Toxic Movie: ಯಶ್ ʼಟಾಕ್ಸಿಕ್ʼ ಅಖಾಡಕ್ಕೆ ಖಡಕ್ ಬ್ರಿಟೀಷ್ ನಟ ಎಂಟ್ರಿ
Team Udayavani, Sep 30, 2024, 2:57 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ʼಟಾಕ್ಸಿಕ್ʼ ಶೂಟಿಂಗ್ ಹಂತದಲ್ಲಿ ಮತ್ತೆ ಮತ್ತೆ ಸದ್ದು ಮಾಡುತ್ತಿದೆ. ಸಿನಿಮಾದ ಕುರಿತು ಯಾವುದೇ ಅಪ್ಡೇಟ್ ಗಳು ಅಧಿಕೃತವಾಗಿ ಕೇಳಿ ಬರುತ್ತಿಲ್ಲದಿದ್ರೂ ರೂಮರ್ಸ್ ಗಳು ದೊಡ್ಡದಾಗಿಯೇ ಹರಿದಾಡುತ್ತಿದೆ.
ಮಾಲಿವುಡ್ ಡೈರೆಕ್ಟರ್ ಗೀತು ಮೋಹನ್ ದಾಸ್ (Geethu Mohandas) ದೊಡ್ಡದಾಗಿಯೇ ʼಟಾಕ್ಸಿಕ್ʼ ಸಿನಿಮಾವನ್ನು ಕಟ್ಟಿಕೊಡಲಿದ್ದಾರೆ. ಇದಕ್ಕಾಗಿ ಪಾತ್ರವರ್ಗದಿಂದ ಹಿಡಿದು ಎಲ್ಲಾ ರೀತಿಯ ತಯಾರಿಯನ್ನು ಗೀತು ಮೋಹನ್ ದಾಸ್ ಮಾಡಿಕೊಂಡಿದ್ದಾರೆ.
ಆರಂಭಿಕವಾಗಿ ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಸೆಟ್ ನಿರ್ಮಿಸಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ.
ಪಾತ್ರ ವರ್ಗದ ಬಗ್ಗೆ ʼಟಾಕ್ಸಿಕ್ʼ ಸಖತ್ ಕ್ರೇಜಿ ಆಗಿ ಕುತೂಹಲ ಹೆಚ್ಚಿಸಿದೆ. ಈಗಾಗಲೇ ನಯನತಾರ (Nayanthara) ಜೊತೆಗೆ ಅಕ್ಷಯ್ ಒಬೆರಾಯ್ (Akshay Oberoi), ತೆಲುಗು-ತಮಿಳು ನಟ ತಣಿಕೆಲ್ಲ ಭರಣಿ ಅವರು ಚಿತ್ರತಂಡದ ಜತೆ ಸೇರಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿ (Kiara Advani) ಹುಮಾ ಖುರೇಷಿ (Human Qureshi) ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ನವಾಝುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಇದೀಗ ಬ್ರಿಟೀಷ್ ನಟನೊಬ್ಬ ʼಟಾಕ್ಸಿಕ್ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಬ್ರಿಟೀಷ್ ನಟ ಬೆನೆಡಿಕ್ಟ್ ಗ್ಯಾರೆಟ್ ಅವರು ʼಟಾಕ್ಸಿಕ್ʼ ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಬೆನೆಡಿಕ್ಟ್ ಗ್ಯಾರೆಟ್ ಅವರು ಇತ್ತೀಚೆಗೆ ಅವರ ಜಿಮ್ ಬಾಡಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದನ್ನು ನೋಡಿ ಬಳಕೆದಾರರೊಬ್ಬರು ʼಕೆಜಿಎಫ್-3ʼ ನ ಅಧೀರ ಎಂದು ಕಮೆಂಟ್ ಮಾಡಿದ್ದಾರೆ.
ಇದಕ್ಕೆ ಬೆನೆಡಿಕ್ಟ್ ಸದ್ಯಕ್ಕೆ ನಾನು ಯಶ್ ಜತೆ ಕೆಲಸ ಮಾಡುತ್ತಿದ್ದೇನೆ” ಎಂದು ಕಮೆಂಟ್‌ಗೆ ರಿಪ್ಲೈ ಕೊಟ್ಟಿದ್ದಾರೆ. ಆ ಮೂಲಕ ʼಟಾಕ್ಸಿಕ್ʼ ನಲ್ಲಿ ತಾನು ಇರಲಿದ್ದೇನೆ ಎನ್ನುವ ಸುಳಿವನ್ನು ನೀಡಿದ್ದಾರೆ.
ಬ್ರಿಟೀಷ್ ನಟನಾಗಿದ್ದರೂ ಬೆನೆಡಿಕ್ಟ್ ಅವರಿಗೆ ಭಾರತೀಯ ಸಿನಿಮಾರಂಗ ಹೊಸತಲ್ಲ. ಬಾಲಿವುಡ್ ನಲ್ಲಿ ʼಔರಾನ್ ಮೇ ಕಹಾನ್ ದಮ್ ಥಾʼ ಸೇರಿದಂತೆ ʼಕಂಜ್ಯೂರಿಂಗ್ ಕಣ್ಣಪ್ಪನ್ʼ ಎನ್ನುವ ತಮಿಳು ಹಾಗೂ ಕೆಲ ಮರಾಠಿ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.
300 ಕೋಟಿ ರೂ. ಬಜೆಟ್ ನಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
2025ರ ಏ.10 ರಂದು ʼಟಾಕ್ಸಿಕ್ʼ ಪ್ಯಾನ್ ಇಂಡಿಯಾ ಭಾಷೆ ಸೇರಿದಂತೆ ವಿದೇಶಿ ಭಾಷೆಯಲ್ಲೂ ತೆರೆಗೆ ಬರಲಿದೆ. ಆದರೆ ಇನ್ನೊಂದೆಡೆ ಏ.10ರಂದು ʼಟಾಕ್ಸಿಕ್ʼ ರಿಲೀಸ್ ಆಗುವುದು ಅನುಮಾನ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.