ಬಂಡಿಯಪ್ಪ ಹೊಸ ಚಿತ್ರ ತಾರಕಾಸುರ
Team Udayavani, May 8, 2017, 11:54 AM IST
“ರಥಾವರ’ ಸಿನಿಮಾ ನಿರ್ದೇಶನ ಮಾಡಿದ ಚಂದ್ರಶೇಖರ ಬಂಡಿಯಪ್ಪ ಈಗ ಮತ್ತೂಂದು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದು “ತಾರಕಾಸುರ’. ಇದು ಚಂದ್ರಶೇಖರ್ ಬಂಡಿಯಪ್ಪ ಅವರ ಹೊಸ ಚಿತ್ರ.
ಮೇ 10 ರಂದು ಈ ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನರಸಿಂಹಲು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಅವರ ಪುತ್ರ ವೈಭವ್ ನಾಯಕರಾಗಿ ಲಾಂಚ್ ಆಗುತ್ತಿದ್ದಾರೆ. ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾ ಹೊಸ ಹುಡುಗನ ಲಾಂಚ್‌ಗೆ ಸೂಕ್ತವಾಗಿದೆಯಂತೆ.
ಚಿತ್ರಕ್ಕೆ ಧರ್ಮವಿಶ್ ಸಂಗೀತ, ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಚಂದ್ರಶೇಖರ್ ಬಂಡಿಯಪ್ಪ ಒಂದು ಹೊಸ ವಿಷಯವನ್ನು ಹೇಳಲು ಹೊರಟಿದ್ದಾರಂತೆ. ಕನ್ನಡ ಚಿತ್ರರಂಗದಲ್ಲಿ ಬಿಝಿಯಾಗಿರುವ ನಟಿಯೊಬ್ಬರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.