ಸಿನಿಮಾ, ವೆಬ್‌ ಸೀರಿಸ್‌ನಲ್ಲಿ ಭೂಮಿ ಬಿಝಿ

Team Udayavani, Jan 30, 2022, 1:02 PM IST

ಸಿನಿಮಾ, ವೆಬ್‌ ಸೀರಿಸ್‌ನಲ್ಲಿ ಭೂಮಿ ಬಿಝಿ

ಕಿರುತೆರೆಯ ಬಿಗ್‌ಬಾಸ್‌ನಲ್ಲಿ ಪಟಪಟ ಮಾತನಾಡುತ್ತಾ, ಬಾಯ್ತುಂಬ ನಗುತ್ತಾ ಮನೆ ಎಲ್ಲಾ ಓಡಾಡಿಕೊಂಡಿದ್ದ ಕುಂದಾಪುರದ ಹುಡುಗಿ ಭೂಮಿ ಶೆಟ್ಟಿ, ಈಗ ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ. ಕೇವಲ ನಾಯಕಿ ಪ್ರಧಾನ, ಗ್ಲಾಮರಸ್‌ ಪಾತ್ರಗಳೇ ಬೇಕೆಂದು ಕೂರದೇ, ನಟನೆಗೆ ಅವಕಾಶವಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಭೂಮಿ ಶೆಟ್ಟಿ ಬಿಝಿಯಾಗಿದ್ದಾರೆ.

ಸಿನಿಮಾದ ಜೊತೆಗೆ ವೆಬ್‌ ಸೀರಿಸ್‌ನಲ್ಲೂ ಭೂಮಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಮಾತನಾಡುವ ಭೂಮಿ, ಒಂದು ವೆಬ್‌ ಸೀರಿಸ್‌, ಒಂದು ಸಿನಿಮಾ ಕೆಲಸಗಳು ನಡೀತಾ ಇದೆ. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಷ್‌ ಪೂಜಾರಿ ನಿರ್ದೇಶನದಲ್ಲಿ “ವನಜಾ’ ಎನ್ನುವ ಒಂದು ಕನ್ನಡ ವೆಬ್‌ ಸೀರಿಸ್‌ ಮಾಡಿದ್ದೀನಿ. ಸದ್ಯ ಅದರ ಪೋಸ್ಟರ್‌ ಕೂಡಾ ಲಾಂಚ್‌ ಆಗಿದೆ.

ಇದಲ್ಲದೇ, ರಾಘವೇಂದ್ರ ಶಿರಿಯಾರ್‌ ಅವರ ನಿರ್ದೇಶನದಲ್ಲಿ “ವಸಂತಿ’ ಟೈಟಲ್‌ನ ಒಂದು ಕಲಾತ್ಮಕ ಚಿತ್ರದ ಶೂಟಿಂಗ್‌ ಮುಗಿಸಿದ್ದೇನೆ’ ಎನ್ನುವ ಭೂಮಿ, ಅಲ್ಲಿನ ಪಾತ್ರಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. “ವನಜಾ ಒಂದು ಸ್ತ್ರೀ ಪ್ರಧಾನ ವೆಬ್‌ ಸೀರಿಸ್‌. ಇಡೀ ಕಥೆ ಕರಾವಳಿ ಭಾಗದ ಸುತ್ತ ಸಾಗುತ್ತದೆ. ಮಂಗಳೂರು ಭಾಗದ ಹಳ್ಳಿಯ ಚಿತ್ರಣ ಇದರಲ್ಲಿ ಮೂಡಿಬಂದಿದೆ.

ಒಂದು ಹೆಣ್ಣು ಜೀವನ ನಡೆಸಲು ಗಂಡಿನ ಜೀವನಾಶ್ರಯ ಇರಲೇ ಬೇಕಿಲ್ಲಾ ಎಂಬುದನ್ನು ತೋರಿಸಿಕೊಡುವ ಪಾತ್ರ. ಮನೆಯಲ್ಲಿನ ಜವಾಬ್ದಾರಿಯುತ ಪುರುಷ ನಡೆಸಬೇಕಾದ ಎಲ್ಲ ಕೆಲಸಗಳನ್ನು ಆಕೆ ನಿರ್ವಹಿಸುತ್ತಾಳೆ. ಕಷ್ಟಗಳ, ಊರಿನ ಜನರ ಅವಮಾನದ ನಡುವೆಯೂ ಜೀವನ ಸಾಗಿಸುವ ಛಲಗಾರ್ತಿ ವನಜಾ. ಒಂದು ಎಮೋಶನಲ್‌ ರೋಲರ್‌ ಕೋಸ್ಟರ್‌ ಪ್ರಯಾಣ ಇಲ್ಲಿ ಆಗುತ್ತದೆ. ಇನ್ನು ವಸಂತಿ ಒಂದು ತಾಸಿನ ಚಿತ್ರ, ಕರಾವಳಿ ಭಾಗದ ಗೇರು ಬೀಜ ಫ್ಯಾಕ್ಟರಿಯ ಕೆಲಸಗಾರ ಹುಡುಗಿಯ ಕಥೆ “ವಸಂತಿ’. ಮನೆಯಲ್ಲಿನ ನೂರಾರು ಸಮಸ್ಯೆ, ಬಡತನ, ತಾಯಿ ಅನಾರೋಗ್ಯ.ಇವೆಲ್ಲದರ ನಡುವೆ ಬದುಕಿನಲ್ಲಿ ಬರುವ ಅನಿರೀಕ್ಷಿತ ತಿರುವುಗಳ ಸಂಗಮವೇ ವಸಂತಿ’ ಎನ್ನುತ್ತಾರೆ.

ಪ್ರಯೋಗಶೀಲ ಪಾತ್ರಗಳನ್ನೇ ಆಯ್ಕೆ ಮಾಡಕೊಳ್ಳುವ ಕುರಿತು ಮಾತನಾಡುವ ಭೂಮಿ, “ಓರ್ವ ಕಲಾವಿದನಿಗೆ ಅವನಲ್ಲಿರುವ ಕಲೆಯನ್ನು, ನಟನಾ ಕೌಶಲ್ಯತೆಯನ್ನು ಜನರಿಗೆ ತೋರ್ಪಡಿಸಬೇಕು ಅಂದ್ರೆ ಅವರಿಗೆ ಅಷ್ಟೇ ಪ್ರಯೋಗಾತ್ಮಕ ಪಾತ್ರಗಳೇ ಸಿಗಬೇಕು.ಪರ್ಫಾಮೆನ್ಸ್‌ ಗೆ ಅವಕಾಶಸಿಗಬೇಕು ಅನ್ನೋದು ಪ್ರತಿಕಲಾವಿದನ ಆಸೆ. ಅಂದಾಗಮಾತ್ರ ಕಲಾವಿದರಿಗೆಸಂತೋಷ. ಕೇವಲ ಐದೇನಿಮಿಷ ಮಾತ್ರ ನೀವೂ ಸ್ಕ್ರಿನ್‌ ಮೇಲೆ ಬಂದರೂ ನಿಮ್ಮ ಪಾತ್ರ ನೋಡುಗನ ಸದಾ ಇರಬೇಕುಅನ್ನೋದು ನನ್ನ ಭಾವನೆಹಾಗಾಗಿ ನಾನೂ ಕಥೆ ಪಾತ್ರ ಎರಡುಅದ್ಭುತವಾಗಿರಬೇಕುಎಂದು ಭಾವಿಸುತ್ತೇನೆ’ ಎನ್ನುವುದು ಭೂಮಿ ಮಾತು.

ಟಾಪ್ ನ್ಯೂಸ್

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.