ಅನಂತ್‌ನಾಗ್ ಕಂಡಂತೆ ಭಟ್ರು
Team Udayavani, Jan 20, 2019, 6:02 AM IST
ಯೋಗರಾಜ್ ಭಟ್ಟರ ಸಿನಿಮಾ ಎಂದರೆ ಅಲ್ಲಿ ಅನಂತ್‌ನಾಗ್ ಇದ್ದೇ ಇರುತ್ತಾರೆ. ಅದು “ಮುಂಗಾರು ಮಳೆ’ ಯಿಂದ ಹಿಡಿದು “ಮುಗುಳುನಗೆ’ವರೆಗೂ. ದೊಡ್ಡದೋ, ಸಣ್ಣದೋ ಅನಂತ್‌ನಾಗ್ ಅವರಿಗೆ ಒಂದು ಪಾತ್ರವಂತೂ ಇದ್ದೇ ಇರುತ್ತದೆ. ಅನಂತ್‌ನಾಗ್ ಅವರು ಕೂಡಾ ಖುಷಿಯಿಂದ ಒಪ್ಪಿಕೊಂಡು ನಟಿಸುತ್ತಾರೆ. ಈ ಇಬ್ಬರ ಇಷ್ಟು ವರ್ಷದ ಜರ್ನಿಯಲ್ಲಿ ಅನಂತ್‌ನಾಗ್ ಅವರು ಯೋಗರಾಜ್ ಭಟ್ಟರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.
ಅದರಲ್ಲೂ ಭಟ್ಟರ ಕೆಲಸದ ಶೈಲಿಯನ್ನು ತೀರಾ ಹತ್ತಿರದಿಂದ ನೋಡಿದ್ದಾರೆ. ಸದಾ ಹೊಸತನ್ನು ಯೋಚಿಸುತ್ತಾ, ತಾನು ಬರೆದ ದೃಶ್ಯವನ್ನೇ ಬದಲಿಸುತ್ತಾ, ಶೂಟಿಂಗ್ ಸ್ಪಾಟ್‌ನಲ್ಲೇ ಬದಲಾವಣೆ ಮಾಡುತ್ತಾ ಹೊಸದನ್ನು ಯೋಚಿಸುವ ಯೋಗರಾಜ್ ಭಟ್ಟರ ಕೆಲಸದ ಶೈಲಿಯನ್ನು ಅನಂತ್‌ನಾಗ್ ಇಷ್ಟಪಟ್ಟಿದ್ದಾರೆ ಮತ್ತು ಅದಕ್ಕೆ ಒಗ್ಗಿಕೊಂಡಿದ್ದಾರೆ.
ಜೊತೆಗೆ ಈ ಹಿಂದೆ ಭಟ್ಟರು ಬಂದು ಕಥೆ ಹೇಳುವಾಗ ಎರಡು ಕಿವಿಗೊಟ್ಟು ಕಥೆ ಕೇಳುತ್ತಿದ್ದ ಅನಂತ್‌ನಾಗ್ ಈಗ ಭಟ್ಟರಿಗೆ ಒಂದು ಕಿವಿಯನ್ನಷ್ಟೇ ಕೊಟ್ಟು, ಮತ್ತೂಂದು ಕಿವಿಯನ್ನು ಅದರ ಕೆಲಸಕ್ಕೆ ಬಿಡುವುದನ್ನು ಕಲಿತಿದ್ದಾರೆ. ಅದಕ್ಕೆ ಮತ್ತದೇ ಕಾರಣ, ಕ್ಷಣ ಕ್ಷಣಕ್ಕೂ ಬದಲಾಗುವ ಭಟ್ಟರ ಯೋಚನೆಗಳು. ಭಟ್ಟರ ಕೆಲಸದ ಶೈಲಿಯನ್ನು ಅನಂತ್‌ನಾಗ್ ತಮ್ಮದೇ ದಾಟಿಯಲ್ಲಿ ವಿವರಿಸಿದ್ದಾರೆ. ಅದು ಅವರದೇ ಮಾತುಗಳಲ್ಲಿ ಈ ಮಾತಿಗೆ ವೇದಿಕೆಯಾಗಿದ್ದು “ಗಾಳಿಪಟ-2′ ಚಿತ್ರದ ಪತ್ರಿಕಾಗೋಷ್ಠಿ ….
“ನಾನು “ಮುಂಗಾರು ಮಳೆ’ ಟೈಮಲ್ಲಿ ಭಟ್ಟರು ಕಥೆ ಹೇಳಲು ಬಂದರೆ ಎರಡು ಕಿವಿಯನ್ನು ಕೊಡುತ್ತಿದೆ. ಈಗ ಕಥಾ ಕಾಲಕ್ಷೇಪದಲ್ಲಿ ಒಂದು ಕಿವಿಯನ್ನಷ್ಟೇ ಕೊಡುತ್ತೇನೆ. ಇನ್ನೊಂಧು ಕಿವಿ ಅದರ ಪಾಡಿಗೆ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ಕಾರಣ ಭಟ್ಟರ ಜೊತೆ ಇಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ. ಅವರ ಏಳೆಂಟು ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಅವರ ಕೆಲಸದ ಶೈಲಿಯನ್ನು ನಾನು ನೋಡಿದ್ದೇನೆ. ಅವರು ತಾವು ಬರೆದ ದೃಶ್ಯಗಳನ್ನು ಇಂಪ್ರೂವ್ ಮಾಡ್ತಾನೇ ಇರ್ತಾರೆ. ಇವತ್ತು ಹೇಳಿದ್ದು ನಾಳೆ ಇರೋದಿಲ್ಲ.
