ಮಹಿಳಾ ದೌರ್ಜನ್ಯದ ಸುತ್ತ “ಬೆಂಕಿಯಲ್ಲಿ ಅರಳಿದ ಹೂವು’
ಅನುಪಮಾ ಸಿನಿಮಾ
Team Udayavani, Jan 23, 2020, 7:02 AM IST
“ಬೆಂಕಿಯಲ್ಲಿ ಅರಳಿದ ಹೂವು…’ ಬಹುಶಃ ಈ ಶೀರ್ಷಿಕೆ ಓದಿದಾಗ ನೆನಪಾಗೋದೇ ನಟಿ ಸುಹಾಸಿನಿ ಹಾಗು ಕಮಲಹಾಸನ್ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕೆ.ಬಾಲಚಂದರ್ ನಿರ್ದೇಶನದ ಈ ಚಿತ್ರ ಇಂದಿಗೂ ಎವರ್‌ಗ್ರೀನ್. ಈಗ ಆ ವಿಷಯದ ಪ್ರಸ್ತಾಪ ಮಾಡೋಕೆ ಕಾರಣ, ಇದೇ ಹೆಸರಿನ ಚಿತ್ರವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಇದೀಗ ರಿಲೀಸ್‌ಗೆ ರೆಡಿಯಾಗಿದೆ. ದೇವಿಶ್ರೀ ಪ್ರಸಾದ್ ನಿರ್ದೇಶಕರು.
ವಿಶು ಆಚಾರ್ ನಿರ್ಮಾಣದ ಜೊತೆಗೆ ಹೀರೋ ಆಗಿಯೂ ನಟಿಸಿದ್ದಾರೆ. ಅಂದಹಾಗೆ, ಇದೊಂದು ಮಧ್ಯಮ ವರ್ಗದ ನೊಂದ ಹೆಣ್ಣಿನ ಕಥೆ ಇದೆ. ಅದರಲ್ಲೂ ನಾಯಕ ವಿಶು ಆಚಾರ್ ಅವರು, ಆರಂಭದಲ್ಲಿ ಒಂದಷ್ಟು ಕಹಿ ಅನುಭವ ಕಂಡವರು. ಅಲ್ಲದೆ, ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ನಡೆಯುವ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ನೋಡಿದವರು. ಇವೆಲ್ಲಾ ಅಂಶ ಇಟ್ಟುಕೊಂಡು, ಚಿತ್ರ ಮಾಡುವ ಉದ್ದೇಶದಿಂದ ಸಿನಿಮಾ ಮಾಡಿದ್ದಾರೆ.
ನಿರ್ದೇಶಕ ದೇವಿಶ್ರೀ ಪ್ರಸಾದ್ ಕೂಡ ಹಾಸನದಲ್ಲಿ ನೋಡಿ, ಕೇಳಿದ ಒಂದಷ್ಟು ಅಂಶಗಳನ್ನೂ ಚಿತ್ರಕ್ಕೆ ಸೇರಿಸಿದ್ದಾರೆ. ಚಿತ್ರದಲ್ಲಿ ಅನುಪಮಾ ಗೌಡ ಪ್ರಮುಖ ಆಕರ್ಷಣೆ. ಚಿತ್ರದಲ್ಲಿ ಅವರು ಒಬ್ಬ ಸೋಮಾರಿ ಗಂಡನ ಜೊತೆ ಸಂಕಷ್ಟಗಳೊಂದಿಗೆ ಬದುಕು ಸವೆಸುವ ಹೆಣ್ಣಾಗಿ ಪಾತ್ರ ಮಾಡಿದ್ದಾರೆ. ಅವರೂ ಸಹ ಸಾಕಷ್ಟು ಸಮಸ್ಯೆ ಅನುಭವಿಸಿದ್ದೂ ಇದೆ. ಹಾಗಾಗಿ ರಿಯಲ್ ಲೈಫ್ಗೂ ಹತ್ತಿರವಾದಂತಹ ಕಥೆ ಇಲ್ಲಿರುವುದರಿಂದ ಅವರು ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರಂತೆ.
ಅಂದಹಾಗೆ, ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಚಿತ್ರದ ಹಾಡು ಗಳನ್ನು ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ವಿ.ಮನೋಹರ್ ಸಂಗೀತದಲ್ಲಿ ದೊರಂಗೌ ಅವರು ಹೆಣ್ಣಿನ ಬವಣೆ ಕುರಿತು ಹಾಡನ್ನೂ ಬರೆದಿದ್ದಾರಂತೆ. ನಿರ್ಮಾಪಕರು ಇದೇ ವೇಳೆ ಚಿತ್ರಮಂದಿರಗಳ ಮಾಲೀಕರಿಗೆ ಮನವಿ ಇಟ್ಟರು. “ಇಂದು ಚಿತ್ರ ನೋಡಬಯಸುವ ಹೆಚ್ಚು ಮಂದಿ ಆಟೋ ಚಾಲಕರು, ಕಾರ್ಮಿಕರು, ಗಾರ್ಮೆಂಟ್ಸ್, ಹೋಟೆಲ್ ನೌಕರರು.
ಇವರೆಲ್ಲಾ ಮಾಲ್‌ಗೆ ಹೋಗುವುದಿಲ್ಲ. ಹೋಗಲು ಅಷ್ಟೊಂದು ಹಣಕಾಸಿನ ಶಕ್ತಿಯೂ ಇರೋದಿಲ್ಲ. ಹಾಗಾಗಿ, ಚಿತ್ರಮಂದಿರ ಚೆನ್ನಾಗಿಟ್ಟು ಕೊಂಡರೆ, ಇವರ ಸಂಖ್ಯೆ ಹೆಚ್ಚುತ್ತದೆ. ಕನ್ನಡ ಸಿನಿಮಾಗಳಿಗೂ ಒಳ್ಳೆಯದಾಗುತ್ತೆ’ ಅಂದರು. ಈ ವೇಳೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಕೃಷ್ಣೇಗೌಡ, ನಾಗೇಂದ್ರ ಪ್ರಸಾದ್, ನಟ ಲಕ್ಷಣ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.