ಬಿಲ್ಡಪ್ ಅಂದ್ರೆ ದರ್ಶನ್
Team Udayavani, Jul 30, 2017, 10:24 AM IST
ವಿವಾದಗಳು ಹೇಗೆ, ಎಷ್ಟೊತ್ತಿಗೆ ಹುಟ್ಟಿಕೊಳ್ಳುತ್ತವೆ ಅನ್ನೋದು ಗೊತ್ತಾಗೋದಿಲ್ಲ. ಮಾತನಾಡುವಾಗ ಒಂಚೂರು ಎಚ್ಚರ ತಪ್ಪಿದರೂ ಅದು ದೊಡ್ಡ ವಿವಾದಕ್ಕೆ ಕಾರಣವಾಗುತ್ತದೆ. ಕೆಲ ದಿನಗಳ ಹಿಂದಷ್ಟೇ ಟಾಕ್ ಶೋವೊಂದರ ರ್ಯಾಪಿಡ್ ರೌಂಡ್ನಲ್ಲಿ “ಶೋ ಅಫ್’ ಎಂಬ ಪ್ರಶ್ನೆಗೆ ಯಶ್ ಎಂದು ಉತ್ತರಿಸಿ ನಟಿ ರಶ್ಮಿಕಾ ಮಂದಣ್ಣ ವಿವಾದಕ್ಕೆ ಸಿಲುಕಿದ್ದರು.
ಆ ನಂತರ ಆ ವಿವಾದವನ್ನು ಬಗೆಹರಿಸಲು ಸ್ವತಃ ಯಶ್ ಎಂಟ್ರಿಕೊಟ್ಟಿದ್ದು ನಿಮಗೆ ನೆನಪಿರಬಹುದು. ಈಗ ಅಂತಹ ವಿವಾದಕ್ಕೆ ಸಂಜನಾ ಕಾರಣರಾಗಿದ್ದಾರೆ. ಯಾವ ಸಂಜನಾ ಎಂದರೆ ಬಿಗ್ಬಾಸ್ ಸಂಜನಾ. ಇತ್ತೀಚೆಗೆ ವಾಹಿನಿಯೊಂದರ ಟಾಕ್ಶೋವೊಂದರಲ್ಲಿ ಭಾಗವಹಿಸಿದ ಸಂಜನಾ ರ್ಯಾಪಿಡ್ ರೌಂಡ್ನಲ್ಲಿ “ಬಿಲ್ಡಪ್’ ಎಂದರೆ ಯಾರು ಎಂಬ ಪ್ರಶ್ನೆಗೆ ದರ್ಶನ್ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಂಜನಾ, ದರ್ಶನ್ ಅವರಿಗೆ “ಬಿಲ್ಡಪ್’ ಎಂದು ಹೇಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಚಿತ್ರರಂಗಕ್ಕೆ ಬಂದ ಸಂಜನಾಗೆ ದರ್ಶನ್ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ದರ್ಶನ್ಗೆ ಬಿಲ್ಡಪ್ ಎಂದು ಹೇಳಿದ್ದಕ್ಕೆ ಕೂಡಲೇ ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಸಂಜನಾ ಕುರಿತು ಟ್ರಾಲ್ಗಳು ಕೂಡಾ ಜೋರಾಗಿ ಓಡಾಡಲಾರಂಭಿಸಿದೆ.
ಆದರೆ, ಸಂಜನಾ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಅವರವರ ಅಭಿಪ್ರಾಯ ಅವರವರಿಗೆ ಎಂದು ಆರಂಭದಲ್ಲಿ ಖಡಕ್ ಆಗಿ ಹೇಳಿದ್ದ ಸಂಜನಾ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಗರಂ ಆಗಿರುವುದನ್ನು ನೋಡಿ, ಕೊನೆಗೂ ಕ್ಷಮೆ ಕೇಳಿದ್ದಾರೆ.
“ದರ್ಶನ್ ಸರ್ ಅಥವಾ ಅವರ ಅಭಿಮಾನಿಗಳಿಗೆ ನೋವು ಮಾಡುವ ಯಾವುದೇ ಉದ್ದೇಶ ನನಗಿಲ್ಲ. ಅವರಿಗೆ ಬೇಸರವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನಾನು ದರ್ಶನ್ ಅವರ ಸಿನಿಮಾದಲ್ಲಿ ತುಂಬಾ ಬಿಲ್ಡಪ್ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಅದು ಇಷ್ಟು ದೊಡ್ಡ ವಿವಾದವಾಗುತ್ತದೆ ಎಂದು ಗೊತ್ತಿರಲಿಲ್ಲ. ಆ ಬಗ್ಗೆ ನಾನು ಕ್ಷಮೆ ಯಾಚಿಸುತ್ತಿದ್ದೇನೆ’ ಎನ್ನುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.