‘ದಿ ಬ್ರಿಡ್ಜ್ ಮ್ಯಾನ್ ‘ ಗಿರೀಶ್ ಭಾರದ್ವಾಜ್ ಬಯೋಪಿಕ್ : ಜೀವನಗಾಥೆಗೆ ಸಿನಿಮಾ ಸ್ಪರ್ಶ
ಪದ್ಮಶ್ರೀ ಪುರಸ್ಕೃತ ಕನ್ನಡಿಗನ ಜೀವನಗಾಥೆಗೆ ಸಿನಿಮಾ ಸ್ಪರ್ಶ
Team Udayavani, Dec 15, 2020, 12:17 PM IST
ಭಾರತದ ಹಲವು ರಾಜ್ಯಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿ, ಲಕ್ಷಾಂತರ ಜನರಿಗೆ ಸಂಪರ್ಕಕಲ್ಪಿಸಿದ “ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು.ಕರ್ನಾಟಕದ ಸುಳ್ಯ ಮೂಲದ ಹೆಮ್ಮೆಯ ಈ ಸಾಧಕನ ಜೀವನ ಈಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.
ಹೌದು, ಗಿರೀಶ್ ಭಾರದ್ವಾಜ್ ಅವರ ಜೀವನ ಮತ್ತು ಸಾಧನೆಯನ್ನು ನಿರ್ದೇಶಕ ಸಂತೋಷ್‌ಕೊಡೆಂಕೇರಿ ತೆರೆಮೇಲೆ ಸಿನಿಮಾ ರೂಪದಲ್ಲಿ ತರುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾಕ್ಕೆ ” ದಿ ಬ್ರಿಡ್ಜ್ ಮ್ಯಾನ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರತಂಡ ಈ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ : ಶಿವರಾಜ್ ಕುಮಾರ್ ಶಿವಪ್ಪ ಲುಕ್ ವೈರಲ್ ಕುತೂಹಲ ಹೆಚ್ಚಿಸಿದ ಚಿತ್ರ
ಇದೇ ವೇಳೆ ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಂತೋಷ್‌ಕೊಡೆಂಕೇರಿ, “ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಅಪರೂಪದ ಸಾಧಕ ಗಿರೀಶ್ ಭಾರದ್ವಾಜ್ ಅವರ ಜೀವನ – ಸಾಧನೆ ಮೇಲೆ ಈ ಸಿನಿಮಾವಾಗುತ್ತಿದೆ. ಸುಮಾರು ನಾಲ್ಕೈದು ವರ್ಷಗಳಿಂದ ಇವರ ಜೀವನ ಸಿನಿಮಾ ಮಾಡಬೇಕೆಂಬ ಕನಸು ಈಗ ನನಸಾಗುತ್ತಿದೆ. ಇದೊಂದು ಬಯೋಪಿಕ್ ಆಗಿರುವುದರಿಂದ, ಚಿತ್ರ ಆದಷ್ಟು ನೈಜವಾಗಿ ಮೂಡಿಬರಲಿದೆ.ಕನ್ನಡ ಮತ್ತು ಹಿಂದಿ ಸೇರಿದಂತೆ ಏಕಕಾಲಕ್ಕೆ ಎರಡು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ’ ಎಂದಿದ್ದಾರೆ.
ಈಗಾಗಲೇ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಜನವರಿ ವೇಳೆಗೆ ಚಿತ್ರದ ಚಿತ್ರೀಕರಣಆರಂಭಿಸುವ ಯೋಜನೆಯಲ್ಲಿದೆ. ಕರ್ನಾಟಕ,ಕೇರಳ, ಒಡಿಸ್ಸಾ ಮೊದಲಾದಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಸದ್ಯ ಚಿತ್ರದಕಲಾವಿದರ ಆಯ್ಕೆಯಲ್ಲಿರುವ ಚಿತ್ರತಂಡ, ಇದೇ ತಿಂಗಳಕೊನೆಗೆ ಚಿತ್ರದ ತಾರಾಬಳಗವನ್ನು ಅಂತಿಮಗೊಳಿಸಲಿದೆ. ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಹಾಡುಗಳಿಗೆ ವಿನಯ್ ಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಧನ್ವಿಕ್ ಗೌಡ ಛಾಯಾಗ್ರಹಣ, ರಘು ಎಸ್. ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.