![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 10, 2021, 2:44 PM IST
ಒಂದು ಸಿನಿಮಾ ಸೆಟ್ಟೇರಿದ ನಂತರ ತೆರೆಗೆ ಬರೋದಕ್ಕೆ ಹೆಚ್ಚೆಂದರೆ, ಎರಡು ಮೂರು ವರ್ಷ ಸಮಯ ತೆಗೆದುಕೊಳ್ಳಬಹುದು. ಆದರೆ ಇಲ್ಲೊಂದು ಸಿನಿಮಾ ಸೆಟ್ಟೇರಿದ ಬರೋಬ್ಬರಿ ಒಂಬತ್ತು ವರ್ಷಗಳ ನಂತರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಬೀರ’.
ಸುಮಾರು ಒಂಬತ್ತು ವರ್ಷಗಳ ಹಿಂದೆ ಸರ್ದಾರ್ ಸತ್ಯ, ಶುಭಾ ಪೂಂಜಾ, ರೂಪಿಕಾ, ಸಾಧು ಕೋಕಿಲ, ಸತ್ಯಜಿತ್, ಸುಚೇಂದ್ರ ಪ್ರಸಾದ್ “ಬೀರ’ ಚಿತ್ರ ಸೆಟ್ಟೇರಿತ್ತು. ಬೆಂಗಳೂರು, ಬ್ಯಾಂಕಾಕ್ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿತ್ತು. ಆ ನಂತರ ಕಾರಣಾಂತರಗಳಿಂದ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ತಡವಾಯಿತು. ಇದರ ನಡುವೆಯೇ ನಿರ್ಮಾಪಕರು ಚಿತ್ರ ಮುಂದುವರೆಸಲು ಹಿಂದೇಟು ಹಾಕಿದ್ದರಿಂದ, ಆ ಚಿತ್ರದ ಹೊಣೆ ಮತ್ತೂಬ್ಬ ನಿರ್ಮಾಪಕರ ಹೆಗಲಿಗೇರಿತು. ಅಂತೂ, ಈಗ “ಬೀರ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ತೆರೆಗೆ ಬರಲು ತಯಾರಾಗಿದೆ.
ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದ “ಬೀರ’ ಚಿತ್ರತಂಡ, ಚಿತ್ರ ತಡವಾಗಿದ್ದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿತು. ಮೊದಲಿಗೆ ಮಾತನಾಡಿದ ಚಿತ್ರದ ನಿರ್ದೇಶಕ ಸಂಜಯ್, “ಮೊದಲಿನ ನಮ್ಮ ಯೋಜನೆಯಂತೆ, ಸಿನಿಮಾ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ನಿರ್ಮಾಪಕರು ಬದಲಾಗಿದ್ದರಿಂದ, ಮತ್ತು ಕೆಲ ತಾಂತ್ರಿಕ ಕಾರಣಗಳಿಂದ ಸಿನಿಮಾ ತಡವಾಯಿತು. ಅದಾದ ನಂತರ ಕೋವಿಡ್ ಆತಂಕ ಎದುರಾಯಿತು. ಹೀಗಾಗಿ ಅಂದುಕೊಂಡ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ’ ಎಂದು ಚಿತ್ರ ತಡವಾದ ಕಾರಣವನ್ನು ವಿವರಿಸಿದರು.
ಸದ್ಯ “ಬೀರ’ ಸಿನಿಮಾವನ್ನು ಮುಂದುವರೆಸುವ ಹೊಣೆಯನ್ನು “ಭಾರ್ಗವಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಪಕಿ ಭಾರ್ಗವಿ ವಹಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕಿ ಭಾರ್ಗವಿ, “ಒಂದು ಒಳ್ಳೆಯ ಸಿನಿಮಾ ಅರ್ಧಕ್ಕೆ ನಿಂತರೆ, ಅದರಿಂದ ಕಲಾವಿದರು ಮತ್ತು ತಂತ್ರಜ್ಞರಿಗೆ ಬಹಳ ತೊಂದರೆ ಯಾಗುತ್ತದೆ. ಹೀಗಾಗಿ ಸಿನಿಮಾ ಅರ್ಧಕ್ಕೆ ನಿಲ್ಲಬಾರದು ಎಂಬ ಕಾರಣಕ್ಕೆ ಈ ಸಿನಿಮಾವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದೇನೆ. ಈಗಾಗಲೇ “ಬೀರ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಹೊಸವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.
ಇದನ್ನೂ ಓದಿ:ಹೊಸ ವರ್ಷಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ವಿಕ್ಕಿ-ಕತ್ರಿನಾ ಮದುವೆ ವಿಡಿಯೋ?
ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಸರ್ದರ್ ಸತ್ಯ, “ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಹಳ್ಳಿ ಹುಡುಗ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ಆ್ಯಕ್ಷನ್ಸ್, ಎಮೋಶನ್ಸ್, ಸೆಂಟಿಮೆಂಟ್, ಹಳ್ಳಿಯ ಸೊಗಡು ಎಲ್ಲವೂ ಇದೆ. ತಡವಾದರೂ ಒಂದೊಳ್ಳೆ ಸಿನಿಮಾ ಅರ್ಧಕ್ಕೆ ನಿಲ್ಲದೆ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು.
ವೇದಿಕೆ ಮೇಲಿದ್ದ ನಟಿ ಸಂಹಿತಾ ವಿನ್ಯಾ, ನಿರ್ಮಲ, ಅಣಜಿ ನಾಗರಾಜ್ ಮೊದಲಾದವರು ಚಿತ್ರದ ಬಗ್ಗೆ ಮಾತನಾಡಿ ದರು. “ಬೀರ’ ಚಿತ್ರದ 5 ಹಾಡುಗಳಿಗೆ ಮನ್ಸೂರ್ ಬಾಪ್ ಜಿ ಸಂಗೀತವಿದ್ದು, ಚಿತ್ರಕ್ಕೆ ಬಾಲಗಣೇಶ್ ಛಾಯಾಗ್ರಹಣ, ಗಿರೀಶ್ ಕುಮಾರ್ ಕೆ. ಸಂಕಲನವಿದೆ. ಚಿತ್ರದಲ್ಲಿ ಬರೋಬ್ಬರಿ 6 ಫೈಟ್ಸ್ ಇದ್ದು ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಸಾಹಸ ಸಂಯೋಜಿಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.