ಈ ವರ್ಷ ‘ ಭಜರಂಗಿ 2’ ಬಿಡುಗಡೆ ?
Team Udayavani, Jun 21, 2021, 12:47 PM IST
ಬೆಂಗಳೂರು: ಈ ವರ್ಷ ಸ್ಟಾರ್ ಹೀರೋಗಳ ಸಿನಿಮಾಗಳು ರಿಲೀಸ್ ಗೆ ಕ್ಯೂ ನಿಂತಿವೆ. ಅವುಗಳಲ್ಲಿ ಕರುನಾಡು ಚಕ್ರವರ್ತಿ ಶಿವರಾಜ ಕುಮಾರ್ ಅವರ ಭಜರಂಗಿ 2 ಸಿನಿಮಾ ಕೂಡ ಒಂದು.
ಎ.ಹರ್ಷ ನಿರ್ದೇಶನದ ‘ಭಜರಂಗಿ-2’ ಸಿನಿಮಾ ಶೇ.60 ರಷ್ಟು ಪೂರ್ಣಗೊಂಡಿದ್ದು ಚಿತ್ರದ ಶೂಟಿಂಗ್ ಮುಂದುವರಿಸಲು ತಯಾರಾಗಿದ್ದಾರೆ. ಇಂದಿನಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದು ಉಳಿದ ಶೇ.40 ರಷ್ಟು ಶೂಟಿಂಗ್ ಪೂರ್ಣಗೊಳಿಸಲಿದ್ದೇವೆ, ಸಂಗೀತ್ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೂಡಿ ಕೆಲಸ ಪುನಾರಂಭಿಸಲಿದ್ದೇವೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ.
ಇಂದಿನಿಂದ ಸಿನಿಮಾದ ರೆಕಾರ್ಡಿಂಗ್ ಆರಂಭವಾಗಲಿದ್ದು, ಮೊದಲ ಕಾಪಿ ಹೊರಬರಲಿದೆ. ಭಜರಂಗಿ ಸಿನಿಮಾವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ. ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದ್ದು, ನಿರ್ಮಾಪಕರಾದ ಜಯಣ್ಣ-ಬೋಗೇಂದ್ರ ಸಿನಿಮಾ ಬಿಡುಗಡೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಸರ್ಕಾರ ಥಿಯೇಟರ್ ಗಳಲ್ಲಿ ಶೇ.100 ರಷ್ಟು ಸೀಟಿಗೆ ಅನುಮತಿ ನೀಡುತ್ತದೆಯೇ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಭಜರಂಗಿ ಕಮರ್ಷಿಯಲ್ ಸಿನಿಮಾವಾಗಿದ್ದು, ಥಿಯೇಟರ್ ನಲ್ಲಿ ರಿಲೀಸ್ ಆಗುವ ಮೊದಲ ಸಿನಿಮಾ ವಾಗುವ ಸಾಧ್ಯತೆಯಿದೆ.
ಶಿವರಾಜ್ ಕುಮಾರ್- ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ವಜ್ರಕಾಯ, ಭಜರಂಗಿ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈ ಇಬ್ಬರು ವೇದ ಎಂಬ ಮತ್ತೊಂದು ಸಿನಿಮಾಗಾಗಿ 4ನೇ ಬಾರಿ ಜೊತೆಯಾಗುತ್ತಿದ್ದಾರೆ. ವೇದ ಸಿನಿಮಾ ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾವಾಗಲಿದೆ, ಭಜರಂಗಿ -1 ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ನಾಯಕಿಯಾಗಿದ್ದಾರೆ, ಶೃತಿ, ಲೋಕಿ, ಚೆಲುವರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.