ವಿಕ್ಟರಿ-2ನಲ್ಲೂ ಭಟ್ಟರ ಎಣ್ಣೆ ಸಾಂಗ್
Team Udayavani, Sep 23, 2018, 12:22 PM IST
ಯೋಗರಾಜ್ ಭಟ್ಟರು ಈವರೆಗೆ ಸಾಕಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲೂ ಕುಡಿತದ ಕುರಿತಾಗಿಯೂ ಒಂದಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಕೆಲವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ತರಹ ಸದ್ದು ಮಾಡಿದ ಹಾಡಲ್ಲಿ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’ ಹಾಡು ಕೂಡಾ ಒಂದು. ಶರಣ್ ನಾಯಕರಾಗಿರುವ “ವಿಕ್ಟರಿ’ ಚಿತ್ರದ ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಈಗ “ವಿಕ್ಟರಿ-2′ ಬರುತ್ತಿದೆ.
ಸಹಜವಾಗಿಯೇ ಒಂದು ಚಿತ್ರದ ಹಾಡು ಹಿಟ್ ಆಗಿರುವಾಗ, ಅದರ ಮುಂದುವರಿದ ಭಾಗದಲ್ಲೂ ಆ ತರಹದ ಹಾಡನ್ನು ಜನ ನಿರೀಕ್ಷಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ “ವಿಕ್ಟರಿ-2′ ತಂಡ ಆ ತರಹದ ಒಂದು ಮಾಸ್ ಸಾಂಗ್ ಅನ್ನು ಚಿತ್ರೀಕರಿಸಿಕೊಂಡಿದೆ. “ನಾನ್ ಮನೇಗ್ ಹೋಗೋದಿಲ್ಲ..’ ಎಂದು ಆರಂಭವಾಗುವ ಈ ಹಾಡನ್ನು ಯೋಗರಾಜ್ ಭಟ್ಟರು ರಚಿಸಿದ್ದಾರೆ.
ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಕಳೆದ ಬಾರಿಯೂ ಈ ಮೂವರ ಸಮಾಗಮದಲ್ಲಿ ಬಂದ ಹಾಡು ಹಿಟ್ ಆಗಿತ್ತು. ಈಗ “ವಿಕ್ಟರಿ-2′ ಅದೇ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದೆ. ಕಲರ್‌ಫುಲ್ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದು, ಶರಣ್, ಸಾಧುಕೋಕಿಲ ಸೇರಿದಂತೆ ಅನೇಕರು ಸ್ಟೆಪ್ ಹಾಕಿದ್ದಾರೆ.
“ವಿಕ್ಟರಿ-2′ ಚಿತ್ರವನ್ನು ಹರಿಸಂತೋಷ್ ನಿರ್ದೇಶಿಸುತ್ತಿದ್ದು, ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಈ ಚಿತ್ರದಲ್ಲೂ ರವಿಶಂಕರ್ ಪ್ರಮುಖ ಪಾತ್ರ ಮಾಡಿದ್ದಾರೆ. ಜೊತೆಗೆ ಸನ್ನಿವೇಶವೊಂದರಲ್ಲಿ ಶರಣ್ ಹಾಗೂ ರವಿಶಂಕರ್ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ “ಪ್ಲೀಸ್ ಟ್ರಸ್ಟು …’ ಹಾಡು ಹಿಟ್ ಆಗಿದ್ದು, ಇದು ಚಿತ್ರತಂಡದ ವಿಶ್ವಾಸ ಹೆಚ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.