ನಾಳೆ ಹೇಳಿದ್ದು ನಾಡಿದ್ದು ಇರೋದಿಲ್ಲ. ಅದು ಅವರ ವರ್ಕಿಂಗ್ ಸ್ಟೈಲ್. ಕೆಲವು ನಿರ್ದೇಶಕರು ಸ್ಕ್ರಿಪ್ಟ್ ಅಂತ ಅಂಟಿಕೊಂಡಿರ್ತಾರೆ. ಆದರೆ ಭಟ್ಟರು ಹಾಗೆ ಮಾಡೋದಿಲ್ಲ. ಅವರು ವರ್ಕ್ ಮಾಡ್ತಾನೇ ಇರ್ತಾರೆ. ಸ್ಕೆಲೆಟನ್‌ಗೆ ಮಾಂಸ, ರಕ್ತ ತುಂಬಿಸುತ್ತಾ ಹೋಗೋದನ್ನು ನಾನು ಕಂಡಿದ್ದೇನೆ. ಈಗ ಒಂದು ಬಣ್ಣವಾದರೆ, ಅದನ್ನು ತಿರುಗಿಸಿ ನೋಡಿದಾಗ ಮತ್ತೂಂದು ಬಣ್ಣ … ಅವರ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಭಟ್ಟರ ಶೈಲಿಯನ್ನು ನೋಡಿದ್ದೆªàನೆ. ಆ ಕಾರಣಕ್ಕೆ ನಾನು ಒಂದು ಕಿವಿಯನ್ನಷ್ಟೇ ಕೊಡುತ್ತೇನೆ ಎಂದಿದ್ದು.
ಮಲ್ಪೆಯಿಂದ ಬೆಂಗಳೂರಿಗೆ ವಾಪಾಸ್: “ಪಂಚರಂಗಿ’ಯಲ್ಲಿ ನಡೆದ ಘಟನೆಯನ್ನು ಹೇಳಬೇಕು. ಮಲ್ಪೆಯಲ್ಲಿ ಶೂಟಿಂಗ್ ಇತ್ತು. ನಾನು ಅಲ್ಲಿಗೆ ಹೋಗಿ, ಸ್ಕ್ರಿಪ್ಟ್, ಸೀನ್ ಎಂದಾಗ, ಇಲ್ಲಾ ಬರ್ತದೆ ಆಗ ಬರ್ತದೆ ಅಂತಿದ್ದಾರೆ. ಏಕೆಂದರೆ ಅವರಿಗೆ ಸ್ಕ್ರಿಪ್ಟ್ ಸರಿಯಾಗಿ ಕೂತಿರಲಿಲ್ಲ. ಅದು ಅವರ ಕೆಲಸದ ಶೈಲಿ. ನಾನು ಹೇಳಿದೆ, “ಯೋಗರಾಜ್ ಇದು ಯಾಕೋ ಸರಿ ಹೋಗ್ತಾ ಇಲ್ಲ. ಈ ತರಹದ ಪಾತ್ರಕ್ಕೆ ಇದು ಹೊಂದಿಕೆಯಾಗುತ್ತಿಲ್ಲ’ ಎಂದೆ.
ಆಗ ಭಟ್ಟರು, “ಒಂದು ಕೆಲ್ಸ ಮಾಡ್ತೀನಿ, ನೀವು ಬೆಂಗಳೂರಿಗೆ ಹೋಗಿ. ಒಂದ್ ಹದಿನೈದು ದಿವಸದ ನಂತರ ಬನ್ನಿ. ಅಷ್ಟೊತ್ತಿಗೆ ನಾನು ರೆಡಿಮಾಡಿಟ್ಟಿರ್ತೀನಿ’ ಅಂದ್ರು. ಆ ನಂತರ 15 ದಿನದ ನಂತರ ಶೂಟಿಂಗ್ ಹೋಗಿ ಮುಗಿಸಿಕೊಂಡು ಬಂದೆ. ಈ ತರಹ ನನಗೆ ಬಹಳ ರೂಢಿಯಾಗಿದೆ ಅವರ ಜೊತೆ. ಆದರೆ ಭಟ್ಟರು ಅವರ ಕೆಲಸದಲ್ಲಿ ಖುಷಿಕಾಣುತ್ತಾರೆ ಮತ್ತು ಯಶಸ್ಸು ಕೂಡಾ ಕಂಡಿದ್ದಾರೆ.
