ಬಜಾರ್ ಹೀರೋ ಧನ್ವೀರ್ ಗೆ ದರ್ಶನ್ ಅಂದ್ರೆ ಪ್ರಾಣ!
Team Udayavani, Jan 26, 2019, 7:17 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಡೀ ಕರ್ನಾಟಕದ ಸಕಲ ಭೂಭಾಗಗಳಲ್ಲಿಯೂ ಅಭಿಮಾನಿ ಪಡೆ ಹೊಂದಿರೋ ನಟ. ಅವರನ್ನೇ ಆರಾಧಿಸುವ, ತಮ್ಮ ಸಾಧನೆಯ ಹಾದಿಗೆ ಅವರ ಬದುಕನ್ನೇ ಸ್ಪೂರ್ತಿ ಅಂದುಕೊಂಡಿರುವವರು ದಂಡಿ ದಂಡಿಯಾಗಿ ಕಾಣಸಿಗುತ್ತಾರೆ. ಹೊರ ಜಗತ್ತಿನ ವಿಚಾರ ಬಿಡಿ, ಚಿತ್ರರಂಗದಲ್ಲಿಯೇ ಅಂಥವರ ಸಂಖ್ಯೆ ಸಾಕಷ್ಟಿದೆ. ಹೀಗೆ ದರ್ಶನ್ ಅವರನ್ನೇ ರೋಲ್ ಮಾಡೆಲ್ ಆಗಿಸಿಕೊಂಡು ಬಣ್ಣ ಹಚ್ಚಿದವರಲ್ಲಿ ಬಜಾರ್ ಚಿತ್ರದ ನಾಯಕಲ ಧನ್ವೀರ್ ಕೂಡಾ ಒಬ್ಬರು.
ಹಣವೊಂದಿದ್ದರೆ ಸಿನಿಮಾ ಮಾಡಿ ಬಿಡಬಹುದು, ಹೀರೋ ಕೂಡಾ ಆಗಬಹುದು ಅಂದುಕೊಂಡವರು ಅನೇಕರಿದ್ದಾರೆ. ಆದರೆ ಬಜಾರ್ ನಾಯಕ ಧನ್ವೀರ್ ಮಾತ್ರ ಕೊಂಚ ಡಿಫರೆಂಟು. ಮಾಮೂಲಿಯಾಗಿದ್ರೆ ಅವರೂ ಕೂಡಾ ಸಾಮಾನ್ಯ ಮೆಂಟಾಲಿಟಿಯನ್ನೇ ಹೊಂದಿರುತ್ತಿದ್ದರೇನೋ. ಆದರೆ ಖ್ಯಾತ ನಟನ ಮಗನಾಗಿದ್ದರೂ ಕಷ್ಟಪಟ್ಟು ಮೇಲೆ ಬಂದಿರೋ ಚಾಲೆಂಜಿಂಗ್ ಸ್ಟಾರ್ ಆರಂಭದಿಂದಲೂ ಧನ್ವೀರ್ ಪಾಲಿಗೆ ಸ್ಫೂರ್ತಿ .
ಈ ಕಾರಣದಿಂದಲೇ ನಿರ್ಮಾಪಕ ತಿಮ್ಮೇಗೌಡರ ಮಗನಾಗಿದ್ದರೂ ಕೂಡಾ ಧನ್ವೀರ್ ಕಷ್ಟಪಟ್ಟೇ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ಬಜಾರ್ ಕಥೆ ಕೇಳಿದ ನಂತರ ನಿರ್ದೇಶಕ ಸುನಿ ಬಳಿ ಈ ಪಾತ್ರಕ್ಕಾಗಿ ಏನೇನು ಕಸರತ್ತು ನಡೆಸಬೇಕೆಂದು ಧನ್ವೀರ್ ಮಾರ್ಗದರ್ಶನ ಪಡೆದುಕೊಂಡಿದ್ದರಂತೆ. ಅದಕ್ಕೆ ತಕ್ಕುದಾಗಿ ಎಲ್ಲದರಲ್ಲಿಯೂ ಧನ್ವೀರ್ ಪಳಗಿಕೊಂಡಿದ್ದಾರೆ. ಈ ಸಿನಿಮಾ ಹಾಡೊಂದಕ್ಕಾಗಿ ಅತೀ ಕಡಿಮೆ ಅವಧಿಯಲ್ಲಿ ಸಿಕ್ಸ್ ಪ್ಯಾಕ್ ರೂಪಿಸಿಕೊಂಡಿದ್ದಾರೆಂದರೆ ಧನ್ವೀರ್ ಗುಣ ಎಂಥಾದ್ದೆಂಬುದು ಯಾರಿಗಾದರೂ ಅರ್ಥವಾಗುತ್ತೆ. ಇಂಥಾ ಹಾರ್ಡ್ ವರ್ಕ್ ಗೆಲ್ಲ ದರ್ಶನ್ ಅವರೇ ಸ್ಫೂರ್ತಿ ಎಂಬುದು ಧನ್ವೀರ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.