Bigg Boss10: ದೊಡ್ಮನೆ ಆಟಕ್ಕೆ ಸ್ನೇಕ್ ಶ್ಯಾಮ್ ಎಂಟ್ರಿ? ಕುತೂಹಲಕ್ಕೆ ನಾಳೆ ತೆರೆ
Team Udayavani, Oct 7, 2023, 6:37 PM IST
ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಇದುವರೆಗೆ ಯಾರೆಲ್ಲಾ ಸ್ಪರ್ಧಿಗಳು ಎನ್ನುವುದರ ಬಗ್ಗೆ ಅಧಿಕೃತವಾಗಿ ಗೊತ್ತಾಗಿಲ್ಲ. ಒಂದಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿದೆ.
ರಕ್ಷಿತ್ ಶೆಟ್ಟಿ ಅವರ ʼ777ಚಾರ್ಲಿʼ ಸಿನಿಮಾದ ಚಾರ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದೆ ಎನ್ನುವುದನ್ನು ವಾಹಿನಿಯೇ ಹೇಳಿದೆ. ಇದರ ಜೊತೆ ಮತ್ತೊಬ್ಬರು ದೊಡ್ಮನೆ ಆಟಕ್ಕೆ ರೆಡಿ ಆಗಿದ್ದಾರೆ. ಕಳೆದ 40 ವರ್ಷಗಳಲ್ಲಿ(1981 ರಿಂದ) ಹಾವುಗಳನ್ನು ಹಿಡಿದು, ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುವ ಸರಳ, ಸಜ್ಜನಿಕೆಯ ಸ್ನೇಕ್ ಶ್ಯಾಮ್ ಎಂದೇ ಖ್ಯಾತರಾಗಿರುವ ಬಾಲಸುಬ್ರಹ್ಮಣ್ಯ(ಮೂಲ ಹೆಸರು) ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಆಗಲಿದ್ದಾರೆ ಎನ್ನಲಾಗಿದೆ.
15-16 ಮಂದಿ ವಿವಿಧ ಕ್ಷೇತ್ರದಿಂದ ಬಿಗ್ ಬಾಸ್ ಮನೆಗೆ ಪ್ರತಿಬಾರಿ ಎಂಟ್ರಿ ಕೊಡುತ್ತಾರೆ. ಈ ಬಾರಿಯೂ ಅಷ್ಟೇ ಮಂದಿ ಸ್ಪರ್ಧಿಗಳಾಗಲಿದ್ದಾರೆ.
ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ತನ್ನ ಜೀವನದ ಬಹುತೇಕ ದಿನಗಳನ್ನು ಹಾವುಗಳ ರಕ್ಷಣೆ ಮಾಡುತ್ತಲೇ ಕಳೆದ ಸ್ನೇಕ್ ಶ್ಯಾಮ್ ಅವರು, ಮೈಸೂರು ಮಾತ್ರವಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾವುಗಳ ರಕ್ಷಣೆಯ ಕಾರ್ಯದಿಂದ ಖ್ಯಾತರಾಗಿರಾಗಿದ್ದಾರೆ. ಬಾಲ್ಯದಿಂದಲೇ ಹಾವುಗಳನ್ನು ಹಿಡಿದು ಕರಗತ ಮಾಡಿಕೊಂಡಿರುವ ಅವರಿಗೆ ಈಗಾಗಲೇ ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.
ಹಾವುಗಳ ಬಗೆಗಿರುವ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಸ್ನೇಕ್ ಶ್ಯಾಮ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಅವರು ಹೋಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗೆಗಿನ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ನಾಳೆ ಸಂಜೆ(ಅ.8 ರಂದು) ಬಿಗ್ ಬಾಸ್ ಕಾರ್ಯಕ್ರಮ ಪ್ರಮಿಯರ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.