ಟಿಕ್ಟಾಕ್ ಪ್ರಿಯರಿಗಾಗಿ ಭರಾಟೆ “ಯೋ ಯೋ’ ಸಾಂಗ್
Team Udayavani, Sep 2, 2019, 3:03 AM IST
ಡಿಜಿಟಲ್ ಹವಾ ಜೋರಾಗುತ್ತಿದ್ದಂತೆ ಸಿನಿಮಾ ಮಂದಿ ಖುಷಿಯಾಗಿದ್ದಾರೆ. ಬೇರೆ ಬೇರೆ ಆ್ಯಪ್ಗಳ ಮೂಲಕ ಸಿನಿಮಾ ಪ್ರಮೋಶನ್ ಮಾಡುತ್ತಿದ್ದಾರೆ. ಅದರಲ್ಲಿ ಟಿಕ್ಟಾಕ್ ಆ್ಯಪ್ ಕೂಡಾ ಒಂದು. ಯಾವುದಾದರೊಂದು ಚಿತ್ರದ ಹಾಡು, ಡೈಲಾಗ್ ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ಅದು ಟಿಕ್ಟಾಕ್ನಲ್ಲಿ ಮತ್ತಷ್ಟು ಹಿಟ್ ಆಗುತ್ತದೆ. ಇತ್ತೀಚೆಗೆ ಹಾಗೆ ಹಿಟ್ ಆದ ಹಾಡುಗಳಲ್ಲಿ “ಅಯೋಗ್ಯ’ ಚಿತ್ರದ “ಏನಮ್ಮಿ ಏನಮ್ಮಿ’ ಹಾಗೂ “ಸಿಂಗ’ದ “ಶ್ಯಾನೆ ಟಾಪಾಗವ್ಳೆ’ ಹಾಡು ಟಿಕ್ಟಾಕ್ನಲ್ಲಿ ಭರ್ಜರಿ ಹಿಟ್ ಆಗಿತ್ತು.
ಈ ಎರಡೂ ಹಾಡನ್ನು ಬರೆದಿದ್ದು ನಿರ್ದೇಶಕ ಚೇತನ್ ಕುಮಾರ್ ಆದರೆ, ಹಾಡಿದ್ದು ವಿಜಯ ಪ್ರಕಾಶ್. ಈಗ ಈ ಜೋಡಿಯ ಮತ್ತೊಂದು ಸಾಂಗ್ ಬಿಡುಗಡೆಗೆ ರೆಡಿಯಾಗಿದೆ. ವಿಶೇಷವೆಂದರೆ ಟಿಕ್ಟಾಕ್ ಪ್ರಿಯರನ್ನೇ ಗಮನದಲ್ಲಿರಿಸಿ ಈ ಹಾಡು ಮಾಡಲಾಗಿದೆ. ಅದು “ಭರಾಟೆ’ ಚಿತ್ರದ್ದು. ಚೇತನ್ ಕುಮಾರ್ ನಿರ್ದೇಶನದ “ಭರಾಟೆ’ ಚಿತ್ರದ “ಯೋ ಯೋ’ ಎಂಬ ಹಾಡು ಸೆ.05 ರಂದು ಬಿಡುಗಡೆಯಾಗುತ್ತಿದೆ. ಈ ಹಾಡಿನ ವಿಶೇಷವೆಂದರೆ ಟಿಕ್ಟಾಕ್ ಪ್ರಿಯರನ್ನು ಗಮನದಲ್ಲಿರಿಸಿ ಈ ಹಾಡು ಮಾಡಲಾಗಿದೆ.
ಹಾಡಿನ ಬಗ್ಗೆ ಮಾತನಾಡುವ ನಿರ್ದೇಶಕ ಚೇತನ್ ಕುಮಾರ್, “ಈ ಹಿಂದೆ ನಾನು ಬರೆದ ಅನೇಕ ಹಾಡುಗಳು ಟಿಕ್ಟಾಕ್ನಲ್ಲಿ ದೊಡ್ಡ ಹಿಟ್ ಆಗಿವೆ. ಅದರಲ್ಲೂ “ಏನಮ್ಮಿ ಏನಮ್ಮಿ’ ಹಾಗೂ “ಶ್ಯಾನೆ ಟಾಪಾಗವ್ಳೆ’ ಹಾಡು ದೊಡ್ಡ ಹಿಟ್ ಆಗಿದೆ. ಈ ಎರಡೂ ಹಾಡನ್ನು ಹಾಡಿರೋದು ವಿಜಯ ಪ್ರಕಾಶ್. ಈಗ “ಭರಾಟೆ’ಯ “ಯೋ ಯೋ’ ಕೂಡಾ ಅವರ ಧ್ವನಿಯಲ್ಲೇ ಮೂಡಿಬಂದಿದೆ. ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ನಿರೀಕ್ಷೆ ಇದೆ’ ಎನ್ನುವುದು ಚೇತನ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.