“ನನ್ನ ಮಾತು ಕೇಳಿ ಬಂದ್ರೆ ನೀನು ಇವತ್ತಿಗೂ ರಾಣಿಯೇ..” ಮದುವೆ ಬಗ್ಗೆ ಮೌನ ಮುರಿದ ವರ್ತೂರು
Team Udayavani, Nov 30, 2023, 9:28 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಇಬ್ಬರು ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ʼಬಿಗ್ ಬಾಸ್ʼ ಕಪ್ ಗೆಲ್ಲುವ ಅಸಲಿ ಆಟ ಶುರುವಾಗಿದೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿ ಜೈಲಿಗೆ ಹೋಗಿ ಬಂದ ಬಳಿಕ ಬಿಗ್ ಬಾಸ್ ಮನೆಯೊಳಗೆ ಅಷ್ಟಾಗಿ ಸುದ್ದಿಯಲ್ಲಿ ಇಲ್ಲದಿದ್ರೂ ಮನೆಯ ಹೊರಗೆ ಸುದ್ದಿಯಲ್ಲಿದ್ದಾರೆ. ಹುಲಿ ಉಗುರು ಬಳಿಕ ಅವರ ಮದುವೆಯ ವಿಚಾರ ಹೊರಗಡೆ ಚರ್ಚೆ ಆಗಿದೆ.
ವರ್ತೂರು ಸಂತೋಷ್ ಅವರು ಮದುವೆ ಆಗಿದ್ದಾರೆ. ಆದರೂ ಅವರು ಮದುವೆ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಮದುವೆ ಆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಲ್ಲದೆ ಅವರು ಹೆಣ್ಣು ಪೀಡುಕ, ಮಾದಕ ವ್ಯಸನಿ, ಪತ್ನಿ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ವರ್ತೂರು ಸಂತೋಷ್ ಅವರ ಕೆಲ ಸಂಬಂಧಿಗಳು ಆರೋಪಿಸಿದ್ದಾರೆ.
ಇದೀಗ ಈ ಬಗ್ಗೆ ವರ್ತೂರು ಮೌನ ಮುರಿದಿದ್ದಾರೆ. ಚಟುವಟಿಕೆಯೊಂದರಲ್ಲಿ ತನ್ನ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
“ದೊಡ್ಡಪ್ಪ ನಾನು ಮೊದಲೇ ಹೇಳಿದ್ದೆ ನೀನು ಹೋಗು ತಾಳಿ ಕಟ್ಟು ಅಂತ ಹೇಳಿದ್ರೆ ನಾನು ಕಟ್ಟುತ್ತೇನೆ. ನಾನು ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಮುಂದೆ ಇದು ಆಗ್ತಾ ಆಗ್ತಾ ನನ್ನಮ್ಮನ ಕಡೆಗಣಿಸಲು ಶುರು ಮಾಡಿದ್ರು. ನಾನು ಸಂಪಾದನೆ ಮಾಡಿರುವ ಜನ ಅವರನೆಲ್ಲ ತೊರೆದು ಇವರ ಹಿಂದೆ ಹೋಗೋಕೆ ಅದು ಸಾಧ್ಯವಿಲ್ಲ. ಹೋಗ್ತೀನಿ ಅವ್ರ ಮನೆಗೆ ಹತ್ರ. ನಾನು ಮಾತು ಪ್ರಕಾರ ಬಂದ್ರೆ ನೀನು ರಾಣಿ ಇವತ್ತಿಗೂ. ಬಾ ಅಂಥ ಕರಿತೀನಿ. ಫಸ್ಟ್ ನನ್ನ ಗೇಟ್ ಯಿಂದ ಆಚೆ ಹೋಗು ಅಂದ. ಆವತ್ತೇ ಮಾತು ಕೊಟಿದ್ದೀನಿ. ಇವತ್ತು ನಾನು ಆ ಮಾತಿಗೆ ನಿಂತಿದ್ದೇನೆ” ಎಂದರು.
ಇಂದು ರಾತ್ರಿ(ಗುರುವಾರ, ನ.30 ರಂದು) ಪೂರ್ತಿ ಕಾರ್ಯಕ್ರಮ ಪ್ರಸಾರ ಆಗಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.