ಮಾಸ್‌ಲೀಡರ್ ಸಾಂಗ್ ರಿಲೀಸ್‌ಗೆ ಮಾಡ್ತಾರೆ ಬಾಲಕೃಷ್ಣ
Team Udayavani, Jul 4, 2017, 10:39 AM IST
ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್’ ಚಿತ್ರದ ಆಡಿಯೋ ಸಿಡಿ ಜುಲೈ 9 ರಂದು ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಈ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡುತ್ತಿರೋದು ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ. ಹೌದು, ವಿಜಯನಗರದಲ್ಲಿರುವ ನ್ಯೂ ಪಬ್ಲಿಕ್ ಗ್ರೌಂಡ್‌ನಲ್ಲಿ ಜು.9 ರ ಸಂಜೆ 6 ಕ್ಕೆ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಅವರು ಅಭಿಮಾನಿಗಳ ಸಮ್ಮುಖದಲ್ಲಿ ಆಡಿಯೋ ಸಿಡಿ ಬಿಡುಗಡೆ ಮಾಡಲಿದ್ದಾರೆ.
ಈ ಹಿಂದೆ “ಶಿವಲಿಂಗ’ ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೂ ಬಾಲಕೃಷ್ಣ ಅವರು ಆಗಮಿಸಿದ್ದರು. ಅದಾದ ಬಳಿಕ ತೆಲುಗಿನಲ್ಲಿ ಬಂದ ಬಾಲಕೃಷ್ಣ ಅಭಿನಯದ “ಗೌತಮಿ ಪುತ್ರ ಶಾಂತಕರ್ಣಿ’ ಚಿತ್ರದಲ್ಲಿ ಶಿವರಾಜಕುಮಾರ್, ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಬಾಲಕೃಷ್ಣ ಅವರು “ಮಾಸ್ ಲೀಡರ್’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷ. ಇನ್ನು, ಅಂದು ಅವರೊಂದಿಗೆ ಅನೇಕ ನಟ,ನಟಿಯರು, ತಂತ್ರಜ್ಞರು ಇತರರು ಹಾಜರಿರಲಿದ್ದಾರೆ.
ಸಂಜೆ ವಿಶೇಷ ರಸಸಂಜೆ ಕಾರ್ಯಕ್ರಮವೂ ಜರುಗಲಿ. “ಮಾಸ್ ಲೀಡರ್’ ಚಿತ್ರದ ಹಾಡೊಂದರಲ್ಲಿ ಶಿವರಾಜಕುಮಾರ್ ಇದೇ ಮೊದಲ ಸಲ ಸ್ಟೆಪ್ ಹಾಕದೆಯೇ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಅದೊಂದು ಬಿಲ್ಡಪ್ಸ್ ಮತ್ತು ಲುಕ್ಸ್ ಇಟ್ಟುಕೊಂಡು ಮಾಡಿರುವ ಹಾಡು. “ಮುಂದೆ ನಿಂತ್ರು ನೂರು ಗನ್ನು, ಜಗ್ಗೊದಿಲ್ಲ ಯುವರಾಜನು …’ ಎಂಬ ಪರವ್‌ಫುಲ್ ಹಾಡನ್ನು ಚೇತನ್‌ಕುಮಾರ್ ಬರೆದಿದ್ದು, ಚೇತನ್ ಗಂಧರ್ವ ದನಿಯಾಗಿದ್ದಾರೆ.
ನರಸಿಂಹ (ಸಹನಾಮೂರ್ತಿ) ನಿರ್ದೇಶಿಸಿರುವ “ಮಾಸ್ ಲೀಡರ್’, ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ತಯಾರಾಗುತ್ತಿದೆ. ಚಿತ್ರದಲ್ಲಿ ವಿಜಯರಾಘವೇಂದ್ರ, ಯೋಗೇಶ್ ಹಾಗೂ ಗುರು ಜಗ್ಗೇಶ್ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಣೀತಾ, ಆಶಿಕಾ ಇತರರು ಇದ್ದಾರೆ. ವೀರ್‌ಸಮರ್ಥ್ ಚಿತ್ರಕ್ಕೆ ಸಂಗೀತ ನೀಡಿದರೆ, ಗುರುಪ್ರಶಾಂತ್ ರೈ ಕ್ಯಾಮೆರಾ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.