Bigg Boss: ಊರ ಹಬ್ಬ ‘ಬಿಗ್ ಬಾಸ್ ಸೀಸನ್ 10’ ಆರಂಭಕ್ಕೆ ಡೇಟ್ ಫಿಕ್ಸ್
Team Udayavani, Sep 23, 2023, 12:41 PM IST
ಬೆಂಗಳೂರು: ಕನ್ನಡದ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ 10ನೇ ಸೀಸನ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ.
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರತ್ಯೇಕ ನೋಡುಗರ ವರ್ಗವಿದೆ. ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ ಕಲಾವಿದರು ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿ ನೂರು ದಿನ ಮನೆಯಲ್ಲಿ ಇರುತ್ತಾರೆ.
ಪ್ರತಿವರ್ಷ ಬಿಗ್ ಬಾಸ್ ಕಾರ್ಯಕ್ರಮ ವಿಭಿನ್ನವಾಗಿರುತ್ತದೆ. ಈ ಬಾರಿ ಹತ್ತನೇ ಸೀಸನ್ ಆಗಿರುವುದರಿಂದ ಹಲವು ವಿಶೇಷಗಳು ಈ ಬಾರಿ ಇರಲಿದೆ ಎಂದು ಇತ್ತೀಚೆಗೆ ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿ ಹೇಳಿತ್ತು. ಇದೀಗ ಕಾರ್ಯಕ್ರಮ ಯಾವಾಗದಿಂದ ಆರಂಭವಾಗಲಿದೆ ಎನ್ನುವುದನ್ನು ಹೇಳಿದೆ.
“ಊರ ಹಬ್ಬಕ್ಕೆ ಇಲ್ಲಿದೆ ರೀಸನ್, ಶುರುವಾಗ್ತಿದೆ ಹ್ಯಾಪಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ಅಕ್ಟೋಬರ್ 10 ರಿಂದ” ಎಂದು ಕಿಚ್ಚನ ಸ್ಟೈಲಿಸ್ಟ್ ಲುಕ್ ನೊಂದಿಗೆ ಪ್ರೋಮೋವೊಂದನ್ನು ಹಾಕಿ ಕಾರ್ಯಕ್ರಮ ಆರಂಭದ ದಿನಾಂಕವನ್ನು ರಿವೀಲ್ ಮಾಡಿದೆ.
ಯಾರೆಲ್ಲಾ ಇರಬಹುದು?:
ಪ್ರತಿಬಾರಿ ಬಿಗ್ ಬಾಸ್ ಆರಂಭವಾಗುತ್ತದೆ ಎನ್ನುವಾಗ ಅಲ್ಲೊಂದಿಷ್ಟು ಸ್ಪರ್ಧಿಗಳ ಹೆಸರುಗಳು ಕೇಳಿ ಬರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿಯೂ ಬಿಗ್ ಬಾಸ್ ಸ್ಪರ್ಧೆಗಳು ಯಾರು ಎನ್ನುವುದರ ಬಗ್ಗೆ ಕುತೂಹಲ ಶುರುವಾಗಿದೆ.
ನಾಗಿಣಿ-2 ಸೀರಿಯಲ್ ಮೂಲಕ ಮಿಂಚಿರುವ ನಮ್ರತಾ ಗೌಡ, ಹುಚ್ಚ ಚಿತ್ರದ ನಾಯಕಿ ರೇಖಾ, ಸೋಶಿಯಲ್ ಮೀಡಿಯಾದಲ್ಲಿ ತನ್ನ ಕಂಟೆಂಟ್ ನಿಂದ ಗಮನ ಸೆಳೆದಿರುವ ಭೂಮಿಕಾ ಬಸವರಾಜ್,ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್, ರೂಪ ರಾಯಪ್ಪ ಮುಂತಾದವರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಇನ್ನು ಅನೇಕರ ಹೆಸರಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್.ಅಶೋಕ್
Politics Discussion: ದಿಲ್ಲಿಯಲ್ಲಿ ಜೆಡಿಎಸ್ ಶಾಸಕರು-ಡಿ.ಕೆ.ಶಿವಕುಮಾರ್ ಮುಖಾಮುಖಿ
HMP Virus: ಎಚ್‌ಎಂಪಿ ವೈರಸ್ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.