ಕನ್ನಡ ಚಿತ್ರದ ಹಾಡಿಗೆ ಬಿಗ್ ಬಿ ಧ್ವನಿ
Team Udayavani, Mar 15, 2019, 6:12 AM IST
ಬಾಲಿವುಡ್‌ನ ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಗೀತೆಗೆ ಧ್ವನಿಯಾಗಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಬಟರ್ ಫ್ಲೈ’ ಚಿತ್ರದ ಬರುವ ಹಾಡಿಗೆ ಅಮಿತಾಭ್ ಬಚ್ಚನ್ ಧ್ವನಿಯಾಗಿದ್ದು, ಇತ್ತೀಚೆಗೆ ಈ ಹಾಡಿನ ಮುದ್ರಣ ಕಾರ್ಯ ಪೂರ್ಣಗೊಂಡಿದೆ ಎಂದು ಚಿತ್ರದ ನಾಯಕಿ, ಸಹ ನಿರ್ಮಾಪಕಿ ಪಾರುಲ್ ಯಾದವ್ ತಿಳಿಸಿದ್ದಾರೆ.
1978ರಲ್ಲಿ ತೆರೆಕಂಡ “ದೇವದಾಸಿ’ ಚಿತ್ರದ “ಸುಖವೀವ ಸುರಪಾನವಿದು ಸ್ವರ್ಗ ಸಮಾನಂ….’ ಹಾಡು “ಬಟರ್ ಫ್ಲೈ’ ಚಿತ್ರದಲ್ಲಿ ಮರುಬಳಕೆ ಮಾಡಿಕೊಳ್ಳಲಾಗಿದೆ. ಈ ಹಾಡಿಗೆ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮರು ಸಂಗೀತ ಸಂಯೋಜಿಸಿದ್ದು, ರ್ಯಾಪ್ ಶೈಲಿಯಲ್ಲಿರುವ ಈ ಹಾಡನ್ನು ಅಮಿತಾಭ್ ಕಂಠದಲ್ಲಿ ಚಿತ್ರತಂಡ ಹಾಡಿಸಿದೆ. ಇನ್ನು “ಬಟರ್ ಫ್ಲೈ’ ಚಿತ್ರ ಕನ್ನಡದ ಜೊತೆ ತೆಲುಗು ಮತ್ತು ತಮಿಳಿನಲ್ಲೂ ನಿರ್ಮಾಣವಾಗುತ್ತಿದ್ದು, ಇದೇ ಮೇ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.