“ಭೈರವ ಗೀತ’ ಮುಂದಕ್ಕೆ
Team Udayavani, Nov 28, 2018, 4:55 PM IST
ಡಾಲಿ ಧನಂಜಯ್ ಅಭಿನಯದ “ಭೈರವ ಗೀತ’ ಚಿತ್ರದ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ರಾಮ್ಗೋಪಾಲ್ ವರ್ಮಾ “ಲಕ್ಷ್ಮೀಸ್ ಎನ್ಟಿಆರ್’ ಸಿನಿಮಾದ ಕೆಲಸ ಹಾಗೂ “ಭೈರವ ಗೀತ’ ಚಿತ್ರದ ಬಿಡುಗಡೆಗೆ ಓಡಾಡುತ್ತಿದ್ದಾರೆ. ಈ ನಡುವೆ “ಭೈರವ ಗೀತ’ ಚಿತ್ರಕ್ಕೆ ಸೆನ್ಸಾರ್ ಸಂಕಷ್ಟ ಎದುರಾಗಿದ್ದು, ಈ ಮುನ್ನ ನಿಗದಿಪಡಿಸಿದಂತೆ ನವೆಂಬರ್ 29 ಅಂದರೆ ನಾಳೆ ಚಿತ್ರ ಬಿಡುಗಡೆಯಾಗಬೇಕಿತ್ತು.
ಆದರೆ ಇಂದು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಸೆನ್ಸಾರ್ ಹಾಗೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅಲ್ಲದೇ ಡಿಸೆಂಬರ್ 7 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಂದು ತೆಲಂಗಾಣದಲ್ಲಿ ಚುನಾವಣೆ ಇದ್ದು “ಭೈರವ ಗೀತ’ಗೆ ನಿಮ್ಮ ವೋಟ್ ಮಾಡಿ ಎಂದು ವರ್ಮಾ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
Due to some censor related technical issues, @ThattSidd directed @BhairavaGeetha is now releasing on December 7 th Election Day ..Please vote for #BhairavaGeetha @dhananjayaka @Irra_Mor @AbhishekPicture
— Ram Gopal Varma (@RGVzoomin) November 27, 2018
ಇನ್ನು ಚಿತ್ರದ ಬಿಡುಗಡೆ ದಿನಾಂಕ ಮುಂದೂಡುತ್ತಿರುವುದು ಇದು ಎರಡನೇ ಬಾರಿ. ಈ ಮುನ್ನ “ಅರವಿಂದ ಸಮೇತ’ ಸಿನಿಮಾ ಬಿಡುಗಡೆ ದಿನದಂದೇ “ಭೈರವ ಗೀತ’ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಮತ್ತೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. “ಭೈರವ ಗೀತ’ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದ್ದು, ಧನಂಜಯ್ ಎದುರಿಗೆ ನಾಯಕಿಯಾಗಿ ಐರಾ ಮೋರಾ ನಟಿಸಿದ್ದಾರೆ.
ಭಾಸ್ಕರ್ ರಾಶಿ ಹಾಗೂ ರಾಮ್ಗೋಪಾಲ್ ವರ್ಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಮ್ಗೋಪಾಲ್ ವರ್ಮಾ ಶಿಷ್ಯ ಸಿದ್ದಾರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಜಜೀವನದಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದ್ದು, ರಾಶಿ ಕಂಬೈನ್ಸ್ ಹಾಗೂ ಕಂಪೆನಿ ಪ್ರೊಡಕ್ಷನ್ಸ್‌ನಡಿ ಚಿತ್ರ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್ ಅಂಡ್ ಔಟ್ ಲವ್‌ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್‌ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.