ಇಂದಿನಿಂದ “ಬಿಗ್‌ಬಾಸ್ ಸೀಸನ್ -7′ ಶುರು
ಸಂಜೆ 6ಕ್ಕೆ ಲಾಂಚ್ - ಪ್ರತಿ ದಿನ 9ಕ್ಕೆ ಕಲರ್ ಕನ್ನಡದಲ್ಲಿ ಪ್ರಸಾರ - 17 ಮಂದಿ ಸೆಲೆಬ್ರೆಟಿಗಳು ಮನೆಯೊಳಗೆ ಲಾಕ್
Team Udayavani, Oct 13, 2019, 3:01 AM IST
ಬಿಗ್‌ಬಾಸ್ ಸೀಸನ್ -7ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಅ.13) ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಅದ್ಧೂರಿಯಾಗಿ ಲಾಂಚ್ ಆಗಲಿದೆ. ಬಳಿಕ ಪ್ರತಿ ರಾತ್ರಿ 9 ಗಂಟೆಗೆ ಬಿಗ್‌ಬಾಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಕಳೆದ ಎರಡು ವರ್ಷಗಳ ಕಾಲ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಬಿಗ್‌ಬಾಸ್ ಶೋ ಈಗ ಮತ್ತೆ ಕಲರ್ಸ್ ಕನ್ನಡಕ್ಕೆ ವಾಪಸ್ಸಾಗಿದೆ. ನೂರು ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ 17 ಮಂದಿ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಡಲಿದ್ದಾರೆ.
ಈ ಹಿಂದಿನ ಒಂದೆರಡು ಸೀಸನ್‌ಗಳಲ್ಲಿ ಸೆಲೆಬ್ರೆಟಿಗಳ ಹೊರತಾಗಿಯೂ ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ, ಈ ಬಾರಿ ಆ ತರಹದ ಸ್ಪರ್ಧಿಗಳಿಗೆ ಅವಕಾಶವಿಲ್ಲ. ಬಿಗ್‌ಬಾಸ್ ಸೀಸನ್ -7ನಲ್ಲಿ ಭಾಗವಹಿಸುವ 17 ಮಂದಿಯೂ ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರೆಟಿಗಳೇ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಲಿದ್ದಾರೆ.
ವಯಾಕಾಂ 18 ಕನ್ನಡ ಎಂಟರ್‌ಟೈನ್ಮೆಂಟ್ ಕ್ಲಸ್ಟರ್‌ನ ಬಿಝಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಪ್ರಕಾರ, ಬಿಗ್‌ಬಾಸ್ ಬೇರೆ ರಿಯಾಲಿಟಿ ಶೋಗಳಿಗಿಂತ ಭಿನ್ನವಾದ ರಿಯಾಲಿಟಿ ಶೋ. “ಬಿಗ್‌ಬಾಸ್ ಶೋ ಇದು ಮನರಂಜನೆ ಹಾಗೂ ಭಾವನೆಗಳ ಹದವಾದ ಮಿಶ್ರಣ. ಹದವಾದ ಮಿಶ್ರಣವನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಆದರೆ, ಎಲ್ಲಾ ಸೆಲೆಬ್ರೆಟಿಗಳನ್ನು ಗೌರವಿಸುವ ಸುದೀಪ್ ಅವರು ನಮ್ಮ ಜೊತೆ ಇರುವುದರಿಂದ ಈ ಸವಾಲನ್ನು ಸ್ವೀಕರಿಸಲು ಕಷ್ಟವಾಗಲಾರದು. ಎಲ್ಲರಿಗೂ ಬುದ್ಧಿ ಹೇಳಬಹುದಾದ ಅವರ ಎತ್ತರದ ಸ್ಥಾನವೇ ಶೋ ನಡೆಸುವ ನಮ್ಮ ಕೆಲಸವನ್ನು ಸರಳವಾಗಿಸಿದೆ’ ಎನ್ನುತ್ತಾರೆ ಪರಮೇಶ್ವರ ಗುಂಡ್ಕಲ್.
ಈಗಾಗಲೇ ಆರು ಸೀಸನ್‌ಗಳನ್ನು ನಡೆಸಿಕೊಟ್ಟು, ಈಗ ಏಳನೇ ಸೀಸನ್‌ಗೆ ಅಣಿಯಾಗಿರುವ ಸುದೀಪ್ ಅವರಿಗೆ ಈಗ ಬಿಗ್‌ಬಾಸ್ ಮನೆ ಜೊತೆ ಒಂದು ನಂಟು ಬೆಳೆದಿದೆಯಂತೆ. ಮುಖ್ಯವಾಗಿ ಬಿಗ್‌ಬಾಸ್ ಶೋ ಸುದೀಪ್ ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದೆಯಂತೆ. ಜೊತೆಗೆ ತಮ್ಮ ಬಗ್ಗೆ ಹೊರಗಡೆ ಇದ್ದ ಅಭಿಪ್ರಾಯವನ್ನೂ ಬದಲಿಸಿದೆಯಂತೆ. “ಬಿಗ್‌ಬಾಸ್ ಮೂಲಕ ನಾನು ಜನರಿಗೆ ಮತ್ತಷ್ಟು ಹತ್ತಿರವಾದೆ. ಜೊತೆಗೆ ನನ್ನ ಬಗ್ಗೆ ಇದ್ದ ಅಭಿಪ್ರಾಯವೂ ಬದಲಾಗಿದೆ.
ಈಗ ಬಿಗ್‌ಬಾಸ್ ಪೇಮೆಂಟ್‌ಗಿಂತ ದೊಡ್ಡ ಕಮಿಟ್‌ಮೆಂಟ್ ಆಗಿದೆ. ಅಲ್ಲಿ ನನಗೆ ಆದ ಒಂದು ಮನೆ ಇದೆ. ಎಲ್ಲೇ ಇದ್ದರೂ ವಾರಾಂತ್ಯದಲ್ಲಿ ಅಲ್ಲಿಗೆ ಬರುತ್ತೇನೆ’ ಎನ್ನುವ ಸುದೀಪ್ ಅವರಿಗೆ ಮೊದಲ ಸೀಸನ್‌ನ ಸ್ಪರ್ಧಿಗಳು ಇಷ್ಟವಂತೆ. ಏಕೆಂದರೆ ಅದು ಕನ್ನಡ ಮೊದಲ ಸೀಸನ್ ಆಗಿದ್ದ ಕಾರಣ ಎಲ್ಲರೂ ಅಮಾಯಕರಾಗಿ, ತಾವು ತಾವಾಗಿಯೇ ಇದ್ದರು. ಯಾರೂ ಕೂಡಾ ಸ್ಟ್ರಾಟಜಿ ಮಾಡಿ, ಮುಖವಾಡ ಹಾಕಿಕೊಂಡು ಆಟವಾಡಿರಲಿಲ್ಲ ಎಂಬುದು ಸುದೀಪ್ ಅವರ ಇಷ್ಟಕ್ಕೆ ಕಾರಣವಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.