್ಲಿ ಏನಿದೆ?: ಅಮ್ಮ ದೇವರು ಯಾಕಮ್ಮ ರಾಮಾಯಣ, ಮಹಾಭಾರತ ಅಂಥ ಬರುತ್ತಾನೆ ಯಾವಾಗಲೂ ಯಾಕಮ್ಮ ಬರಲ್ಲ ಎಂದು ಮಗಳು ತಾಯಿಯೊಬ್ಬಳ ಬಳಿ ಕೇಳುವುದನ್ನು ತೋರಿಸಲಾಗಿದೆ. ದೇವರು ಯಾವಾಗಲೂ ಬರಲ್ಲ. ಸಮಾಜದಲ್ಲಿ ಪಾಪಗಳು ಮಿತಿ ಮೀರಿದಾಗ, ಒಳ್ಳೆದರ ಮೇಲೆ ಕೆಟ್ಟದ್ದು ಆವಿಯಾದಾಗ, ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಳದಾಗ ಅವನು ಅವತಾರ ಎತ್ತುತ್ತಾನೆ. ಅವನು ಯಾವಾಗಲೂ ದೇವರಾಗೇ ಬರಲ್ಲ, ರಾಕ್ಷಸನಾಗಿಯೂ ಬರಬಹುದು ಎಂದು ಸುಧಾರಾಣಿ ಅವರ ಹಿನ್ನೆಲೆ ಧ್ವನಿಯಲ್ಲಿ ʼಬಘೀರʼನ ಮಾಸ್‌ ಎಂಟ್ರಿಯನ್ನು ತೋರಿಸಲಾಗಿದೆ.

ʼಬಘೀರʼ ಮುಖವಾಡ ಹಾಕಿಕೊಂಡು ಸಾಲು ಸಾಲು ಕ್ರಿಮಿನಲ್‌ ಗಳನ್ನು ಭೀಕರವಾಗಿ ಕೊಲ್ಲುತ್ತಿರುತ್ತಾನೆ. ʼರಕ್ತ ಕುಡಿಯುವ ರಾಕ್ಷಸʼನಾದ ʼಬಘೀರʼ ಯಾರು ಎನ್ನುವುದು ಪೊಲೀಸ್‌ ಇಲಾಖೆಗೂ ತಲೆನೋವು ಆಗಿ ಕಾಡುವುದನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ʼವೇದಾಂತ್‌ʼ ಆಗಿ ಪೊಲೀಸ್‌ ಅವತಾರದಲ್ಲಿ ಶ್ರೀಮುರಳಿ ಮಿಂಚಿದ್ದಾರೆ. ʼಬಘೀರʼ ಹಾಗೂ ಖಾಕಿ ತೊಟ್ಟ ಪೊಲೀಸ್‌ ಆಗಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾಕೆ ಮುಖವಾಡ ಧರಿಸಿಕೊಂಡು ʼಬಘೀರʼ ಕ್ರಿಮಿನಲ್‌ಗಳನ್ನು ಸಾಯಿಸುತ್ತಾನೆ ಎನ್ನುವುದು ಟ್ರೇಲರ್‌ನಲ್ಲಿ ಅವಿತಿರುವ ಗುಟ್ಟು. ಶ್ರೀಮುರಳಿ ಫೈಟ್‌ ಸೀನ್‌ ಗಳೇ ಟ್ರೇಲರ್‌ನಲ್ಲಿ ಹೈಲೈಟ್‌ ಆಗಿ ತೋರಿದೆ.

ಉಳಿದಂತೆ ರುಕ್ಮಿಣಿ ವಸಂತ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಹಾಗೂ ಪ್ರಕಾಶ್‌ ರಾಜ್‌ ಅವರ ಪೊಲೀಸ್‌ ಲುಕ್‌ ನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್‌ ರಾಜ್, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್‌ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ. ತಾಂತ್ರಿಕ ಬಳಗದಲ್ಲಿ ಎ.ಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ, ಪ್ರಣವ್‌ ಶ್ರೀ ಪ್ರಸಾದ್‌ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನದ ಜವಾಬ್ದಾರಿ ಹೊಂದಿದ್ದಾರೆ. ಚೇತನ್‌ ಡಿಸೋಜ್‌ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಬಘೀರʼ ಇದೇ ಅಕ್ಟೋಬರ್‌ 31ರಂದು ಆಗಲಿದೆ.

ಟ್ರೇಲರ್‌ ಫ್ಯಾನ್ಸ್‌ ಗಳು ಫಿದಾ ಆಗಿದ್ದಾರೆ. ಕನ್ನಡದ BATMAN ಬಂದಾಯ್ತು! BOX OFFICE ಕೊಳ್ಳೆ ಹೊಡಿಲಿ ನಮ್ಮ ʼಬಘೀರʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. 3 ವರ್ಷ ವೇಟ್‌ ಮಾಡಿದ್ದಕ್ಕೆ ಸಾರ್ಥಕ ಆಯ್ತು ಎಂದು ಟ್ರೇಲರ್‌ ನೋಡಿ ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Areca

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

Pashu-Sanjevani

Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11:‌ ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ

BBK11:‌ ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ

Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ

Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ

Neelavanti Movie: ಹಾರರ್‌ ನೀಲವಂತಿ

Neelavanti Movie: ಹಾರರ್‌ ನೀಲವಂತಿ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.