ಗಣೇಶ ಪಟಾಕಿ ಪೊಲೀಸ್‌ ಗೆಟಪ್‌ನಲ್ಲಿ ಬೇಜಾನ್‌ ಹವಾ

Team Udayavani, May 24, 2017, 11:32 AM IST

ganesh-in-pataki.jpg

ಗಣೇಶ್‌ ಅಭಿನಯದ ನಾಡಿದ್ದು ಅಂದರೆ ಮೇ 26 ರಂದು ರಾಜ್ಯಾದ್ಯಂತ “ಪಟಾಕಿ’ ಸಿಡಿಯುವುದಕ್ಕೆ ಸಜ್ಜಾಗಿದೆ. ಅನುಪಮ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಎಸ್‌.ವಿ.ಬಾಬು ಅವರು ಈ ಬಾರಿ ನಿರ್ಮಾಣದ ಜೊತೆಗೆ ವಿತರಣೆಗೂ ಇಳಿದಿದ್ದಾರೆ. ವಿತರಣೆ ಮಾಡುವುದಕ್ಕೆಂದೇ ಹೊಸ ಸಂಸ್ಥೆ ಹುಟ್ಟುಹಾಕಿರುವ ಬಾಬು, ತಮ್ಮ ಸಂಸ್ಥೆಯ ಮೊದಲ ಸಿನಿಮಾವಾಗಿ ತಮ್ಮದೇ ನಿರ್ಮಾಣದ “ಪಟಾಕಿ’ಯನ್ನು ವಿತರಣೆ ಮಾಡಲಿದ್ದಾರೆ.

ಗಣೇಶ್‌ ಇದುವರೆಗೂ ಮಾಡಿದ ಪಾತ್ರವೇ ಬೇರೆ, ಈ ಶುಕ್ರವಾರ ಬಿಡುಗಡೆಯಾಗುತ್ತಿರುವ “ಪಟಾಕಿ’ ಚಿತ್ರದ ಪಾತ್ರವೇ ಇದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಎ.ಸಿ.ಪಿಯಾಗಿ ಕಾಣಿಸಿಕೊಂಡಿದ್ದಾರೆ. “ನಿಜಕ್ಕೂ ಸವಾಲಿನ ಪಾತ್ರ. ಬಹಳ ಖುಷಿಯಿಂದ ಈ ಚಿತ್ರದಲ್ಲಿ ನಟಿಸಿದ್ದೀನಿ. ಸಾಯಿಕುಮಾರ್‌ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಅವರ ಪಾತ್ರ ನೋಡಿ ಥ್ರಿಲ್‌ ಆದವರು ನಾವು. ಅವರೆದುರು ನಿಂತು ಡೈಲಾಗ್‌ ಹೊಡೆಯ ಬೇಕಾಗಿತ್ತು. ಈ ಚಿತ್ರ ನಿಜಕ್ಕೂ ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟುತ್ತದೆ’ ಎನ್ನುತ್ತಾರೆ ಗಣೇಶ್‌.

ಈ ಹಿಂದೆ ಸ್ವಮೇಕ್‌ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ನಿರ್ದೇಶಕ ಮಂಜು ಸ್ವರಾಜ್‌ ಮೊದಲ ಬಾರಿಗೆ ರೀಮೇಕ್‌ ಮಾಡಿದ ಸಿನಿಮಾವಿದು. ಹೇಳಿಕೊಳ್ಳಲು ಇದು ರೀಮೇಕ್‌ ಸಿನಿಮಾವಾದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಕೂಡಾ ಮಾಡಿಕೊಂಡಿದ್ದಾರಂತೆ ಮಂಜು ಸ್ವರಾಜ್‌. “ಮೂಲ ಕಥೆಯ ಒನ್‌ಲೈನ್‌ ಇಟ್ಟುಕೊಂಡು ಉಳಿದಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ನಿಮಗೆ ಈ ಚಿತ್ರದಲ್ಲಿ ಶೇ 40 ರಷ್ಟು ಬದಲಾವಣೆ ಕಾಣುತ್ತದೆ.