ವಾಸ್ತುಪ್ರಕಾರದ ಕೋಪಿಷ್ಠ ಬದಲಾದ: “ವಾಸ್ತುಪ್ರಕಾರ’ ಚಿತ್ರದಲ್ಲೂ ಹೀಗೆ ಆಯಿತು. ಮೊದಲು ಆ ಚಿತ್ರದಲ್ಲಿ ನನ್ನದು ಒಂದು ರೀತಿಯ ಕೋಪಿಷ್ಠ ಬೇಕು ಅಂದರು. ಅದೇ ತರಹ ಎಲ್ಲಾ ಸೀನ್‌ಗಳು ರೆಡಿ ಇತ್ತು. ಇನ್ನೇನು ಶೂಟಿಂಗ್‌ಗೆ ಅರ್ಧಗಂಟೆ ಇದೆ ಎನ್ನುವಷ್ಟರಲ್ಲಿ ಭಟ್ಟರು ಬಂದು, “ಅಲ್ಲಾ ಸಾರ್ ನಾನು ಯೋಚನೆ ಮಾಡಿದೆ. ನಿಮ್ಮನ್ನು ಕೋಪಿಷ್ಠನನ್ನಾಗಿ ಮಾಡಿದರೆ ಸರಿಹೋಗಲ್ಲ.
ನಿಮ್ಮ ಮಹಿಳಾ ಆಡಿಯನ್ಸ್‌ಗೆ ಇಷ್ಟವಾಗಲಿಕ್ಕಿಲ್ಲ. ಒಂದು ಕೆಲ್ಸ ಮಾಡೋಣ ಸಾರ್, ನೀವು ಸಾಫ್ಟ್ ಆಗಿಬಿಡಿ. ಪೂರ್ತಿ ಸಾಫ್ಟ್ ಸಾರ್. ನಿಮ್ಮ ಹೆಂಡತಿಯ ಪಾತ್ರವನ್ನು ಬಹಳ ಕೋಪಿಷ್ಠೆ ಮಾಡುವ’ ಅಂದ್ರು. ಭಟ್ಟರು ಎಲ್ಲರೂ ನಡೆಯೋ ದಾರಿಯಲ್ಲಿ ನಡೆಯಲ್ಲ. ಬೇರೆ ದಾರಿ ಮಾಡಿಕೊಂಡು ಹೋಗುತ್ತಾರೆ. ಅಂಜದೇ ಹೆದರದೇ ಸೋಲಿಗೆ ಭಯಪಡದೇ ಭಿನ್ನವಾಗಿದ್ದನ್ನು ಮಾಡುತ್ತಾ ಮುಂದೆ ಸಾಗುತ್ತಾರೆ.
ಅವರ ಬಹುತೇಕ ಚಿತ್ರದಲ್ಲಿ ಪಾತ್ರ ಕೊಟ್ಟಿದ್ದಾರೆ. ಏನೂ ಇಲ್ಲಾಂದ್ರೆ ಒಂದು ದಿವಸದ ಪಾತ್ರವಾದರೂ ಕೊಡುತ್ತಾರೆ. “ಮುಗುಳುನಗೆ’ಯಲ್ಲಿ ಆರಂಭದ ಮತ್ತು ಕೊನೆಯ ಸೀನ್ ನಂದು. ಮೊದಲನೇ ಸೀನ್‌ನಲ್ಲಿ ಗಣೇಶ ಮಗುವಾಗಿ ಬರ್ತಾನೆ ಕಡೆ ಸೀನ್‌ಬಲ್ಲಿ ಗಣೇಶ ಅಪ್ಪನಾಗಿ ಬರ್ತಾನೆ. ಅವರ ಕೆಲಸದ ಶೈಲಿ ನನಗೆ ಇಷ್ಟ. ಕ್ರಿಯೇಟಿವ್ ಆಗಿ ಯೋಚಿಸುತ್ತಾ ಇಂಪ್ರೂವ್ ಮಾಡ್ತಾನೇ ಇರ್ತಾರೆ. ತನ್ನ ಕಥೆಗೆ ಏನು ಬೇಕು ಅನ್ನೊದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಬರೆದಿದ್ದ ಹಳತಾಯಿತೆಂಬ ಭಾವ: ಅನಂತ್‌ನಾಗ್ ಅವರ ಮಾತುಗಳನ್ನು ಕೇಳಿದ ಭಟ್ರು, “ಅನಂತ್‌ಸಾರ್ ತುಂಬಾ ಚೆನ್ನಾಗಿ ಹೇಳಿದರು. ಹೌದು, ನಾನು ಸೀನ್‌ಗಳನ್ನು ಬದಲಿಸುತ್ತಿರುತ್ತೇನೆ. ಬರೆದಿದ್ದು ಹಳತಾಯಿತೇನೋ ಎಂಬ ಕಾರಣಕ್ಕೆ ಇನ್ನೇನೋ ಹೊಸನ್ನು ಬರೆಯಲು ಹೊರಡುತ್ತೇನೆ’ ಎಂದರು ಭಟ್ಟರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.