ಹದಿನೆಂಟರಂದು ಅನಾವರಣಗೊಳ್ಳಲಿದೆ ದೃಶ್ಯವೈಭವದ ಭರಾಟೆ!
Team Udayavani, Oct 16, 2019, 6:09 PM IST
ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಟಿಸಿರೋ ಭರಾಟೆ ಈ ವಾರ ಅಂದರೆ ಹದಿನೆಂಟನೇ ತಾರೀಕಿನಂದು ತೆರೆಗಾಣಲಿದೆ. ಮುಹೂರ್ತ ಕಂಡ ದಿನದಿಂದ, ಚಿತ್ರೀಕರಣ ಶುರುವಾದಂದಿನಿಂದಲೇ ಈ ಚಿತ್ರ ಪಡೆದುಕೊಂಡಿದ್ದ ಪ್ರಚಾರದ ಭರಾಟೆ ಸಣ್ಣ ಮಟ್ಟದ್ದಲ್ಲ. ಬರ ಬರುತ್ತಾ ಇದರ ಸ್ಟಿಲ್ಲುಗಳು, ಟ್ರೇಲರ್ ಮೂಲಕ ದೃಶ್ಯ ವೈಭವದ ಝಲಕ್ಕುಗಳು ಕೂಡಾ ಅನೂಚಾನವಾಗಿಯೇ ಅನಾವರಣಗೊಳ್ಳುತ್ತಾ ಬಂದಿವೆ. ಹೀಗೆ ರಿಚ್‌ನೆಸ್ ಕಾರಣದಿಂದ ಭರಾಟೆ ಸದ್ದು ಮಾಡುತ್ತಿದ್ದರೆ ಅದರ ಕ್ರೆಡಿಟ್ಟು ಛಾಯಾಗ್ರಾಹಕರಾದ ಭುವನ್ ಗೌಡ ಅವರಿಗೇ ಸಲ್ಲಬೇಕು.
ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಪಡೆದುಕೊಂಡಿದ್ದ ಸ್ಟಿಲ್ ಫೋಟೋಗ್ರಾಫರ್ ಆಗಿದ್ದವರು ಭುವನ್ ಗೌಡ. ಸ್ವರ್ಗದಿಂದ ಸೀದಾ ಬಂದು ಕಣ್ಣೆದುರು ನಿಂತಂಥಾ ಫ್ರೆಶ್‌ನೆಸ್ ಹೊಂದಿರೋ ಫೋಟೋಗಳನ್ನು ಕ್ಲಿಕ್ಕಿಸೋದರಲ್ಲಿ ಭುವನ್ ಗೌಡ ಮಾಸ್ಟರ್ ಪೀಸ್. ಇವರಿಂದ ಫೋಟೋ ತೆಗೆಸಿಕೊಳ್ಳಲು ಪೈಪೋಟಿಯೇ ನಡೆಯುತ್ತಿತ್ತು. ಹೀಗಿರುವಾಗಲೇ ಸಿನಿಮಾ ಛಾಯಾಗ್ರಾಹಕರಾಗಿ ಎಂಟ್ರಿ ಕೊಟ್ಟಿರೋ ಭುವನ್ ಗೌಡ ಕೆಜಿಎಫ್ ಚಿತ್ರದಿಂದ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಅವರೇ ಭರಾಟೆಗೂ ಛಾಯಾಗ್ರಹಣ ಮಾಡಿದ್ದರೆಂದ ಮೇಲೆ ಅದು ವಿಭಿನ್ನವಾಗಿಯೇ ಮೂಡಿ ಬಂದಿರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅದು ಈಗಾಗಲೇ ಟ್ರೇಲರ್ ಮೂಲಕ ಋಜುವಾತಾಗಿದೆ.
ಸ್ಟಿಲ್ ಫೋಟೋಗ್ರಫಿ ಮಾಡುತ್ತಿದ್ದ ಕಾಲದಲ್ಲಿಯೂ ಭುವನ್ ಗೌಡ ಕ್ರಿಯಾಶೀಲತೆಗೆ ಹೆಸರಾಗಿದ್ದವರು. ಅವರು ಛಾಯಾಗ್ರಾಹಕರಾಗಿ ಗೆದ್ದಿದ್ದರ ಹಿಂದೆಯೂ ಅಂಥಾದ್ದೇ ಶ್ರದ್ಧೆ ಬೆರೆತ ಕ್ರಿಯಾಶೀಲತೆಯೇ ಪ್ರಧಾನ ಪಾತ್ರ ವಹಿಸಿದೆ. ಭಯರಾಟೆ ಚಿತ್ರ ಈ ಕಾರಣದಿಂದಲೇ ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿದೆ. ಚೇತನ್ ಕುಮಾರ್ ಅವರಂಥಾ ಕನಸುಗಾರ ನಿರ್ದೇಶಕ, ಸಿನಿಮಾ ಚೆಂದಗಾಣಲು ಕಾಸು ಹೂಡೋದಕ್ಕೆ ಹಿಂದೆ ಮುಂದೆ ನೋಡದ ನಿರ್ಮಾಪಕ ಸುಪ್ರೀತ್ ಮತ್ತು ಭುವನ್ ಗೌಡರ ಸಮಾಗಮವಾದರೆ ಅಲ್ಲಿ ಭರಾಟೆಯಂಥಾ ದೃಶ್ಯ ಕಾವ್ಯವೊಂದು ಸಿದ್ಧಗೊಳ್ಳದಿರಲು ಸಾಧ್ಯವೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.