ನಮ್ಮ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಅದರಲ್ಲಿ ಕೆಲವು ಪಾತ್ರಗಳನ್ನು ಕೂಡಾ ಸೇರಿಸಿದ್ದೇವೆ. ಮೂಲ ಚಿತ್ರದಲ್ಲಿ ಸಾಧುಕೋಕಿಲ ಅವರ ಪಾತ್ರವೇ ಇಲ್ಲ. ಆದರೆ “ಪಟಾಕಿ’ಯಲ್ಲಿ ಸೇರಿಸಿದ್ದೇವೆ. ಇಲ್ಲಿ ಸಾಧು ಕೋಕಿಲ ಅವರ ಪಾತ್ರ ಎಷ್ಟು ಹೊಂದಿಕೆಯಾಗಿದೆ ಎಂದರೆ ಆ ಪಾತ್ರವನ್ನು ಬಿಟ್ಟು ಸಿನಿಮಾ ನೋಡಲು ಸಾಧ್ಯವಾಗುವುದಿಲ್ಲ’ ಎಂದು ತಾವು ಮಾಡಿಕೊಂಡ ಬದಲಾವಣೆ ಬಗ್ಗೆ ಹೇಳುತ್ತಾರೆ ಮಂಜು ಸ್ವರಾಜ್‌.

ತೆಲುಗಿನ “ಪಟಾಸ್‌’ ಚಿತ್ರದಲ್ಲಿ ನಟಿಸುವಾಗಲೇ, ಅವರು ನಿರ್ಮಾಪಕ ಎಸ್‌.ವಿ. ಬಾಬುಗೆ ಫೋನ್‌ ಮಾಡಿ, ಈ ಚಿತ್ರವನ್ನು ಕನ್ನಡದಲ್ಲಿ ಮಾಡಿದರೆ ಚೆನ್ನಾಗಿರುತ್ತೆ ಎಂದು ಹೇಳಿದ್ದರಂತೆ. “ಈ ಚಿತ್ರವನ್ನು ನನ್ನ ಮಗ ಆದಿ ಜೊತೆಗೆ ಮಾಡಬೇಕು ಅಂತ ಆಸೆ ಇತ್ತು. ಆದರೆ, ಅವನಿಗೆ ಹೆವಿ ಆಗುತ್ತದೆ. ಆ ಪಾತ್ರಕ್ಕೆ ಯಾರು ಸರಿ ಂದು ಯೋಜಿಸಿದಾಗ, ಗಣೇಶ್‌ ಸರಿ ಎನಿಸಿತು. ನಾನು ಅವರ ದೊಡ್ಡ ಅಭಿಮಾನಿ. ಅವರ ಅಭಿನಯ ಬಹಳ ಚೆನ್ನಾಗಿದೆ.

ಇನ್ನು ಚಿತ್ರ ಸಹ ಚೆನ್ನಾಗಿ ಬಂದಿದೆ. ಎಲ್ಲರಿಗೂ ಇಷ್ಟವಾಗುವಂತಹ ಒಂದು ಪ್ಯಾಕೇಜ್‌ ಸಿನಿಮಾ ಇದು’ ಎನ್ನುತ್ತಾರೆ ಸಾಯಿಕುಮಾರ್‌. ಸಾಯಿಕುಮಾರ್‌ ಇಲ್ಲದಿದ್ದರೆ ಈ ಚಿತ್ರ ಆಗುತ್ತಲೇ ಇರಲಿಲ್ಲ ಎಂದವರು ಎಸ್‌.ವಿ. ಬಾಬು. “ಚಿತ್ರದ ರೈಟ್‌ ಕೊಡಿಸಿದ್ದೇ ಅವರು. ಹಾಗಾಗಿ ಅವರೇ ಈ ಚಿತ್ರಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ. ಇನ್ನು ಗಣೇಶ್‌ಗೆ ಚಿತ್ರ ತೋರಿಸಿದಾಗ, ಅವರು ಎಮೋಷನಲ್‌ ಆಗಿ, ತಕ್ಷಣವೇ ಈ ಚಿತ್ರ ಮಾಡೋಣ ಎಂದರು.

ಮೂಲ ಚಿತ್ರವನ್ನು ಇಲ್ಲಿನ ನೇಟಿವಿಟಿಗೆ ಹೊಂದಿಸಿ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಬಾಬು. ಚಿತ್ರದಲ್ಲಿ ಗಣೇಶ್‌ ಜೊತೆಗೆ ರನ್ಯಾ ರಾವ್‌, ಸಾಯಿಕುಮಾರ್‌, ಸಾಧು ಕೋಕಿಲ, ಆಶೀಶ್‌ ವಿದ್ಯಾರ್ಥಿ, ಪ್ರಿಯಾಂಕಾ, ಧರ್ಮ, ವಿಜಯ್‌ ಚೆಂಡೂರ್‌ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತ ಮತ್ತು ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.