ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Team Udayavani, Apr 30, 2024, 12:26 PM IST
ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಹಾಸನದ ಪೆನ್ ಡ್ರೈವ್ ಪ್ರಕರಣ ಸುದ್ದಿಯಲ್ಲಿದೆ. ಪ್ರಭಾವಿ ರಾಜಕಾರಣಿಯೊಬ್ಬರ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಹತ್ತಾರು ಪ್ರತಿಭಟನೆಗಳು ಶುರುವಾಗಿದೆ.
ರಾಜಕೀಯ ಪಕ್ಷಗಳು ಸೇರಿದಂತೆ ಅನೇಕರು ಈ ಕೃತ್ಯ ಎಸೆಗಿದವರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟಿ ಕಸ್ತೂರಿ, ತೆಲುಗು ನಟಿ ಪೂನಂ ಕೌರ್ ಮುಂತಾದ ಕಲಾವಿದರು ಹರಿಹಾಯ್ದಿದ್ದಾರೆ.
ನಟ ಪ್ರಥಮ್ ರಾಜ್ಯದಲ್ಲಿ ಸದ್ದು ಮಾಡಿದ ಪ್ರಕರಣಗಳಿಗೆ ಯಾವಾಗಲೂ ತಮ್ಮ ಪ್ರತಿಕ್ರಿಯೆಯನ್ನು ನೀಡಿ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಾರೆ. ಇತ್ತೀಚೆಗೆ ನೇಹಾ ಹೀರೆಮಠ್ ಪ್ರಕರಣದಲ್ಲೂ ಧ್ವನಿ ಎತ್ತಿದ್ದರು. ಇದೀಗ ಪೆನ್ ಡ್ರೈವ್ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ.
ರಾಜಕಾರಣಿಯೊಬ್ಬರ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ಪ್ರಥಮ್ ಪ್ರತಿಕ್ರಿಯೆ ನೀಡಬೇಕೆಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಟ್ವೀಟ್ ಮಾಡಿರುವ ಅವರು, “ಹಾಸನದ ಘಟನೆ ಅಕ್ಷಮ್ಯ. ತಪ್ಪಿತಸ್ಥರಿಗೆ ಗಲ್ಲು ಆಗಲಿ. ಎಸ್ ಐಟಿಯಲ್ಲಿರುವ ನಾಗಲಕ್ಷ್ಮೀ ಮೇಡಮ್ ಗೆ ಮಹಿಳೆಯರ ಕಾಳಜಿ ಇದೆ. FSIL test ಮಾಡಿದರೆ 4ದಿನದಲ್ಲಿ ವರದಿ ಬರುತ್ತದೆ. ಅಲ್ಲಿರುವ ಧ್ವನಿ ಸಂಬಂಧ ಪಟ್ಟವರದ್ದಾಗಿದರೆ ಶಿಕ್ಷಿಸಿ. ನಾನು ಫಿಲ್ಮ್ ಮಾಡಿ ಸಾಲದಲ್ಲಿದ್ದೇನೆ. ಎಲ್ಲದಕ್ಕೂ ಪ್ರಥಮ್ ನ ಕೇಳಬೇಡಿ. ʼಕರ್ನಾಟಕದ ಅಳಿಯʼ ಫಿಲ್ಮ್ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಎಲ್ಲರೂ ಗೆಲ್ಲಿಸಿ” ಎಂದು ಟ್ವೀಟ್ ಮಾಡಿದ್ದರು.
