ಇದೇ 18ರಿಂದ ಭರಾಟೆ ಅಬ್ಬರಕ್ಕೆ ಆರಂಭ!
Team Udayavani, Oct 12, 2019, 2:24 PM IST
ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಭರಾಟೆ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್‌ನ ಭರಾಟೆಯೇನು ಸಾಮಾನ್ಯದಲ್ಲ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಚಿತ್ರಗಳೆಂದರೇನೇ ಮಾಸ್ ಕಥನ ಹೊಂದಿರುತ್ತವೆಂಬ ಭಾವನೆ ಪ್ರೇಕ್ಷಕರಲ್ಲಿದೆ. ರೋರಿಂಗ್ ಸ್ಟಾರ್ ಅಭಿಮಾನಿಗಳೂ ಕೂಡಾ ಅಂಥಾ ಇಮೇಜಿನಲ್ಲಿಯೇ ತಮ್ಮಿಷ್ಟದ ನಟನನ್ನು ಕಣ್ತುಂಬಿಕೊಳ್ಳಲು ಕಾತರದಿಂದಿರುತ್ತಾರೆ. ಭರಾಟೆಯಲ್ಲಿಯಂತೂ ಅಂಥಾ ಕಾತರ ತಣಿಯುವಂಥಾ ಮಾಸ್ ಸನ್ನಿವೇಶಗಳಿವೆ. ಅದರ ಜೊತೆಯಲ್ಲಿಯೇ ಶ್ರೀ ಮುರುಳಿ ಈ ಹಿಂದೆಂದೂ ಕಾಣಿಸಿಕೊಂಡಿರದಂಥಾ ಪಾತ್ರಕ್ಕೂ ಜೀವ ತುಂಬಿದ್ದಾರೆ. ಇಂಥಾ ಹಲವಾರು ವಿಶೇಷತೆಗಳೊಂದಿಗೇ ಈ ಚಿತ್ರ ಇದೇ 18ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಸುಪ್ರೀತ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಅದ್ದೂರಿ ಚಿತ್ರ ಭರಾಟೆ. ಯುವ ನಿರ್ಮಾಪಕರಾದ ಸುಪ್ರೀತ್ ಅದೆಷ್ಟು ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆಂಬುದು ಈಗಾಗಲೇ ಸ್ಪಷ್ಟವಾಗಿಯೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಭರಾಟೆ ಈ ಪಾಟಿ ಭರಾಟೆಯ ಒಡ್ಡೋಲಗದಲ್ಲಿ ಬಿಡುಗಡೆಯ ಹೊಸ್ತಿಲು ತಲುಪಿಕೊಂಡಿರೋದರ ಹಿಂದೆಯೂ ಅದ್ದೂರಿ ನಿರ್ಮಾಣದ ಪಾತ್ರ ಪ್ರಧಾನವಾಗಿದೆ. ಇಂಥಾ ನಿರ್ಮಾಣದ ಸಾಥ್‌ನೊಂದಿಗೆ ಚೇತನ್ ಕುಮಾರ್ ಮಜವಾದ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಮಾಸ್ ಲುಕ್ಕಿನಲ್ಲಿ ಕಂಗೊಳಿಸೋದು ಹೊಸತೇನಲ್ಲ. ಆದರೆ ಈ ಚಿತ್ರದಲ್ಲಿ ಅವರು ಮತ್ತೊಂದು ಭಿನ್ನವಾದ ಶೇಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಭರಾಟೆ ಎಂಬುದು ಮಾಮೂಲಿ ಮೆಥೆಡಿನ ಚಿತ್ರವಲ್ಲ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಇಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿಯ ಮಾಸ್ ಇಮೇಜ್ ಮತ್ತಷ್ಟು ಮಿರುಗಿದೆ. ಅದರ ಜೊತೆ ಜೊತೆಗೇ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಪಾತ್ರದಲ್ಲಿಯೂ ಅವರು ನಟಿಸಿದ್ದಾರೆ. ಈ ಮೂಲಕ ಶ್ರೀ ಮುರುಳಿ ಮತ್ತೊಂದು ಬಗೆಯಲ್ಲಿಯೂ ಪ್ರೇಕ್ಷಕರನ್ನು ತಲುಪಿ, ಅಭಿಮಾನಿಗಳನ್ನು ಖುಷಿಗೊಳಿಸಲು ತಯಾರಾಗಿದ್ದಾರೆ. ಇದೆಲ್ಲ ವಿಶೇಷತೆಗಳೂ ಕೂಡಾ ಇದೇ ತಿಂಗಳ 18ರಂದು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.