ಭರಾಟೆಯ ಕ್ಲೈಮ್ಯಾಕ್ಸ್ ಬಜೆಟ್ ಲೆಕ್ಕ ಕೇಳಿದರೆ ಕಂಗಾಲಾಗುತ್ತೀರಿ!
Team Udayavani, Oct 16, 2019, 5:28 PM IST
ನಿರ್ದೇಶಕರ ಕನಸನ್ನು ತನ್ನದೇ ಅಂದುಕೊಳ್ಳುವ, ವ್ಯವಹಾರವನ್ನು ಮೀರಿದ ಕಲಾ ಪ್ರೇಮ ಹೊಂದಿರೋ ನಿರ್ಮಾಪಕರ ಸಂಖ್ಯೆ ಕಡಿಮೆಯಿದೆ. ಆದರೆ ಅಂಥವರು ಸಿಕ್ಕು ಒಂದು ಸಿನಿಮಾ ನಿರ್ಮಾಣಗೊಂಡಿತೆಂದರೆ ಅದು ಎಲ್ಲ ಕೋನದಿಂದಲೂ ವಿಶೇಷವಾಗಿಯೇ ಇರುತ್ತೆ. ಸದ್ಯ ಇದೇ ವಾರ ಬಿಡುಗಡೆಯಾಗಲಿರೋ ಭರಾಟೆ ಚಿತ್ರವನ್ನು ನಿರ್ಮಾಣ ಮಾಡಿರುವ ಸುಪ್ರೀತ್ ಕೂಡಾ ಅಂಥಾದ್ದೇ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಅವರು ಪ್ರತಿಯೊಂದು ಪ್ರೇಮಿನಲ್ಲಿಯೂ ಅದ್ದೂರಿಯಾಗಿ ಕಾಣುವಂತೆ ಭರಾಟೆಯನ್ನು ರೂಪಿಸಿದ್ದಾರೆ.
ಯಾವ ಚಿತ್ರವೇ ಆದರೂ ಕ್ಲೈಮ್ಯಾಕ್ಸ್ ಇಡೀ ಚಿತ್ರದ ಸಾರ್ಥಕತೆಯನ್ನು ನಿರೂಪಿಸುತ್ತದೆ. ಒಂದಿಡೀ ಚಿತ್ರ ಪರಿಣಾಮಕಾರಿಯಾಗೋದೇ ಅಲ್ಲಿ. ಇದನ್ನು ಮನಗಂಡೇ ಆರಂಭದಿಂದಲೂ ಚಿತ್ರತಂಡ ಅದ್ದೂರಿ ಕ್ಲೈಮ್ಯಾಕ್ಸಿಗೆ ಪ್ಲಾನು ಮಾಡಿಕೊಂಡಿತ್ತು. ಆದರೆ ಅದನ್ನು ಹಾಗೆಯೇ ಸಾಕಾರಗೊಳಿಸೋದಕ್ಕೆ ಬೇಕಾಗಿದ್ದದ್ದು ಯಾವ ನಿರ್ಮಾಪಕರಾದರೂ ಹಿಂದೆ ಮುಂದೆ ಆಲೋಚಿಸುವಂಥಾ ದೊಡ್ಡ ಮೊತ್ತ. ನಿರ್ದೇಶಕ ಚೇತನ್ ಕುಮಾರ್ ಅದಕ್ಕಾಗಿ ಮಾಡಿಕೊಂಡಿದ್ದ ತಯಾರಿಯನ್ನು ಮೆಚ್ಚಿಕೊಂಡೇ ಸುಪ್ರೀತ್ ಅದಕ್ಕೆ ಒಪ್ಪಿಕೊಂಡಿದ್ದರು.
ಅಂದಹಾಗೆ ಈ ಕ್ಲೈಮ್ಯಾಕ್ಸಿಗಾಗಿ ಕೇವಲ ಸೆಟ್‌ಗಾಗಿ ಮಾತ್ರವೇ ಸುಪ್ರೀತ್ ಹೂಡಿರೋ ಬಂಡವಾಳ ಎಂಥವರೂ ಅಚ್ಚರಿಗೊಳ್ಳುವಂತಿದೆ. ಯಾಕೆಂದರೆ ಬರೀ ಸೆಟ್ ಹಾಕೋದಕ್ಕೆ ಖರ್ಚಾಗಿರೋದು ಭರ್ತಿ ಅರವತ್ತು ಲಕ್ಷ ರೂಪಾಯಿ. ಅದುವೇ ಭರಾಟೆಯ ಅದ್ದೂರಿತನಕ್ಕೆ ಹಿಡಿದ ಕನ್ನಡಿಯಂತಿದೆ. ಚೇತನ್ ಕುಮಾರ್ ಅವರೊಂದಿಗೆ ಸುಪ್ರೀತ್‌ರದ್ದು ಹಲವಾರು ವರ್ಷಗಳ ಸ್ನೇಹ . ಅದರಿಂದಾಗಿಯೇ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಭರಾಟೆಯ ಕಥೆಯ ಬಗ್ಗೆ, ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಸುಪ್ರೀತ್ ಖುಷಿ ಹೊಂದಿದ್ದಾರೆ. ಇದೆಲ್ಲವೂ ಈ ವಾರ ಅಂದರೆ ಹದಿನೆಂಟನೇ ತಾರೀಕಿನಂದು ನಿಮ್ಮೆದುರು ಅನಾವರಣಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.