ಇದಾದ ಬಳಿಕ ಅವರು ಪೆನ್ ಡ್ರೈವ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಪ್ರಚಾರವನ್ನು ಪೆನ್ ಡ್ರೈವ್ ವಿಚಾರವನ್ನು ಹೇಳಿ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಪ್ರಥಮ್ ಹೇಳಿದ್ದೇನು?:
“ಪೆನ್‌ಡ್ರೈವ್ ಬಗ್ಗೆ ಮಾತನಾಡುವ ಟೈಂ ಬಂತು. ಪೆನ್‌ಡ್ರೈವ್ ಇದೆ. ಇದೇ ಪೆನ್‌ಡ್ರೈವ್ ಬಗ್ಗೆ ತಾನೇ ಮಾತಾಡಿ ಮಾತಾಡಿ ಅಂದಿದ್ದು. ಈ ಪೆನ್‌ಡ್ರೈವ್‌ನಲ್ಲಿರು ವಿಡಿಯೋ ನಿಜ. ನಾನು, ಹೀರೊಯಿನ್ ಇಬ್ಬರೂ ಸೇರಿ ಮಾಡಿದಂತಹ ವಿಡಿಯೋ ಇದು. ಈ ಪೆನ್‌ಡ್ರೈವ್ ಇಷ್ಟು ದೊಡ್ಡ ಸಮಸ್ಯೆ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ಜನರ ಬಳಿ ಮುಚ್ಚಿಟ್ಟು ನಾನು ಏನು ಸಾಧಿಸಬೇಕಾದ್ದು ಇಲ್ಲ. ನಾನು ಮಾಡಿಲ್ಲ, ನನ್ನದ್ದಲ್ಲ. ಫೇಕ್ ಅಂತ ನಾನು ಹೇಳಲ್ಲ. “ಈ ಪೆನ್‌ಡ್ರೈವ್‌ನಲ್ಲಿರುವುದು ನಾನೇ. ಆ ನಟಿಯೂ ನಿಜ. ಇದನ್ನು ಸಿಎಂ ಗಮನಕ್ಕೂ ತಂದಿದ್ದೆ. ಅವರು ಮುಂದಿನ ತಿಂಗಳು ಗಮನ ಹರಿಸುತ್ತೇನೆ ಎಂದಿದ್ದರು. ಎಲ್ಲರಿಗೂ ಪೆನ್‌ಡ್ರೈವ್ ಮಾಡಿ ಹಂಚಲು ಸಾಧ್ಯವಿಲ್ಲ. ಒಂದು ಪೆನ್‌ಡ್ರೈವ್ ಬೆಲೆ 600 ರೂ. ಯಾರು ಕೊಡ್ತಾರೆ. ಆದರೂ ನೀವು ನೋಡಬೇಕು. ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ಯೂಟ್ಯೂಬ್‌ನಲ್ಲಿದೆ. ʼಕರ್ನಾಟಕದ ಆಳಿಯʼ ಸಿನಿಮಾದ ಹಾಡುಗಳು ಈ ಪೆನ್ ಡ್ರೈವ್ ನಲ್ಲಿದೆ. ಪೂರ್ತಿ ಸಿನಿಮಾ ಮುಂದಿನ ತಿಂಗಳು ಬರಲಿದೆ” ಎಂದಿದ್ದಾರೆ.
ಪ್ರಥಮ್ ನಿರ್ದೇಶನದ ʼಕರ್ನಾಟಕದ ಆಳಿಯʼ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಪ್ರಥಮ್ ಪೆನ್ ಡ್ರೈವ್ ವಿಚಾರವನ್ನು ಬಳಸಿಕೊಂಡಿದ್ದಾರೆ. ಆದರೆ ಕೆಲವರು ಪ್ರಥಮ್ ಅವರನ್ನು ಇದಕ್ಕಾಗಿ ಟೀಕಿಸಿದ್ದಾರೆ.
‘ಕರ್ನಾಟಕದ ಅಳಿಯ’ ಚಿತ್ರದಲ್ಲಿ ಪ್ರಥಮ್ ಜೊತೆಗೆ ಅಕ್ಷಿತಾ ಬೊಪಯ್ಯ, ರೇಖಾ, ಐಶ್ವರ್ಯಾ ಸೇರಿದಂತೆ ಹಲವರು ನಟಿಸಿದ್ದಾರೆ.
Pen drive ಲಿ ಇರೋ ವೀಡಿಯೋ ನನ್ನದೇ…ನಾನೇ ಒಪ್ಪಿಕೊಳ್ತಾ ಇದೀನಿ;ನಿಮ್ಗೆ ಫ಼ುಲ್ ವೀಡಿಯೋ ಬೇಕಂದ್ರೆ ಇಲ್ಲಿದೆ ಲಿಂಕ್.ನೋಡಿ confirm ಮಾಡ್ಕೊಳಿ;https://t.co/nCiUl6IxH6 pic.twitter.com/HPhAWAusNg
— Olle Hudga Pratham (@OPratham) April 29, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.