34 ಲಕ್ಷ ವೋಟ್ ಬಂದ್ರೂ ಬಿಗ್ ಬಾಸ್ ಮನೆಯಲ್ಲಿ ಇರಲ್ಲ ಎಂದ ವರ್ತೂರು; ಈ ವಾರ ಹೋಗೋದು ಇವರೇ?
Team Udayavani, Nov 12, 2023, 10:17 AM IST
ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 10 ಶುರುವಾಗಿ ಒಂದು ತಿಂಗಳು ಮೇಲಾಗಿದೆ. ಮನೆಯಲ್ಲಿ ಸ್ನೇಹಿತರಾಗಿ, ತಂಡವಾಗಿ ಆಡುತ್ತಿದ್ದವರು ನಿಧಾನವಾಗಿ ತನ್ನ ಆಟದ ಗೇರ್ ಬದಲಾಯಿಸಿ ವೈಯಕ್ತಿಕ ಗೆಲುವಿನ ದಡ ದಾಟುವ ಹಂತ ಬಂದಿದೆ.
ಈ ನಡುವೆ ಈ ವಾರ ದೊಡ್ಮನೆಯಿಂದ ಆಚೆಬರುವ ಸ್ಪರ್ಧಿ ಯಾರೆನ್ನುವ ಕುತೂಹಲ ಮೂಡಿದೆ. ಈ ವಾರ ಕಿಚ್ಚನ ಚಪ್ಪಾಳೆಯನ್ನು ಪ್ರತಾಪ್ ಗಳಿಸಿಕೊಂಡಿದ್ದಾರೆ. ಇದರ ಜೊತೆ ಮನೆಯ ಸರಿ ತಪ್ಪುಗಳ ಕಿಚ್ಚ ಮಾತನಾಡಿದ್ದಾರೆ.
ಈ ವಾರ ಭಾಗ್ಯಶ್ರೀ, ಸಂಗೀತಾ, ತನಿಷಾ, ಕಾರ್ತಿಕ್, ತುಕಾಲಿ, ನಮ್ರತಾ, ಇಶಾನಿ, ಸ್ನೇಹಿತ್, ನೀತು, ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದರು. ಇವರಲ್ಲಿ ಪ್ರತಾಪ್ ಟಾಸ್ಕ್ ನಲ್ಲಿ ಗೆದ್ದು ಸಿಕ್ಕ ಪವರ್ ನಿಂದ ಭಾಗ್ಯಶ್ರೀ, ಸಂಗೀತಾ ಹಾಗೂ ತನಿಷಾ ಉಳಿಸಿದ್ದಾರೆ. ಇನ್ನು ನಮ್ರತಾ, ಕಾರ್ತಿಕ್, ತುಕಾಲಿ ಸಂತೂ ಅವರು ಎಲಿಮಿನೇಷನ್ ನಿಂದ ಪಾರಾರಾಗಿದ್ದಾರೆ ಎಂದು ಕಿಚ್ಚ ಹೇಳಿದ್ದಾರೆ.
ಇನ್ನು ಉಳಿದಿರುವ ನೀತು, ಸ್ನೇಹಿತ್, ವರ್ತೂರು ಸಂತೋಷ್, ಇಶಾನಿ ಅವರಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ ಎನ್ನುವುದು ಇಂದು( ಭಾನುವಾರ) ರಾತ್ರಿ ಗೊತ್ತಾಗಲಿದೆ.
ನೀತು ಮನೆಯಿಂದ ಹೊರಬರುತ್ತಾರೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ನೀತು ಮನೆಯಲ್ಲಿ ಚರ್ಚೆಯಲ್ಲಿದ್ದರು.
ಹುಲಿ ಉಗುರು ಪ್ರಕರಣದಿಂದ ಜೈಲು ಸೇರಿ, ಮತ್ತೆ ಬಿಗ್ ಬಾಸ್ ಗೆ ಬಂದ ವರ್ತೂರು ಸಂತೋಷ್, ಕಳೆದ ಕೆಲ ದಿನಗಳಿಂದ ಯಾರೊಂದಿಗೂ ಅಷ್ಟು ಹೊಂದಿಕೊಳ್ಳದೆ ಒಂಟಿಯಾಗಿಯೇ ಇರುತ್ತಿದ್ದರು. ಇದೀಗ ವರ್ತೂರು ಸಂತೋಷ್ ತಾವೇ ಸ್ವಇಚ್ಛೆಯಿಂದ ಮನೆಗೆ ಬರುವುದಾಗಿ ಹೇಳಿದ್ದಾರೆ.
“ಹೊರಗಡೆ ಒಂದು ಘಟನೆ ನಡೆಯಿತು, ಅದರಿಂದ ಹೊರಬಂದು ಇಲ್ಲಿ ಆಡ್ಬೇಕು ಅನ್ಕೊಂಡ್ರು, ಆಗ್ತಾ ಇಲ್ಲ.ನಾನು ಹೊರಗಡೆ ಇರಬೇಕು ಅಂಥ ಇಷ್ಟಪಡ್ತೇನೆ” ಎಂದು ಭಾವುಕರಾಗಿದ್ದಾರೆ.
34 ಲಕ್ಷ ವೋಟ್ ನಿಮಗೆ ಬಂದಿದೆ ಎಂದೇಳಿ, ಕಿಚ್ಚ ಬೇಸರದಿಂದ ಹೋಗುವ ಪ್ರೋಮೊವನ್ನು ತೋರಿಸಲಾಗಿದೆ. ವರ್ತೂರು ಮನೆಯಿಂದ ಹೋಗ್ತಾರ ಇಲ್ವೋ ಎನ್ನುವುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.