ಕಹಿ ಘಟನೆ ಮೆಲುಕು ಹಾಕಿದ ಭಾವನಾ
Team Udayavani, Jan 11, 2022, 3:43 PM IST
ತಾರೆಯರು ತಮ್ಮ ಜೀವನದ ಸಿಹಿ ಘಟನೆಗಳನ್ನು ಹೆಚ್ಚಾಗಿ ಮೆಲುಕು ಹಾಕುತ್ತಾರೆ. ಅದನ್ನು ಆಗಾಗ್ಗೆ ತಮ್ಮ ಅಭಿಮಾನಿಗಳ ಜೊತೆ ಹಂಚಿ ಕೊಂಡು ಸಂಭ್ರಮಿಸುತ್ತಾರೆ. ಆದರೆ ತಮ್ಮ ಜೀವನದಲ್ಲಿ ನಡೆಯಬಾರದ ಆಘಾತಗಳು, ಕಹಿ ಘಟನೆಗಳನ್ನು ಸಾಮಾನ್ಯವಾಗಿ ತಾರೆಯರು ಬಹಿ ರಂಗವಾಗಿ ಹಂಚಿಕೊಳ್ಳುವುದು ವಿರಳ. ಆದರೆ ನಟಿ ಭಾವನಾ ಮೆನನ್, ತಮ್ಮ ಜೀವನದಲ್ಲಿ ಐದು ವರ್ಷಗಳ ಹಿಂದೆ ನಡೆದ ಕಹಿ ಘಟನೆಯೊಂದನ್ನು ನೆನಪಿಸಿಕೊಂಡು ಅದರ ಬಗ್ಗೆ ಬರೆದುಕೊಂಡಿದ್ದಾರೆ.
2017ರ ಫೆಬ್ರವರಿಯಲ್ಲಿ ಭಾವನಾ ಮೆನನ್ ಶೂಟಿಂಗ್ ಮುಗಿಸಿ ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಅಪಹರಿಸಿ ಸುಮಾರು 2 ಗಂಟೆ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಇದೀಗ ಆ ಘಟನೆ ನಡೆದು 5 ವರ್ಷಗಳ ಬಳಿಕ ಭಾವನಾ ಅದರ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ಮುಂದಿನ ವರ್ಷದಿಂದ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಟಾಟಾ ಗ್ರೂಪ್ ತೆಕ್ಕೆಗೆ
“ಘಟನೆಯೊಂದರಲ್ಲಿ ಬಲಿಪಶುವಾಗಿ ನಂತರ ಬದುಕುಳಿಯುವವರೆಗಿನ ನನ್ನ ಜೀವನದ ಪ್ರಯಾಣ ಸುಲಭವಾಗಿರಲಿಲ್ಲ. ಅಪರಾಧ ಮಾಡದಿದ್ದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಂದಿಗ್ಧ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತಿವೆ. ಇದನ್ನು ನೋಡಿದಾಗ ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ಮನವರಿಕೆ ಆಗಿದೆ. ನ್ಯಾಯ ಗೆಲ್ಲಬೇಕಾದರೆ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಮತ್ತು ಮುಂದೆ ಯಾರೂ ಇಂತಹ ಪರಿಸ್ಥಿತಿಗೆ ಎದುರಾಗದಂತೆ ಮಾಡುವುದಕ್ಕಾಗಿ, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ಇದರಲ್ಲಿ ನನ್ನೊಂದಿಗೆ ನಿಂತಿರುವವರಿಗೆ, ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದಿದ್ದಾರೆ ಭಾವನಾ.
ಅಂದ ಹಾಗೆ, ತಮ್ಮ ಪೋಸ್ಟ್‌ನಲ್ಲಿ ಯಾರ ಮೇಲೂ ನೇರವಾಗಿ ಆರೋಪ ಮಾಡದೆ, ಭಾವನಾ ತಮ್ಮ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳವನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.