Mother Teresa; ವೆಬ್ ಸೀರೀಸ್‌ನಲ್ಲಿ ಮದರ್ ತೆರೇಸಾ ಜೀವನ ಚರಿತ್ರೆ
Team Udayavani, May 18, 2024, 3:20 PM IST
ಬಡವರು ಹಾಗೂ ದೀನದಲಿತರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮದರ್ ತೆರೇಸಾ ಅವರ ಜೀವನ ಚರಿತ್ರೆ ಇದೀಗ ವೆಬ್ ಸರಣಿಯಲ್ಲಿ ಮೂಡಿ ಬರಲಿದೆ. ಸಾಹಿತಿ, ಚಿತ್ರ ಕಥೆಗಾರ ದಿ. ಜಾನ್ ಪಾಲ್ ಪುತ್ತುಸ್ಸೆರಿ ಹಾಗೂ ನಿರ್ದೇಶಕ ಪಿ. ಚಂದ್ರಕುಮಾರ್ ಸೇರಿ ಮೂರು ವರ್ಷಗಳಿಂದ ಇವರ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ಸೀರೀಸ್ ಮಾಡುತ್ತಿದ್ದಾರೆ.
ಮದರ್ ತೆರೇಸಾ ವೆಬ್ ಸರಣಿಯ ಶೀರ್ಷಿಕೆ ಹಾಗೂ ಬ್ಯಾನರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆ ಹೊಂದಿರುವ ಚಂದ್ರಶೇಖರ್ ಅವರು ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಅನ್ನು ಸುಮಾರು 30 ಕೋಟಿ ರೂ.ಗಳ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ವಿಶೇಷವಾಗಿ ಈ ವೆಬ್ ಸರಣಿಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮದರ್ ತೆರೇಸಾ ಅವರ ಬಾಲ್ಯ, ಹರೆಯದ ಜೀವನ ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳಹೊರಟಿದ್ದಾರೆ.
ಮದರ್ ತೆರೇಸಾ ಅವರು ಎಲ್ಲೆಲ್ಲಿ ಹೋಗಿದ್ದರು, ಅವರು ಹೆಜ್ಜೆ ಇಟ್ಟ ನೆಲದಲ್ಲೇ ಶೂಟಿಂಗ್ ಮಾಡಲಾಗುತ್ತಿದೆ. ಅವರು ನೆಲೆಸಿದ್ದ ರೋಮ್, ಜೆರುಸಲೆನಿಯಂ, ಟೆಥ್ಲೆಹೆಮ್, ಮ್ಯಾಸಿಡೋನಿಯಾ, ಯುಕೆ ಮತ್ತು ಇಟಲಿಯಂತಹ ಸ್ಥಳಗಳ ಜೊತೆಗೆ ಮದರ್ ತೆರೇಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ, ಬಿಹಾರ, ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಮೂರು ಸೀಸನ್ ಗಳಲ್ಲಿ ಕಥೆ ಮೂಡಿಬರಲಿದೆ. ಚಿತ್ರದಲ್ಲಿ ಅನಿತಾ ಮೆನನ್, ತನಿಮಾ ಮೆನನ್, ಸಾಫಿ ಕೌರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.