ಮರೆಯುವ ಮುನ್ನ ಒಂದಾದ ಗಣೇಶ್-ಪ್ರೀತಂ
Team Udayavani, Sep 16, 2018, 11:18 AM IST
ಪ್ರೀತಂ ಗುಬ್ಬಿ ಜೊತೆಗೊಂದು ಹೊಸ ಸಿನಿಮಾ ಮಾಡುತ್ತಿರುವುದಾಗಿ ನಟ ಗಣೇಶ್ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಆದರೆ, ಆ ಚಿತ್ರಕ್ಕೆ ಟೈಟಲ್ ಆಗಿರಲಿಲ್ಲ. ಈಗ ಚಿತ್ರದ ಶೀರ್ಷಿಕೆ ಅಂತಿಮವಾಗಿದೆ. ಚಿತ್ರಕ್ಕೆ “ಮರೆಯುವ ಮುನ್ನ’ ಎಂದು ಟೈಟಲ್ ಇಡಲಾಗಿದೆ.
ಈ ಮೂಲಕ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದಾರೆ. ನಿಮಗೆ ಗೊತ್ತಿರುವಂತೆ ಇವರಿಬ್ಬರ ಕಾಂಬಿನೇಶನ್ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈಗಾಗಲೇ “ಮಳೆಯಲಿ ಜೊತೆಯಲಿ’ ಹಾಗೂ “ದಿಲ್ ರಂಗೀಲಾ’ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ಕೆಲಸ ಮಾಡಿತ್ತು.
ಈಗ “ಮರೆಯುವ ಮುನ್ನ’ ಚಿತ್ರದ ಮೂಲಕ ಮೂರನೇ ಸಿನಿಮಾಕ್ಕೆ ಅಣಿಯಾಗಿದೆ. ಸದ್ಯಕ್ಕೆ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಬಿಟ್ಟರೆ ಮಿಕ್ಕಂತೆ ಯಾವುದೂ ಫೈನಲ್ ಆಗಿಲ್ಲ. ಈಗಷ್ಟೇ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದಾರೆ ಪ್ರೀತಂ ಗುಬ್ಬಿ.
ಗಣೇಶ್ “ಗೀತಾ’ ಸಿನಿಮಾ ಮುಗಿಸಿಕೊಂಡು “ಮರೆಯುವ ಮುನ್ನ’ ತಂಡ ಸೇರಿಕೊಳ್ಳಲಿದ್ದಾರೆ. ಸದ್ಯ ಗಣೇಶ್ ಅವರ “ಆರೆಂಜ್’ ಹಾಗೂ “ಗಿಮಿಕ್’ ಚಿತ್ರೀಕರಣ ನಡೆಯುತ್ತಿದೆ. ಅವೆರಡು ಮುಗಿದ ನಂತರ “ಗೀತಾ’ ಆರಂಭವಾಗಲಿದ್ದು, ಈ ಚಿತ್ರದ ನಿರ್ಮಾಣದಲ್ಲಿ ಗಣೇಶ್ ಕೂಡಾ ಕೈ ಜೋಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.