Bigg Boss Season-10: ಬಿಗ್‌ಬಾಸ್ ಲೆಕ್ಕಾಚಾರ ಶುರು ಸೀಸನ್-10 ಸುತ್ತ ಎಲ್ಲರ ಚಿತ್ತ
Team Udayavani, Aug 21, 2023, 4:01 PM IST
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಒಂದು ಕಾರ್ಯಕ್ರಮವೆಂದರೆ ಅದು ಬಿಗ್‌ಬಾಸ್. ಖಾಸಗಿ ವಾಹಿನಿಯಲ್ಲಿ ಕಳೆದ 9 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಕಾರ್ಯಕ್ರಮದ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಬಿಗ್‌ಬಾಸ್ 10ನೇ ಸೀಸನ್‌ನ ತಯಾರಿ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಸೆಪ್ಟೆಂಬರ್ ಅಂತ್ಯದಿಂದ ಕನ್ನಡ ಬಿಗ್‌ಬಾಸ್‌ನ 10ನೇ ಆವೃತ್ತಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದರೆ ಈ ಬಾರಿ ಯಾರ್ಯಾರು ಸ್ಪರ್ಧಿಗಳಾಗುತ್ತಾರೆ ಎಂಬ ಕುತೂಹಲವೂ ಹುಟ್ಟಿಕೊಂಡಿದೆ. ಈ ಕುತೂಹಲಕ್ಕೆ ಉತ್ತರವಾಗಿ ಒಂದಷ್ಟು ಹೆಸರುಗಳು ಓಡಾಡುತ್ತಿವೆ. ಕಿರುತೆರೆ ಧಾರಾವಾಹಿ ಮಂದಿಯಿಂದ ಹಿಡಿದು ಕಾಂಟ್ರಾವರ್ಸಿ ಮೂಲಕ ಅಥವಾ ತಮ್ಮ “ಮಾತಿನ ಕೌಶಲ್ಯ’ದಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಅನೇಕರ ಹೆಸರುಗಳು ಈ ಬಾರಿಯೂ ಕೇಳಿಬರುತ್ತಿದೆ.
ಇನ್ನು, ಸತತ 9 ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಸದ್ಯ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಬೆಂಗಳೂರು ಬಿಟ್ಟು, ಹೊರಗಿನ ಚಿತ್ರೀಕರಣವನ್ನು ಮುಗಿಸಿಕೊಳ್ಳುತ್ತಿರುವ ಸುದೀಪ್ ಆ ನಂತರ ಬಿಗ್‌ಬಾಸ್‌ನತ್ತ ಮುಖ ಮಾಡಲಿದ್ದಾರೆ.
ಸೀರಿಯಲ್‌ಗಳಿಗೆ ಕೋಕ್: ಬಿಗ್‌ಬಾಸ್ ಪ್ರಸಾರವಾಗಲು ಆರಂಭವಾದ ನಂತರ ಒಂದಷ್ಟು ಧಾರಾವಾಹಿಗಳು ನಿಂತು ಹೋಗಲಿವೆ. ಸದ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಯಾವ ಧಾರಾವಾಹಿಗೆ ಕೋಕ್ ಕೊಡಲಾಗುತ್ತದೆ ಎಂಬ ಲೆಕ್ಕಾಚಾರಗಳು ಕೂಡಾ ಕಿರುತೆರೆ ವೀಕ್ಷಕರ ಪಾಳಯದಲ್ಲಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.