ಮತ್ತೆ ಬಿಝಿಯಾದ ಭಾವನಾ ರಾವ್

Team Udayavani, Oct 11, 2021, 9:29 AM IST

bhavana rao

“ಲಾಕ್‌ಡೌನ್‌ ಮುಗಿದ ನಂತರ ನನ್ನ ಸಿನಿಮಾ ಆ್ಯಕ್ಟಿವಿಟಿಸ್‌ ತುಂಬ ಜೋರಾಗಿದೆ. ಕೋವಿಡ್‌ ಮೊದಲ ಲಾಕ್‌ಡೌನ್‌ ಅನೌನ್ಸ್‌ ಆದಾಗ ಏನು ಈ ಥರ ಇದೆ ಅಂಥ ಎಕ್ಸೆ„ಟ್‌ ಆಗಿದ್ದೆ. ಆದ್ರೆ ಎರಡನೇ ಲಾಕ್‌ ಡೌನ್‌ ಅನೌನ್ಸ್‌ ಆದಾಗ ತುಂಬ ಕಷ್ಟವಾಯ್ತು. ನಮಗೆ ಪರಿಚಯವಿರುವವರು, ಫ್ರೆಂಡ್ಸ್‌, ಇಂಡಸ್ಟ್ರಿಯವರು ಹೀಗೆ ತುಂಬ ಜನರನ್ನ ಕಳೆದುಕೊಳ್ಳಬೇಕಾಯ್ತು. ಈಗ ನಿಧಾನವಾಗಿ ಮತ್ತೆ ಭರವಸೆ ಮೂಡಿದೆ. ಸಿನಿಮಾ ಇಂಡಸ್ಟ್ರಿ ಭೂಮ್‌ ಆಗುತ್ತಿದೆ. ನನ್ನ ಕೆಲಸ ಕೂಡ ಡಬಲ್‌ ಆಗ್ತಿದೆ’ – ಇದು ನಟಿ ಭಾವನಾ ರಾವ್‌ ಮಾತು.

ಹೌದು, “ಗಾಳಿಪಟ’ದ ಚಿನಕುರುಳಿ ಹುಡುಗಿ ಭಾವನಾ ರಾವ್‌ ಈಗೇನು ಮಾಡ್ತಿದ್ದಾರೆ? ಇತ್ತೀಚೆಗೆ ಭಾವನಾ ಯಾವ ಸಿನಿಮಾಗಳಲ್ಲೂ ಕಾಣಿಸಿ ಕೊಂಡಿಲ್ಲವಲ್ಲ ಎಂದು ಸಿನಿಪ್ರಿಯರು ಕೇಳುತ್ತಿರುವಾಗಲೇ, ಭಾವನಾ ಹೊಸ ಜೋಶ್‌ನಲ್ಲಿ ಸ್ಕ್ರೀನ್‌ ಮೇಲೆ ಬರೋದಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ಸದ್ಯ ಭಾವನಾ ರಾವ್‌ ಅಭಿನಯದ “ಹೊಂದಿಸಿ ಬರೆಯಿರಿ’ ಚಿತ್ರ ಪೂರ್ಣವಾಗಿದ್ದು ತೆರೆಗೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದರ ಬೆನ್ನಲ್ಲೇ ಭಾವನಾ ಸದ್ದಿಲ್ಲದೆ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಈಗಾಗಲೇ ಸದ್ದಿಲ್ಲದೆ ಮುಗಿದಿದೆ. ಇದಾದ ಬಳಿಕ ವಿಜಯ ರಾಘವೇಂದ್ರ ನಾಯಕನಾಗಿ ಅಭಿನಯಿಸುತ್ತಿರುವ “ಗ್ರೇ ಗೇಮ್ಸ್‌’ ಚಿತ್ರದಲ್ಲೂ ಭಾವನಾ ಸೈಬರ್‌ ಕ್ರೈಂ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಈ ಚಿತ್ರ ಕೂಡ ಸೆಟ್ಟೇರಿದೆ.

ಇದನ್ನೂ ಓದಿ:ಐಪಿಎಲ್‌ ಕ್ವಾಲಿಫೈಯರ್‌-1: 9ನೇ ಸಲ ಫೈನಲ್‌ ತಲುಪಿದ ಚೆನ್ನೈ

ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬಿಝಿಯಾಗುತ್ತಿರುವುದರ ಬಗ್ಗೆ ಮಾತನಾಡುವ ಭಾವನಾ, “ನಿಧಾನವಾಗಿ ಕೋವಿಡ್‌ ಭಯ ದೂರವಾಗ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲೂ ಆ್ಯಕ್ಟಿವಿಟಿಸ್‌ ಜೋರಾಗುತ್ತಿದೆ. ಲಾಕ್‌ಡೌನ್‌ ನಂತರ ಸಾಕಷ್ಟು ಒಳ್ಳೆಯ ಸ್ಕ್ರಿಪ್‌ rಗಳನ್ನು ಕೇಳಿದ್ದೇನೆ. ಈಗಾಗಲೇ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಇನ್ನೂ ಕೆಲವು ಮಾತುಕಥೆಯ ಹಂತದಲ್ಲಿದೆ. ಸುಮಾರು ಒಂದೂವರೆ ವರ್ಷದ ಬಳಿಕ ಈಗ ನನ್ನ ಕೆಲಸ ಕೂಡ ಡಬಲ್‌ ಆಗಿದೆ’ ಎನ್ನುತ್ತಾರೆ.

ಇತ್ತೀಚೆಗೆ ಬರುತ್ತಿರುವ ಆಫ‌ರ್ ಬಗ್ಗೆ ಮಾತನಾಡುವ ಭಾವನಾ, “ಯಾವುದೇ ಸಬೆjಕ್ಟ್ ಆಗಲಿ, ಪಾತ್ರವಾಗಲಿ ಅದು ಮೊದಲು ನನಗೆ ಇಷ್ಟವಾಗಬೇಕು. ಕಥೆ ನನಗೆ ಮೊದಲು ಎಮೋಶನಲ್‌ ಆಗಿ ಕನೆಕ್ಟ್ ಆಗಬೇಕು. ಅಂಥ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಈಗಾಗಲೇ ಒಪ್ಪಿ ಕೊಂಡಿರುವ “ಹೊಂದಿಸಿ ಬರೆಯಿರಿ’, “ಗ್ರೇ ಗೇಮ್ಸ್‌’ ಇನ್ನೂ ಹೆಸರಿಡದ ಸಿನಿಮಾ ಈ ಮೂರರಲ್ಲೂ ಅಂಥ ಕಂಟೆಂಟ್‌ ಇದೆ. ಆ ಸಬೆjಕ್ಟ್ ನನಗೆ ಇಷ್ಟವಾದಂತೆ ಆಡಿಯನ್ಸ್‌ಗೂ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ ಭಾವನಾ ರಾವ್‌.

ಅದೇನೆಯಿರಲಿ, “ಗಾಳಿಪಟ’ ಚಿತ್ರದಲ್ಲಿ ಪಟಪಟನೆ ಮಾತನಾಡಿ ನೋಡುಗರ ಮನಗೆದ್ದ ಭಾವನಾ ರಾವ್‌ ಸದ್ಯ ತುಂಬ ಗಂಭೀರ ಪಾತ್ರಗಳತ್ತ ಮುಖ ಮಾಡು ¤ದ್ದು, ಭಾವನಾ ಅವರ ಇಂಥ ಪಾತ್ರ ಪ್ರಯೋಗ ನೋಡುಗರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಮುಂದೆ ಗೊತ್ತಾಗಲಿದೆ

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.